Thursday 24 May 2018

ಸುಖ ಜೀವನಕ್ಕೆ ಸಪ್ತ ಸೂತ್ರಗಳು :

೧. ಈಗಿನ ಕಾಲ ಪರಿಸ್ಥಿತಿಯಲ್ಲಿ ಹಣ ಬಹಳ ಮುಖ್ಯ. ಆದರೆ ಹಣವನ್ನೇ ಜೀವನದ ಗುರಿ ಮಾಡಿಕೊಳ್ಳಬೇಡಿ. ಕೋಟ್ಯಾಧೀಶರಾಗುವುದು ಬೇಡ. ಸಾಲ ಸೋಲ ಗಳಿಲ್ಲದ ಕೆಲವು ಲಕ್ಷಗಳಾದರೂ ನಿಮ್ಮಬಳಿ ಇರಲಿ. ಯಾವುದನ್ನೂ ಕಾನೂನು ಕಾಯ್ದೆಯ ಚೌಕಟ್ಟಿನೊಳಗೆ ಸಂಪಾದಿಸಿರಿ.

೨. ಬಾಡಿಗೆ ಮನೆ ಎಂದಿಗೂ ನಿಮಗೆ ಖುಷಿತರಲಾರದು. ಅಲ್ಪ ತೃಪ್ತರಾಗಿ ಚಿಕ್ಕದಾದರೂ ಚೊಕ್ಕದಾದ ನಿಮ್ಮದೇ ಒಂದು ಸಣ್ಣ ಸ್ವಂತ ಮನೆ ಮಾಡಿಕೊಳ್ಳಿರಿ. ಸಾಲಮಾಡಿ ಮನೆ ಮಾಡಿದ್ದರೆ ಆದಷ್ಟು ಶೀಫ್ರ ಸಾಲತೀರಿಸಿ ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ.

೩. ಎಲ್ಲಕ್ಕಿಂತಾ ಅತಿಮುಖ್ಯ ನಿಮ್ಮ ಆರೋಗ್ಯ. 
ನಿಮ್ಮ ಆಹಾರ -  ನಿಮ್ಮ ಚಿಂತನೆ ನಿಮ್ಮ ಆರೋಗ್ಯ ನಿರ್ಧರಿಸುತ್ತದೆ. ಆದುದರಿಂದ ಹಿತ ಮಿತ ಆರೋಗ್ಯಯುಕ್ತ  ಸಾತ್ವಿಕ ಆಹಾರ , ವ್ಯಾಯಾಮ , ಧ್ಯಾನ ಹಾಗೂ ಮನಸ್ಸಿಗೆ ಸಕಾರಾತ್ಮಕ ಭಾವನೆ ಉಂಟುಮಾಡುವ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಿರಿ. ಅದರ ಜತೆಗೆ ಮೆಡಿಕಲ್ ಪಾಲಿಸಿ ಮಾಡುವುದನ್ನು ಮರೆಯದಿರಿ.

೪. ವೃಥಾ ಸಣ್ಣಪುಟ್ಟ ವಿಷಯಕ್ಕೆ ವೈದ್ಯರನ್ನಾಗಲಿ , ವಕೀಲರನ್ನಾಗಲಿ,  ರಾಜಕಾರಣಿಗಳನ್ನಾಗಲಿ, ಜ್ಯೋತಿಷ್ಯ , ವಾಸ್ತು ತಜ್ಞ ರನ್ನಾಗಲಿ ಭೇಟಿಮಾಡುವ ದುರಭ್ಯಾಸ ದಿಂದ ದೂರವಿರಿ. ನಿಮ್ಮ ಹಣೆ ಬರಹ ಬದಲಿಸಲೂ ಯಾರಿಂದಲೂ ಸಾಧ್ಯವಿಲ್ಲ.

೫. ನಿಮ್ಮ ೫೦ ರ ಪ್ರಾಯದವರೆಗೆ ಹಣ ಸಂಪಾದನೆ - ಆರೋಗ್ಯ ವರ್ಧನೆಗೆ ಹೆಚ್ಚು ಗಮನ ನೀಡಿರಿ. ನಂತರದ ದಿನ ಪ್ರವಾಸ , ಸಂಗೀತ , ನಾಟಕ , ಸಾಹಿತ್ಯ , ಕಲೆ ಕಡೆ ಹೆಚ್ಚು ಆಸಕ್ತರಾಗಿರಿ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಿರಿ. ಸಾಲ ಮುಕ್ತ ಜೀವನ ನಡೆಸಿರಿ.

೬. ವೃಥಾ ಯಾರೊಂದಿಗೂ ಚರ್ಚೆ, ವಾಗ್ವಾದ ಕ್ಕೆ ಇಳಿಯಬೀಡಿ. ಅಂತಹ ಸ್ಥಳ  ಯಾ ವ್ಯಕ್ತ ಗಳಿಂದ ದೂರ ಇರುವುದು ನಿಮ್ಮ ಆರೋಗ್ಯ ಕ್ಕೆ ಕ್ಷೇಮಕರ.  ನಿಜಕ್ಕೂ ಯಾವುದು ಸತ್ಯವಲ್ಲ - ಯಾವುದು ಸುಳ್ಳಲ್ಲ!! ಆದುದರಿಂದ ನಿಮ್ಮ ಮನಸ್ಸಿಗೆ ಯಾವುದು ಸರಿಯೋ ಅದನ್ನು ಮಾಡಿ.

೭. ಅತಿ ಸಲುಗೆ ಅತಿ ಪ್ರೀತಿ ಯಾರೊಂದಿಗೂ ಬೇಡ. ಎಲ್ಲರೂ ಸ್ವಾರ್ಥಿಗಳೇ! ಇತರರಿಗಿಂತಾ ಮನೆ ಮಂದಿಯನ್ನು ಹೆಚ್ಚು ಪ್ರೀತಿಸಿ.‌
ನಾನು ನನಗಾಗಿ ..ದೇವರು ಎಲ್ಲರಿಗಾಗಿ ಎಂಬಂತೇ ಬಾಳಿರಿ.

Last but not the Least . ಇಂದೇ ನನ್ನ ಕೊನೆಯದಿನ ! ನಾಳೆ ನಾನಿಲ್ಲ !!! ಎಂಬಂತೆ ಕಾಯಾ ವಾಚಾ ಮನಸಾ ಬದುಕಿದಲ್ಲಿ , ನಿಮ್ಮಷ್ಟು ಸುಖಿ ಜಗತ್ತಿನಲ್ಲಿ ಬೇರಾರು ಇರಲಿಕ್ಕೆ ಸಾಧ್ಯ ವಿಲ್ಲ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...