Saturday 14 January 2017

*ಸ್ವಾಮಿ ವಿವೇಕಾನಂದರು*


ರಾಷ್ಟ್ರೀಯ ಯುವ ದಿನದ ಶುಭಾಶಯಗಳು
ಚಿಕಾಗೋದಲ್ಲಿ ವಿವೇಕಾನಂದರು, ಸೆಪ್ಟೆಂಬರ್ ೧೮೯೩. On the left, Vivekananda wrote: "one infinite pure and holy – beyond thought beyond qualities I bow down to thee". ಜನನ 12 ಜನವರಿ 1863 ಕಲ್ಕತ್ತಾ, ಬಂಗಾಳ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ (ಈಗ ಕೋಲ್ಕತಾ, ಪಶ್ಚಿಮ ಬಂಗಾಳ, ಭಾರತ) ಮರಣ 4 ಜುಲೈ 1902 (ತೀರಿದಾಗ ವಯಸ್ಸು ೩೯) ಬೇಲೂರು ಮಠ,ಬಂಗಾಲ ಪ್ರಾಂತ್ಯ, ಬ್ರಿಟಿಷ್ ಇಂಡಿಯಾ (ಈಗ ಪಶ್ಚಿಮ ಬಂಗಾಲ, ಭಾರತ) ಜನ್ಮ ನಾಮ ನರೇಂದ್ರನಾಥ ದತ್ತ Founder of ಬೇಲೂರು ಮಠ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಗುರು ರಾಮಕೃಷ್ಣ ಪರಮಹಂಸ ತತ್ವಶಾಸ್ತ್ರ ವೇದಾಂತ ಸಾಹಿತ್ಯದ ಕೆಲಸಗಳು ರಾಜ ಯೋಗ, ಕರ್ಮ ಯೋಗ,ಭಕ್ತಿ ಯೋಗ ಮತ್ತು ಜ್ಞಾನ ಯೋಗ Prominent Disciple(s) ಸ್ವಾಮೀ ಅಶೋಕಾನಂದ, ಸ್ವಾಮಿ ವಿರಜಾನಂದ, ಸ್ವಾಮಿ ಪರಮಾನಂದ, ಅಳಸಿಂಗ ಪೆರುಮಾಳ್, ಸ್ವಾಮೀ ಅಭಯಾನಂದ,
ಸೋದರಿ ನಿವೇದಿತಾ, ಸ್ವಾಮಿ ಸದಾನಂದ Influence on ಸುಭಾಷ್ ಚಂದ್ರಬೋಸ್, ಅರವಿಂದ ಘೋಷ್, ಭಾಗಾ ಜತಿನ್, ಮಹಾತ್ಮ ಗಾಂಧಿ, ಚಕ್ರವರ್ತಿ ರಾಜಗೋಪಾಲಚಾರಿ, ಜಮ್‍ಶೇಟ್ಜಿ ಟಾಟಾ, ನಿಕೊಲ ಟೆಲ್ಸ, ಸರಹ್ ಬೆರ್ನ್ಹಾರ್ಡ್ತ್, Emma Calvé, ಜಗದೀಶ್ ಚಂದ್ರ ಬೋಸ್ ನುಡಿ ಏಳು ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರಿ. ಹಸ್ತಾಕ್ಷರ
ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಜನನ ಸಂಪಾದಿಸಿ
ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು ೧೮೬೩, ಜನವರಿ ೧೨ರಂದು ಕಲ್ಕತ್ತೆಯಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ‍
ರಾಮಕೃಷ್ಣರ ಜೊತೆಗೆ ಸಂಪಾದಿಸಿ
ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎ‍ಕ್ಸಕರ್ಶನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು. ೧೮೮೧ನೇ ಇಸವಿ ನವೆಂಬರದಲ್ಲಿ ಎಫ್.ಎ(ಲಲಿತಕಲೆ)ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ. ೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು. ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು. ೧೮೮೪ ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು. ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು. ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲಷ್ಟೇ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. ೧೮೮೫ ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು. ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು ೧೮೮೬, ಆಗಸ್ಟ ೧೬ ರಂದು ನಿಧನ ಹೊಂದಿದರು. ರಾಮಕೃಷ್ಣ ಮಠದ ಸ್ಥಾಪನೆ ಸಂಪಾದಿಸಿ
ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿ ದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಯಾಟನೆ ಮೂಲಕ ತುಂಬುತಿದ್ದರು. ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ "ಪ್ರತಿದಿನ ಬೆಳಿಗ್ಗೆ ೩ ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು. ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು" ೧೮೮೧ ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೊಳಗೊಂಡ "ಸಂಗೀತ ಕಲ್ಪತರು "ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆ ಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ. ವಿವೇಕಾನಂದರ ಭಾರತ ಪರ್ಯಟನೆ ಸಂಪಾದಿಸಿ
೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವತ್ ಗೀತೆ ಹಾಗು " ದಿ ಇಮಿಟೆಶ್ನ್ ಒಫ಼್ ಕ್ರಿಸ್ತ್" ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...