Thursday 24 May 2018

*ಒಂದು ನಿರ್ಲಕ್ಷ್ಯದ ಪ್ರಮಾದ*

ಮಹಾಭಾರತ ಯುದ್ಧದ ನಂತರ ಎಲ್ಲಾ ಕಾರ್ಯಗಳೂ ಮುಗಿದು ಶ್ರೀಕೃಷ್ಣ ತನ್ನರಮನೆಗೆ ಬಂದಾಗ  ರುಕ್ಮಿಣಿದೇವಿ ಪತಿಯನ್ನು ಎದುರ್ಗೊಂಡು ಈ ರೀತಿ ಪ್ರಶ್ನಿಸುತ್ತಾಳೆ.
 " *ಪಿತಾಮಹ ಭೀಷ್ಮರು ಮತ್ತು ಗುರು ದ್ರೋಣರು* ಅಷ್ಟು ಪ್ರಾಮಾಣಿಕರೂ ಸಜ್ಜನರೂ ಆಗಿದ್ದರೂ ಸಹ ಅವರು ಕೊಲ್ಲಲ್ಪಟ್ಟರು, ಮತ್ತು ನೀನೂ ಅದರ ಭಾಗವಾಗಿದ್ದೆ‌.
ಯಾಕೆ ಹೀಗೆ ? "

ಕೇಶವ - ತನ್ನ ಎಂದಿನ ಮುಗುಳ್ನಗೆಯೊಂದಿಗೆ ಪತ್ನಿಯ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ರುಕ್ಮಿಣೀದೇವಿ ಒತ್ತಾಯಿಸಿದಾಗ ಗಂಭೀರವಾಗಿ ಉತ್ತರಿಸುತ್ತಾನೆ.
" ಸಂಶಯವೇ ಇಲ್ಲ, ಅವರಿಬ್ಬರೂ ಜೀವನದುದ್ದಕ್ಕೂ ಸಜ್ಜನಿಕೆ, ಪ್ರಾಮಾಣಿಕತೆಯ ಪರಮಾವಧಿಯನ್ನು ತಲುಪಿದವರು. ಆದರೆ ಅವರು ಮಾಡಿದ ಒಂದು ತಪ್ಪು ಅವರ ಎಲ್ಲಾ ಪುಣ್ಯ, ಪ್ರಾಮಾಣಿಕತೆಯನ್ನು ನಾಶಮಾಡಿತು. "

*ರುಕ್ಮಿಣೀದೇವಿ* :- ಏನದು ? ಯಾವ ತಪ್ಪು ?

*ಶ್ರೀಕೃಷ್ಣ* :-  " ಒಬ್ಬ ಸ್ತ್ರೀ ಅಸಹಾಯಕಳಾಗಿ ಮಾನಭಂಗಕ್ಕೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಆ ಸಭೆಯಲ್ಲಿ ಆ ಇಬ್ಬರೂ ಹಿರಿಯರೆನಿಸಿಕೊಂಡವರು ಉಪಸ್ಥಿತರಿದ್ದರು. ಆ ಹೀನಕೃತ್ಯವನ್ನು ನಡೆಯದಂತೆ ತಡೆಯುವ ಎಲ್ಲಾ ಅಧಿಕಾರವೂ ಸಾಮರ್ಥವೂ ಅವರಿಗಿತ್ತು‌. ಆದರೂ ಅವರು ತಡೆಯಲಿಲ್ಲ, ಬದಲಿಗೆ ನಿಸ್ಸಹಾಯಕರಂತೆ ಕುಳಿತರು. ಇದೊಂದೇ ಅಪರಾಧ ಅವರ ಎಲ್ಲ ಪುಣ್ಯವನ್ನೂ ಪ್ರಾಮಾಣಿಕತೆಯನ್ನೂ ನಾಶ ಮಾಡಿತು. "

*ರುಕ್ಮಿಣೀದೇವಿ*:- " ಸರಿ, ಮತ್ತೆ ಕರ್ಣ? "  ಕರ್ಣನ ದಾನಶೂರತೆ ಎಲ್ಲರಿಗೂ ಗೊತ್ತಿರುವಂಥದ್ದೇ. ಅವನ ಮನೆಬಾಗಿಲಿಗೆ ಯಾರೇ ಬಂದರೂ ಬರಿಕೈಯಲ್ಲಿ ಹಿಂದಿರುಗುತ್ತಿರಲಿಲ್ಲ.
ಇಂಥವನು ಏಕೆ ಕೊಲ್ಲಿಸಿದೆ ? "

*ಕೇಶವ* :- " ಹೌದು, ಕರ್ಣನ ಮನೆಯಿಂದ ಯಾರೊಬ್ಬರೂ ಬರಿಕೈಯಿಂದ ಹಿಂತಿರುಗಿಲ್ಲ. ಆದರೆ ಬಾಲಕ ಅಭಿಮನ್ಯು ಇಂಥಾ ಅತಿರಥ ಮಹಾರಥರಿರುವ ಸೇನೆಯ ವಿರುದ್ಧ ಏಕಾಂಗಿಯಾಗಿ ಯಶಸ್ವೀ ಹೋರಾಟ ನಡೆಸಿ, ಕೊನೆಗೆ ಸಾಯುವ ಸ್ಥಿತಿ ತಲುಪಿದಾಗ ಹತ್ತಿರದಲ್ಲೇ ಇದ್ದ ಕರ್ಣನಲ್ಲಿ ನೀರು ಕೇಳಿದ. ಕರ್ಣನ ಬಳಿಯಲ್ಲೇ ಒಂದು ಹಳ್ಳದಲ್ಲಿ ಸ್ವಚ್ಛವಾದ ಕುಡಿಯುವ ನೀರಿತ್ತು. ದುರ್ಯೋಧನನ ಸ್ನೇಹಬಂಧಕ್ಕೆ ಸಿಲುಕಿದ ಕರ್ಣ ಸಾಯುತ್ತಿರುವ ವ್ಯಕ್ತಿಗೆ ನೀರು ಕೊಡಲಿಲ್ಲ‌. ದಾನಶೂರತೆಯಿಂದ ಜೀವನಪರ್ಯಂತ ತಾನು ಗಳಿಸಿದ ಪುಣ್ಯವನ್ನು ತನ್ನ ಕೈಯಾರೆ ನಾಶಮಾಡಿಕೊಂಡ.
ಕೊನೆಗೆ ಅದೇ ಹಳ್ಳದಲ್ಲಿ ರಥದ ಚಕ್ರ ಸಿಲುಕಿ ಕರ್ಣ ಕೊಲ್ಲಲ್ಪಟ್ಟ. "
ನಮ್ಮ ಒಂದೇ ಒಂದು ನಿರ್ಲಕ್ಷ್ಯದ ಪ್ರಮಾದ ನಮ್ಮ ಎಲ್ಲಾ ಪುಣ್ಯಗಳನ್ನೂ ನಾಶ ಮಾಡಬಲ್ಲುದು.
ಜೀವನಪರ್ಯಂತ ನಾವು ಗಳಿಸಿದ ಎಲ್ಲಾ ಗೌರವವನ್ನು ಮಣ್ಣುಮುಕ್ಕಿಸಬಹುದು.

ಅಭಿವೃದ್ಧಿಯ ಪಥದಲ್ಲಿ ಕರ್ಮಯೋಗದ ಒಂದು ಸಣ್ಣ ಉದಾಹರಣೆಯಿದು. ಆದ್ದರಿಂದ ಪಾಪ ಪುಣ್ಯಗಳ ಸರಿಯಾದ ಅರಿವಿನೊಂದಿಗೆ ಕರ್ಮಗಳನ್ನು ಆಚರಿಸೋಣ ಮತ್ತು ಅದನ್ನು ಪರಮಪುರುಷನ ಪದತಲದಲ್ಲಿ ಅರ್ಪಿಸೋಣ. ಆ ಮೂಲಕ ಭಗವಂತನ ಕಾರುಣ್ಯ ಪಡೆಯೋಣ.

-- *ಶ್ರೀ ವಿಶ್ವೇಶ ತೀರ್ಥರು*

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...