Friday 1 March 2019

*ಗೋವಿನ ೩೨ ಅಂಗಗಳಲ್ಲಿ ವಾಸಿಸುವ ದೇವತೆಗಳು..*

*೧. ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ..*

*೨. ಹಣೆಯ ತುದಿಯಲ್ಲಿ ಪಾರ್ವತಿಯ ವಾಸ..*

*೩. ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ..*

*೪. ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ..*

*೫. ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ..*

*೬. ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ..*

*೭. ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ..*

*೮. ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ..*

*೯. ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ..*

*೧೦. ನಾಲಗೆಯಲ್ಲಿ ವರುಣನ ವಾಸ..*

*೧೧. ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ..*

*೧೨. ತುಟಿಗಳಲ್ಲಿ ಸಂಧ್ಯಾದೇವತೆ ವಾಸ..*

*೧೩. ಕುತ್ತಿಗೆಯಲ್ಲಿ ಇಂದ್ರನ ವಾಸ..*

*೧೪. ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ..*

*೧೫. ತೊಡೆಯಲ್ಲಿ ಧರ್ಮ ದೇವತೆಯ ವಾಸ..*

*೧೬. ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ..*

*೧೭. ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ..*

*೧೮. ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ..*

*೧೯. ಬೆನ್ನಿನಲ್ಲಿ ರುದ್ರರ ವಾಸ..*

*೨೦. ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ..*

*೨೧. ಬಾಲದಲ್ಲಿ ಸೋಮದೇವತೆಯ ವಾಸ..*

*೨೨. ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ..*

*೨೩. ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ..*

*೨೪. ಗೋಮೂತ್ರದಲ್ಲಿ ಗಂಗೆಯ ವಾಸ..*

*೨೫. ಗೋಮಯದಲ್ಲಿ ಯಮುನೆಯ ವಾಸ..*

*೨೬. ಹಾಲಿನಲ್ಲಿ ಸರಸ್ವತಿಯ ವಾಸ..*

*೨೭. ಮೊಸರಿನಲ್ಲಿ ನರ್ಮದೆಯ ವಾಸ..*

*೨೮. ತುಪ್ಪದಲ್ಲಿ ಅಗ್ನಿಯ ವಾಸ..*

*೨೯. ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ..*

*೩೦. ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ..*

*೩೧. ಉದರದಲ್ಲಿ ಪೃಥ್ವೀ ದೇವತೆಗಳ ವಾಸ..*

*೩೨. ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ..*

*ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ  ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...