Monday 4 June 2018

ಕೃಷ್ಣಾರ್ಪಣೆ ಮತ್ತದರ ಮಹತ್ವ

ನಮ್ಮಲ್ಲೊಂದು ಕ್ರಮವಿದೆ, ಯಾವುದೇ ಪೂಜೆಯ ಕೊನೆಗೆ ಅಥವಾ ಯಾವುದೇ ಸೇವೆ ಯಾ ವಸ್ತು ದೇವರಿಗೆ ಅರ್ಪಿಸುವಾಗ "ಕೃಷ್ಣಾರ್ಪಣಮಸ್ತು" ಎಂದು ಹೇಳಿ ತುಳಸಿ ನೀರು ಬಿಟ್ಟು ಸೇವೆ ಯಾ ವಸ್ತುವನ್ನು ದೇವರಿಗೆ ಅರ್ಪಿಸಿ ತುಳಸಿಯನ್ನು ಮಾತ್ರ ಸ್ವೀಕರಿಸುತ್ತೇವೆ. ಯಾಕೇ "ಕೃಷ್ಣಾರ್ಪಣಮಸ್ತು" ಯಾಕಿಲ್ಲ ರಾಮಾರ್ಪಣಮಸ್ತು, ವೆಂಕಟರಮಣಾರ್ಪಣಮಸ್ತು , ಮತ್ಸ್ಯಾರ್ಪಣಮಸ್ತು, ಕೂರ್ಮಾರ್ಪಣಮಸ್ತು, ವರಾಹಾರ್ಪಣಮಸ್ತು, ನರಸಿಂಹಾರ್ಪಣಮಸ್ತು, ವಾಮನಾರ್ಪಣಮಸ್ತು, ಭಾರ್ಗವಾರ್ಪಣಮಸ್ತು, ಬುದ್ಧಾರ್ಪಣಮಸ್ತು, ಕಲ್ಕ್ಯಾರ್ಪಣಮಸ್ತು ಅಥವಾ ಯಾವುದೇ ದೇವರ ಹೆಸರಿನಲ್ಲಿ ಅರ್ಪಣಮಸ್ತು?

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹತ್ವವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ  ದೇವರು ಸಾಮಾನ್ಯ ಜನರಿಗೆ ಶ್ರೀ ಕೃಷ್ಣನಷ್ಟು ಹತ್ತಿರವಾಗಿರಲಿಲ್ಲ. ಶ್ರೀ ಕೃಷ್ಣನು ಅತೀ ಸಾಮಾನ್ಯರಲ್ಲಿ ಸಾಮಾನ್ಯರಿಗೆ ಕೈಗೆ ನಿಲುಕುತ್ತಿದ್ದನು. ಅದಕ್ಕಾಗಿಯೇ ಶ್ರೀ ಕೃಷ್ಣನನ್ನು " ಗೋವಿಂದ" ಎಂದು ಕರೆಯುವುದು.

ಗೋವಿಂದ ಎಂದರೆ ಗೋಪಾಲಕನಲ್ಲ. "ಗೋ" ಎಂದರೆ ಇಂದ್ರಿಯ , "ವಿಂದ" ಎಂದರೆ ನಿಲುಕು ಅಥವಾ ಸಿಗು ಎಂಬರ್ಥ. ಯಃ ಇಂದ್ರಿಯಾಣಾಂ ವಿಂದತಿ ಸಃ ಗೋವಿಂದಃ, ಅವನೇ ಶ್ರೀ ಕೃಷ್ಣ.

ಶ್ರೀ ಕೃಷ್ಣಾವತಾರವು ಒಂದು ಸಂಪೂರ್ಣ ಅವತಾರ. ಈ ಅವತಾರದಲ್ಲಿ ದಶಾವತಾರದ ಒಂಬತ್ತು ಅವತಾರಗಳಲ್ಲಿ ಭಗವಂತನು ತೋರಿಸಿದ ಲೀಲೇಗಳೇಲ್ಲವೂ ಇವೆ. ಹಾಗಾಗಿ ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಿದರೆ ಉಳಿದೆಲ್ಲಾ ದೇವರಿಗೂ ಅರ್ಪಿಸಿದಂತೆ. ಹಾಗಾಗಿಯೇ "ಶ್ರೀ ಕೃಷ್ಣಾರ್ಪಣಮಸ್ತು".

ನಮ್ಮಲ್ಲಿ ಕೆಲವರಿಗೂಂದು ಅಭ್ಯಾಸವಿದೆ, ಮನುಷ್ಯ ಸಹಜವಾದ ಅಭ್ಯಾಸ -ಇದು ನಾನು ದೇವರಿಗೆ ಅರ್ಪಿಸಿದ್ದು, ಇದು ನನ್ನದು, ನಾನು ಅತೀ ದೊಡ್ಡ ಕಾಣಿಕೆ ಯಾ ಸೇವೆ ಮಾಡಿದ್ದೇನೇ ನನಗೆ ಅಗ್ರ ಪ್ರಸಾದ ಸಿಗಬೇಕು, ಹೆಸರನ್ನು ಬೋರ್ಡ್ ಮೇಲೆ ಬರೆಯದಿದ್ದರೆ ಕೋಪ ಬರುತ್ತದೆ....ಇತ್ಯಾದಿ.

ಇದೆಲ್ಲವು ನಮ್ಮ ಅಹಂ ತೋರಿಸುತ್ತದೆ. ಒಮ್ಮೆ ದೇವರಿಗೆ ಕೃಷ್ಣಾರ್ಪಣೆ ಆಯಿತೋ ಆ ವಸ್ತು ಯಾ ಸೇವೆ ಯಾ ಪೂಜೆ ದೇವರಿಗೆ ಸೇರಿದ್ದು. ನಮಗೆ ಅದರ ಮೇಲೆ ಯಾವುದೇ ಹಕ್ಕಿಲ್ಲ. ಕೃಷ್ಣಾರ್ಪಣೆಯ ತುಳಸಿಯೋಂದೇ ನಮ್ಮ ಭಾಗಕ್ಕೆ. ಅಹಂಕಾರವನ್ನು ತ್ಯಜಿಸಿ ಕೃಷ್ಣಾರ್ಪಣ ಮಾಡಿದರಂತೂ ಅಮಿತ ಪುಣ್ಯ ಫಲ.

 ಗೋವಿಂದನ ಮುಂದೆ ಅಹಂಭಾವದಿಂದ ವರ್ತಿಸಿದರೆ "for every action there is an equal and opposite reaction". ನಿರಂಹಂಕಾರದಿಂದ ಗೋವಿಂದನ ಮುಂದೆ ವರ್ತಿಸಿದರೆ ಜೀವನದಲ್ಲಿ "only ಭಗವಂತನ ACTION - ಅದುವೇ ದೇವರ ಕೃಪೆ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...