Wednesday 15 February 2017

Father is a father 😇🙏

*ಅಪ್ಪನ ಬಗ್ಗೆಯೂ ನಾಲ್ಕು ಮಾತುಗಳು.*
-----------------------

ನಿತ್ಯವೂ ನಮಗಾಗಿ ಅಡಿಗೆ ಮಾಡುವ ಅಮ್ಮನ ನೆನಪು ನಮಗೆ ಸದಾ ಇರುತ್ತದೆ.

ಆದರೆ,
_ಜೀವನದುದ್ದಕ್ಕೂ ನಮ್ಮ ಊಟಕ್ಕಾಗಿ ವ್ಯವಸ್ಥೆ ಮಾಡುತ್ತಿರುವ ಅಪ್ಪನನ್ನು ಮರೆಯುತ್ತೇವೆ!_😞

ಅಮ್ಮ ಅಳಬಹುದು. ಆದರೆ ಅಪ್ಪನಿಗೆ ಅಳಲು ಸಾಧ್ಯವಾಗುವದಿಲ್ಲ. ಸ್ವಯಂ ಅವನ ಅಪ್ಪನೇ ಕಾಲವಾದರೂ ಸಹ ಅವನಿಗೆ ಅಳುವುದು ಸಾಧ್ಯ ಆಗುವದಿಲ್ಲ. ಏಕೆಂದರೆ, ಅವನು ತನ್ನ ಚಿಕ್ಕ ಚಿಕ್ಕ ತಮ್ಮಂದಿರ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.

ಅಪ್ಪ ತನ್ನ ತಾಯಿಯನ್ನು ಕಳದುಕೊಂಡಾಗಲೂ ಅಳುವದಿಲ್ಲ. ಏಕೆಂದರೆ, ಅವನ ಅವಿವಾಹಿತ ತಂಗಿಯರಿಗೆ ಆಸರೆಯಾಗಬೇಕಾದ ಹೊಣೆಗಾರಿಕೆ ಅವನಿಗಿದೆ.

ತನ್ನ ಹೆಂಡತಿಯೇ ಅವನನ್ನು ಬಿಟ್ಟು ಹಿಂದಿರುಗದ ದಾರಿಗೆ ಹೋದರೂ ಅಪ್ಪ ಅಳುವದಿಲ್ಲ.

ಏಕೆಂದರೆ,

ಮಕ್ಕಳನ್ನು ಸಂತೈಸಬೇಕಾಗಿರುತ್ತದೆ.

ದೇವಕಿ ಮತ್ತು ಯಶೋದೆಯರ ಗುಣಗಾನ ಮಾಡಲೇಬೇಕು.

ಆದರೆ,

ನದಿಯಲ್ಲಿ ತುಂಬಿದ ನೆರೆಯ ಅಬ್ಬರದಲ್ಲಿ, ತಲೆಯ ಮೇಲೆ ಬುಟ್ಟಿ ಹೊತ್ತುಕೊಂಡು ನಡೆದ ವಸುದೇವನನ್ನು ಮರೆಯಬಾರದಲ್ಲವೇ?

ಶ್ರೀರಾಮನು ನಿಶ್ಚಯವಾಗಿಯೂ ಮಾತೆ ಕೌಸಲ್ಯೆಯ ಪುತ್ರನೇ ಆದರೂ, ರಾಮನ ಅಗಲುವಿಕೆಯ ಕಾರಣ, ಮಿಡುಕಾಡಿ ಪ್ರಾಣತ್ಯಾಗ ಮಾಡಿದವನು ದಶರಥನೇ ತಾನೇ?

ಅಪ್ಪನ ಚಪ್ಪಲಿಯ ಉಂಗುಷ್ಟ ಕಿತ್ತು ಹೋಗಿದ್ದು ಕಂಡಾಗ ಅವನ ಪ್ರೀತಿಯ ಆಳದ ಅರಿವಾಗುತ್ತದೆ.

ಅಪ್ಪನ ತೂತಾದ, ಹರಕು ಒಳ-ಅಂಗಿಯನ್ನು ಗಮನಿಸಿದಾಗ, ಅವನು ನಮ್ಮ ಭಾಗ್ಯದಲ್ಲಿನ ದೋಷಗಳನ್ನು ತಾನೇ ತೆಗೆದುಕೊಂಡಿದ್ದಾನೆಂದೇ ಅನಿಸುತ್ತದೆ.

ಮಗಳಿಗೆ ಸುಂದರ ಉಡುಗೆ ತಂದುಕೊಡುತ್ತಾನೆ, ಮಗನಿಗೆ ಉತ್ತಮ ದರ್ಜೆಯ  ಟ್ರ್ಯಾಕ್ ಸೂಟ್ ಕೊಡಿಸುತ್ತಾನೆ, ಆದರೆ, ತಾನು ಮಾತ್ರ ಹಳೆಯ ಇಜಾರ ಧರಿಸುತ್ತಾನೆ.

ಮಗನು ಕೇಶಕರ್ತನಕ್ಕೆ ೫೦ ರೂ. ಖರ್ಚು ಮಾಡುವುದನ್ನು, ಹಾಗೂ ಮಗಳು ಕೇಶ-ವದನ ಶೃಂಗಾರ ಗೃಹಕ್ಕೆ ಭೇಟಿ ನೀಡುವದನ್ನು, ಅಂತೆಯೇ ಮುಖಕ್ಷೌರ ಮಾಡಲು ಕ್ಷೌರಸಾಬೂನು ಇಲ್ಲದೇ ಹೋದಾಗ ಸ್ನಾನದ ಸಾಬೂನನ್ನೇ ಬಳಸುವ ಅಪ್ಪಂದಿರನ್ನೂ ನೀವು ಕಂಡಿರಬಹುದು!
H
ಅಪ್ಪನ ಆರೋಗ್ಯ ಕೆಡುವದೇ ಇಲ್ಲ.
ಅಕಸ್ಮಾತ್ತಾಗಿ ಅನಾರೋಗ್ಯ ಆದರೂ ಸಹ, ಅವನು ತಕ್ಷಣಕ್ಕೆ ಆಸ್ಪತ್ರೆಗೆ ಹೋಗುವುದೇ ಇಲ್ಲ.
ವೈದ್ಯರು ಒಂದರ್ಧ ತಿಂಗಳ ವಿಶ್ರಾಂತಿ ಪಡೆಯಲು ಸಲಹೆ ನೀಡಿದರೆ, ಅವನ ಹಣೆಯ ಮೇಲಿನ ನಿರಿಗೆಗಳು ಆಳವಾಗುತ್ತವೆ.

ಏಕೆಂದರೆ,

ಅವನಿಗೆ ಮಗಳ ಮದುವೆ ಮಾಡಬೇಕಿದೆ.

ಮಗನ ವಿದ್ಯಾಭ್ಯಾಸ ಇನ್ನೂ ಅಪೂರ್ಣವಾಗಿದೆ.

ಸಾಕಷ್ಟು ವರಮಾನವಿಲ್ಲದಿದ್ದರೂ, ಮಗ/ಮಗಳ ವೈದ್ಯಕೀಯ/ತಾಂತ್ರಿಕ ಶಿಕ್ಷಣಕ್ಕೆ ಪ್ರವೇಶ ಮಾಡಿಸಬೇಕಿದೆ.

ಹೇಗಾದರೂ ಮಾಡಿ ಹಣವನ್ನು ಹೊಂದಿಸಿಕೊಂಡು ಮಗನಿಗೆ ಪ್ರತಿ ತಿಂಗಳೂ ಮಗನಿಗೆ ಕಳಿಸಬೇಕು. (ಅದೇ ಮಗನು ಕೈಗೆ ಹಣ ಸಿಕ್ಕಿದ ಕೂಡಲೇ ತನ್ನ ಗೆಳೆಯರ ಗುಂಪಿಗೆ ಔತಣ ನೀಡುತ್ತಾನೆ!)

ಯಾವುದೇ ಒಂದು ಪರೀಕ್ಷೆಯ ಪರಿಣಾಮ ಬಂದಾಗ ನಮಗೆಲ್ಲ ಅಮ್ಮ ಪ್ರೀತಿಪಾತ್ರಳಾಗಿ ತೋರುತ್ತಾಳೆ. ಏಕೆಂದರೆ, ಅವಳು ನಮ್ಮನ್ನು ಹೊಗಳುತ್ತಾಳೆ, ಮುದ್ದು ಮಾಡುತ್ತಾಳೆ ಹಾಗೂ ನಮ್ಮ ಗುಣವನ್ನು ಕೊಂಡಾಡುತ್ತಾಳೆ.

ಆದರೆ,


ಸದ್ದಿಲ್ಲದಂತೆ ಹೋಗಿ ಸಿಹಿತಿನಿಸಿನ ಪೊಟ್ಟಣವನ್ನು ತೆಗೆದುಕೊಂಡು ಬರುವ ಅಪ್ಪ ಮಾತ್ರ ಕೆಲವೊಮ್ಮೆ ಹಿನ್ನೆಲೆಯಲ್ಲಿಯೇ ಉಳಿದು ಬಿಡುತ್ತಾನೆ.

ಮೊದಲಬಾರಿಗೆ ತಾಯಿಯಾದ ಮೇಲೆ ಅಮ್ಮನಿಗೆ ಬಹಳೇ ಸನ್ಮಾನ-ಸತ್ಕಾರ ದೊರಕುತ್ತದೆ.

ಕಾಳಜಿಪೂರ್ವಕವಾಗಿ ನೋಡಿಕೊಳ್ಳಲಾಗುತ್ತದೆ. (ಇದು ಯೋಗ್ಯ ಹಾಗೂ ಸ್ವಾಭಾವಿಕವೂ ಹೌದು. ಏಕೆಂದರೆ, ಅದಕ್ಕಾಗಿ ಅವಳು ಬಹಳಷ್ಟು ಕಷ್ಟಗಳನ್ನು ಸಹಿಸಿರುತ್ತಾಳೆ.)

 ಆದರೆ,

*ಆಸ್ಪತ್ರೆಯ ಹಜಾರದಲ್ಲಿ, ಆತಂಕದಿಂದ ಆಚೆ-ಈಚೆ ಸುತ್ತಾಡುವ,*

*ಹೊಂದಾಣಿಕೆ ಆಗುವ ಗುಂಪಿನ ರಕ್ತದ ಬಗ್ಗೆ ಚಿಂತಿಸುವ,*

*ಔಷಧಿಗಳ ಸಲುವಾಗಿ ಅತ್ತಿತ್ತ ಓಡಾಡುವ ಅಸಹಾಯಕ ಅಪ್ಪನನ್ನು ಎಲ್ಲರೂ ಉಪೇಕ್ಷೆ ಮಾಡುತ್ತಾರೆ.*

ಪೆಟ್ಟು ತಗಲಿದಾಗ ಅಥವಾ ಸ್ವಲ್ಪ
ಪ್ರಮಾಣದ ಬೆಂಕಿಯ ಉರಿ ತಗಲಿದರೂ, ಓ ಅಮ್ಮಾ ಎಂಬ ಉದ್ಗಾರ ಬಾಯಿಂದ ಹೊರಬೀಳುತ್ತದೆ.

ಆದರೆ,

ನಮ್ಮ ಪಕ್ಕದಲ್ಲಿ ಅತೀ ಸನಿಹದಲ್ಲೇ ಒಂದು ಭಾರೀವಾಹನ ಸವರಿಕೊಂಡು ಹೋದರೆ ಅರೇ ಬಾಪ್ ರೇ (ಅಯ್ಯಯ್ಯಪ್ಪಾ) ಎಂದು ನಮ್ಮ ಬಾಯಿಂದ ಹೊರಡುತ್ತದೆ.*

ವಿಶ್ವದ ಸಕಲ ಅಪ್ಪಂದಿರಿಗೆ ಸಮರ್ಪಿತ.


ಗೆಳೆಯರೇ, ಈ ಬರೆಹ ನಿಮಗೆ ಇಷ್ಟವಾದರೆ ಮರೆಯದೇ ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ.
-----------------------

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...