Sunday, 31 May 2020

*"ಸಂನ್ಯಾಸ"*

*ಸನ್ಯಾಸದಲ್ಲಿ ನಾಲ್ಕು ವಿಧಗಳು. ಕುಟೀಚಕ, ಬಹೂದಕ, ಹಂಸ ಮತ್ತು ಪರಮಹಂಸ.*

*ಸಂನ್ಯಾಸಿಗಳಿಗೆಂದು ಶ್ರೀ ಶಂಕರಾಚಾರ್ಯರು ದಶನಾಮಿ ಪದ್ಧತಿಯನ್ನು ಪರಿಚಯಿಸಿದರು.*

*1.ತೀರ್ಥ  2.ಆಶ್ರಮ  3.ವನ  4.ಅರಣ್ಯ  5. ಗಿರಿ  6.ಪರ್ವತ 7. ಸಾಗರ  8.ಸರಸ್ವತೀ  9.ಭಾರತೀ ಮತ್ತು 10. ಪುರೀ – ಇವು ಸಂನ್ಯಾಸ ಪರಂಪರೆಯ ಹತ್ತು ಉಪಾಧಿಗಳು.*

*ಈ ದಶನಾಮಗಳನ್ನು ಯಾರಿಗೆ ನೀಡಲಾಗುತ್ತದೆ ಅನ್ನುವ ಕಿರು ವಿವರವು ನಿಮ್ಮ ಮುಂದಿದೆ :*

*ಭಾರತೀ ನಾಮ ವಿದ್ಯಾಭಾರೇಣ ಸಂಪೂರ್ಣಃ ಸರ್ವಭಾರಂ ಪರಿತ್ಯಜೇತ್ |*
*ದುಃಖ ಭಾರಂ ನ ಜಾನತಿ ಭಾರತೀ ಪರಿಕೀರ್ತಿತಃ ||*

*ಯಾವ ವ್ಯಕ್ತಿಯು ವಿದ್ಯೆಯ ಭಾರದಿಂದ ಪರಿಪೂರ್ಣನಾಗಿ, ಪ್ರಪಂಚದ ಸಮಸ್ತ ಭಾರಗಳನ್ನೂ ತ್ಯಜಿಸುತ್ತಾರೋ  ಮತ್ತು ದುಃಖದ ಭಾರವನ್ನು ತಿಳಿದಿರುವುದಿಲ್ಲವೋ ಅವರಿಗೆ ‘ಭಾರತೀ’ ಎಂಬ ಉಪಾಧಿ ನೀಡಲಾಗುತ್ತದೆ.*

*ಸರಸ್ವತೀ ನಾಮ ಸ್ವರಜ್ಞಾನ ವಶೋ ನಿತ್ಯಂ ಸ್ವರವಾದೀ ಕಿವೀಶ್ವರಃ |*
*ಸಂಸಾರ ಸಾಗರೇ ಸಾರಾಭಿಜ್ಞೋ ಯಃ ಸಃ ಸರಸ್ವತೀ ||*

*ಯಾರು ಸ್ವರದ ಜ್ಞಾನವನ್ನು ಹೊಂದಿದ್ದು, ಸಕಲ ವೇದಗಳ ಸ್ವರಗಳನ್ನು ಸಂಪೂರ್ಣವಾಗಿ ತಿಳಿದಿರುತ್ತಾರೋ; ಮತ್ತು ಸಂಸಾರದ ಸತ್ವ ಪರೀಕ್ಷೆಯನ್ನು ಮಾಡುತ್ತಾರೋ ಅವರ ಪದವಿಯನ್ನು ‘ಸರಸ್ವತೀ’ ಎಂದು ಕರೆಯುತ್ತಾರೆ.*

*ತೀರ್ಥ ನಾಮ ತ್ರಿವೇಣೀ ಸಂಗಮೇ ತೀರ್ಥೇ ತತ್ವಮಸ್ಯಾದಿ ಲಕ್ಷಣೇ|*
*ಸ್ನಾಯತ್ ತತ್ವಾರ್ಥ ಭಾವೇನ ತೀರ್ಥ ನಾಮಾ ಸ ಉಚ್ಯತೇ||*

*ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಶಿವೋಹಮ್  ಎಂಬವು ಜ್ಞಾನಗಳ ತ್ರಿವೇಣೀ ಸಂಗಮ. ಆ ಸಂಗಮರೂಪವಾದ ತೀರ್ಥದಲ್ಲಿ ತತ್ತ್ವಾರ್ಥವನ್ನು ತಿಳಿಯಬೇಕೆಂಬ ಅಪೇಕ್ಷೆಯಿಂದ ಯಾವ ವ್ಯಕ್ತಿಯು ಸ್ನಾನ ಮಾಡುತ್ತಾರೋ ಅವರು ತೀರ್ಥ ಎಂಬ ಹೆಸರಿಂದ ಕರೆಯಲ್ಪಡುತ್ತಾರೆ.*

*ಆಶ್ರಮ ನಾಮ ಆಶ್ರಮ ಗ್ರಹಣೀ ಪ್ರೌಢಃ ಆಶಾಪಾಶ ವಿವರ್ಜಿತಃ |*
*ಯಾತಾಯಾತ ವಿನಿರ್ಮುಕ್ತ ಏತದಾಶ್ರಮ ಲಕ್ಷಣ ||*

*ಯಾವ ವ್ಯಕ್ತಿಯ  ಹೃದಯದಿಂದ ಆಸೆ, ಮಮತೆ, ಮೋಹ… ಇತ್ಯಾದಿ ಬಂಧನಗಳು ಸಂಪೂರ್ಣವಾಗಿ ನಾಶವಾಗಿರುತ್ತವೋ, ಆಶ್ರಮದ ನಿಯಮಗಳನ್ನು ಧರಿಸಲು ದೃಢಮನಸ್ಕನಾಗಿರುತ್ತಾರೋ ಮತ್ತು ಸಂಪೂರ್ಣ ವಿರಕ್ತನಾಗಿರುತ್ತಾರೋ ಅವರಿಗೆ ‘ಆಶ್ರಮ’ ಎಂಬ ಉಪಾಧಿ.*

*ವನ ನಾಮ ದೀಕ್ಷೆ ಸುರಮ್ಯನಿರ್ಜನೇದೇಶೇ ವಾಸಂ ನಿತ್ಯಂ ಕರೋತಿ ಯಃ|*
*ಆಶಾಪಾಶ ವಿನಿರ್ಮುಕ್ತೋ ವನ ನಾಮ ಸ ಉಚ್ಯತೇ||*

*ಯಾವ ಮನುಷ್ಯನು ಸುಂದರವಾದ, ಶಾಂತವಾದ ಮತ್ತು ನಿರ್ಜನವಾದ ವನದಲ್ಲಿ ವಾಸ ಮಾಡುತ್ತಾ, ಪ್ರಪಂಚದ ಬಂಧನಗಳಿಂದ ಸಂಪೂರ್ಣವಾಗಿ ವಿಮುಕ್ತನಾಗಿರುತ್ತಾನೋ ಅವರ ಹೆಸರು ‘ವನ’ ಎಂದು.*

*ಅರಣ್ಯ ನಾಮ ಅರಣ್ಯೇ ಸಂಸ್ಥಿತೋ ನಿತ್ಯ ಆನಂದಂ ನಂದನೇವನೇ|*
*ತ್ವಕ್ತಾ ಸರ್ವಮಿದಂ ವಿಶ್ವಂ ಅರಣ್ಯಂ ಲಕ್ಷಣಂ ಕಿಲ ||*

*ಯಾರು ಪ್ರಾಪಂಚಿಕವಾದ ಸರ್ವವನ್ನೂ ತ್ಯಜಿಸಿ ಅರಣ್ಯದಲ್ಲಿ ವಾಸಮಾಡುತ್ತಾ (ನಂದನವನದಲ್ಲಿ ವಾಸಮಾಡುತ್ತಾ) ಆನಂದವನ್ನು ಸರ್ವದಾ ಅನುಭವಿಸುತ್ತಲಿರುತ್ತಾರೋ ಅವರಿಗೆ ‘ಅರಣ್ಯ’ ಎಂದು ಹೆಸರು.*

*ಗಿರಿ ನಾಮ ವಾಸೋ ಗಿರಿವರೇ ನಿತ್ಯಂ ಗೀತಾಭ್ಯಾಸೇ ಹಿ ತತ್ಪರಃ |*
*ಗಂಭೀರಾಚಲ ಬುದ್ಧೆಶ್ಚ ಗಿರಿ ನಾಮ ಸ ಉಚ್ಯತೇ ||*

*ಯಾರು ಗೀತಾಭ್ಯಾಸದಲ್ಲಿ ತತ್ಪರರಾಗಿ, ಎತ್ತರವಾದ ಪರ್ವತಗಳ ಶಿಖರಗಳ ಮೇಲೆ ವಾಸಮಾಡುತ್ತಾ, ಗಂಭೀರವಾದ ಮತ್ತು ನಿಶ್ಚಿತವಾದ ಬುದ್ಧಿಯನ್ನು ಹೊಂದಿರುತ್ತಾರೋ ಅವರಿಗೆ ‘ಗಿರಿ’ ಎಂದು ಹೆಸರು.*

*ಪರ್ವತ ನಾಮ ವಸೇತ್ಪರ್ವತ ಮೂಲೇಷು ಪ್ರೌಢೋ ಯೋ ಧ್ಯಾನತತ್ಪರಃ |*
*ಸಾರಾಸಾರಂ ವಿಚಾನಾತಿ ಪರ್ವತಃ ಪರಿಕೀರ್ತೀತಃ ||*

*ಸಮಾಧಿಸ್ಥರಾಗಿ ಯಾರು ಪರ್ವತಗಳ ತಪ್ಪಲು ಪ್ರದೇಶಗಳಲ್ಲಿ ವಾಸಮಾಡುತ್ತಾ, ಸತ್ಯಾಸತ್ಯಗಳ ಜ್ಞಾನ ಹೊಂದಿರುತ್ತಾರೋ ಅವರಿಗೆ ‘ಪರ್ವತ’ ಎಂದು ಹೆಸರು.*

*ಸಾಗರ ನಾಮ ವಸೇತ್ಸಾಗರ ಗಂಭಿರೇ ಘನ ರತ್ನ ಪರಿಗ್ರಹಃ |*
*ಮರ್ಯಾದದಶ್ಚಾನ ಲಂಘ್ಯೇತ ಸ ಸಾಗರಃ ಪರಿಕೀರ್ತಿತಃ ||*

*ಸಮುದ್ರದ ಸಮೀಪದಲ್ಲಿ ವಾಸ ಮಾಡುತ್ತಾ ಯಾರು ಅಧ್ಯಾತ್ಮ ಶಾಸ್ತ್ರದ ಉಪದೇಶ ಗ್ರಹಣ ಮಾಡುತ್ತಾರೋ ಮತ್ತು ಆಶ್ರಮ ನಿಯಮಗಳನ್ನು ಸ್ವಲ್ಪವೂ ಉಲ್ಲಂಘಿಸುವುದಿಲ್ಲವೋ ಅವರು ಸಮುದ್ರಕ್ಕೆ ಸಮಾನರಾದುದರಿಂದ ‘ಸಾಗರ’ ಎಂದು ಕರೆಯಲ್ಪಡುತ್ತಾರೆ.*

*ಪುರೀ ನಾಮ ಜ್ಞಾನ ತತ್ತ್ವೇನ ಸಂಪೂರ್ಣಃ ಪೂರ್ಣ ತತ್ತ್ವೇ ಪದೇ ಸ್ಥಿತಃ |*
*ಪರಬ್ರಹ್ಮರತೋ ನಿತ್ಯಂ ಪುರೀ ನಾಮ ಸ ಉಚ್ಯತೇ ||*

*‘ಪುರೀ’ ಎಂದರೆ ತತ್ವಜ್ಞಾನದಿಂದ ಪೂರ್ಣನಾಗಿರುವುದು, ಪೂರ್ಣಪದಗಳಲ್ಲಿ ಸ್ಥಿತನಾಗಿರುವುದು, ಪರಬ್ರಹ್ಮ ಚಿಂತನೆಯಲ್ಲಿ ನಿರತನಾಗಿರುವುದು. ಈ ರೀತಿ ನಿರತರಾಗಿರುವ ಸನ್ಯಾಸಿಗಳು ‘ಪುರೀ’ ಎಂಬ ಪದವಿಗೆ ಅಧಿಕಾರಿಯಾಗುತ್ತಾರೆ.*

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...