Saturday 5 May 2018

ನಾನು ದೇವರತ್ರ ಕೇಳಿದೆ

ನಾನು ದೇವರತ್ರ ಕೇಳಿದೆ -
" ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು?''

ದೇವರು ಹೇಳಿದರು -
" ಮೊದಲು ನೀನು ನಿನ್ನ ಕೋಣೆಯನ್ನು ತಪಾಸಣೆ ಮಾಡಿ ಅರ್ಥಮಾಡಿಕೊ..."

ದೇವರ ಮಾತಿನಂತೆ ನಾನು ನನ್ನ ಕೋಣೆಯಲ್ಲೆಲ್ಲಾ ಕಣ್ಣೋಡಿಸಿದಾಗ ನನ್ನ ಪ್ರಶ್ನೆಗೆ ಉತ್ತರ ನನಗೆ ಸಿಕ್ಕಿತು...

ಮನೆಯ ಮೇಲ್ಛಾವಣಿ ಹೇಳಿತು -
 " ನಿನ್ನ ಗುರಿ ಎತ್ತರವಾಗಿರಬೇಕು..."

ಫ್ಯಾನ್ ಹೇಳಿತು -
 " ಯಾವಾಗಲೂ ಕೂಲ್ ಆಗಿರು..."

ಗಡಿಯಾರ ಹೇಳಿತು -
 " ಸಮಯವು ಬೆಲೆಯುಳ್ಳದ್ದಾಗಿದೆ..."

ಕ್ಯಾಲೆಂಡರ್ ಹೇಳಿತು -
" ದಿನಗಳು ಅತ್ಯಮೂಲ್ಯವಾದದ್ದು ದಿನವನ್ನು ಸದುಪಯೋಗಪಡಿಸಿಕೊ....."

ಪರ್ಸ್ ಹೇಳಿತು -
 " ಮುಂದಿನ ಭವಿಷ್ಯಕ್ಕಾಗಿ ಈಗಿನಿಂದಲೇ ಶೇಖರಿಸಿ ಇಡು....

ಕನ್ನಡಿ ಹೇಳಿತು -
" ನೀನು ಮೊದಲು ನಿನ್ನನ್ನು ಅರ್ಥ ಮಾಡಿಕೊ..."

ದೀಪ ಹೇಳಿತು -
 " ಇತರರಿಗೂ ಬೆಳಕನ್ನು ಹರಡು..."

ಗೋಡೆ ಹೇಳಿತು -
 " ಕೈಲಾದಷ್ಟು ಇತರರ ಭಾರವನ್ನು ಹೋರು..."

ಕಿಟಕಿ ಹೇಳಿತು -
 " ನಿನ್ನ ನೋಟ ದೀರ್ಘ ದೂರದವರೆಗೂ ವ್ಯಾಪಿಸುವಂತಿರಲಿ...."

ನೆಲ ಹೇಳಿತು -
" ಭೂಮಿಯನ್ನು ಪ್ರೀತಿಸು.‌.."

 ಮೆಟ್ಟಿಲು ಹೇಳಿತು - 
 " ಮುಂದೆ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಶ್ರದ್ಧೆಯಿಂದ ಇಡು...."

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...