Friday, 22 February 2019

ಬ್ರಾಹ್ಮಣರು ಏನು ಮಹಾ ತಿನ್ನುತ್ತಾರೆ ಅನ್ನುವ ಮುoಚೆ ಇದನ್ನು ಓದಿ.. ನೀವು ಭಟ್ರಲ್ವಾ? ಪುಳ್ಚಾರುಗಳು ಅನ್ನುವ ಮುನ್ನ!

ಹಸಿರೆಲೆಯ ಮೇಲೆ ಅನುಶುದ್ಧಿ
ಅದಾದ ಮೇಲೆ ಸ್ವಲ್ಪ ಹಲಸು ಕಡ್ಲೆ, ಅಲಸಂಡೆ ಪಲ್ಯ, ಮತ್ತೆ ಸ್ವಲ್ಪ ಜೋಳ, ದಾಳಿಂಬೆ ಕಾಯಿ ಹಾಕಿದ ಕೋಸಂಬರಿ, ಉದ್ದಿನ ಬೇಳೆ ಕೋಸಂಬರಿ, ಸ್ವಲ್ಪ ತೆಂಗಿನಕಾಯಿ ಚಟ್ನಿ,ಒಂದು ಚಿಟಿಕೆ ಉಪ್ಪು ಬಾಳೆಯ ತುದಿಗೆ! ಒಂದು ಸ್ವಲ್ಪ ಪಾಯ್ಸ ಇನ್ನೊಂದು ಕೊಡಿಗೆ, ಬಾಯಲ್ಲಿ ನೀರು ಬರಿಸುವ ಚಿತ್ರಾನ್ನ ಎಡಬದಿಗೆ! ಆನ್ನ! ಅದರ ಮೇಲೆ ತುಪ್ಪ, ಅದರ ಹಿಂದೆ ಸ್ವಲ್ಪವೇ ಸ್ವಲ್ಪ ಇಂಗು ಹಾಕಿ ರುಚಿಸುವ ತೊವ್ವೆ!

ಗೋವಿಂದಾಣಿ ಗೋವಿಂದಾ! ಗೋವಿಂದಾ! ಪರಿಶಿಂಚನ!

ಆನ್ನ+ ಪಲ್ಯ+ ತೊವ್ವೆ+ ಕೋಸಂಬರಿ!
ಸ್ವಲ್ಪವೇ ಸ್ವಲ್ಪ ತಂಬುಳಿ!
ಅಷ್ಟೊತ್ತಿಗೆ ಯಾರೋ ಹಪ್ಪಳ ಮುರ್ದ ಸದ್ದು!
ಇದು ತಿಳಿಸಾರಿನ ಸಮಯ!
ಹಾಕಿಸಿಕೊಂಡ ಆನ್ನ ಖಾಲಿ! ಮತ್ತೆ ಆನ್ನ ವಿಚಾರಣೆ! ಆನ್ನದ ಹಿಂದೆ 2ನೇ ರೌಂಡು ಸಾರು!
ಮತ್ತೆ ಮಾವು, ಇಲ್ಲಾ ಅನಾನಸ್ ಮತ್ತು ಶೇಂಗಾ ಹಾಕಿದ ಮೆಣ್ಸುಕಾಯಿ! ಅದ್ರ ಹಿಂದೆ ಗುಳ್ಳ ಬದನೆ ಬೋಳ್ಸಾರು! ಒಂದು ತೇಗು ಬರುವ ಸಮಯ!
ಪಲ್ಯ ವಿಚಾರಣೆ! ಹಿಂದೆ ಸಾಂಬಾರು, ಅದಾದ ಮೇಲೆ ಒಂದಿಷ್ಟು ಹಲ್ಸು ಕಡ್ಲೆ ಘಸಿ!
ಲಾಡು, ಹಯಗ್ರೀವ ಮಡ್ಡಿ, ವಡೆ, ಕಾರದಕಡ್ಡಿ, ಫ್ರುಟ್'ಸಲಾಡ್, ಪಾಯ್ಸ, ಹೋಳಿಗೆ.. ಎಲ್ಲಾ ಒಂದ್ಸಲ ವಿಚಾರಣೆ! ಇನ್ನು ಹೊಟ್ಟೆಯಲ್ಲಿ ಜಾಗ ಎಲ್ಲಿದೆ ಎಂದು ಯೋಚಿಸುವ ಕೆಲ್ಸ! ಅಷ್ಟೊತ್ತಿಗೆ ಅವೀಲು, ಮಜ್ಜಿಗೆ ಹುಳಿ ಬರುವ ಟೈಮು! ಮಜ್ಜಿಗೆಗೆ ಒಂದಿಷ್ಟು ಆನ್ನ ಬದಿಗಿಟ್ಟು ಉಳಿದದ್ದನ್ನು ಅವೀಲ್ ಮತ್ತೆ ಮಜ್ಜಿಗೆ ಹುಳಿಗೆ ಕಲ್ಸಿ ತಿಂದ್ರೆ ಅಲ್ಲಿಗೆ ಒಂದು ಇನ್ನಿಂಗ್ಸು ಮುಗ್ದ ಹಾಗೆ! ಅಲ್ಲಿಂದ ಮಜ್ಜಿಗೆ ಆನ್ನ, ರುಚಿಗೆ ಉಪ್ಪಿನಕಾಯಿ, ಮಿಡಿಮಾವು ಬೆಸ್ಟು, ಸಿಗದಿದ್ರೆ ಯಾವ ತರ್ಕಾರಿಯೂ ಆದೀತು! ಅಲ್ಲಿಗೆ ಅನ್ನದಾತಾ ಸುಖೀಭವ!

ಎದ್ದು ಕೈತೊಳೆದು 2 ಎಲೆ, ಒಂದು ತುಂಡಡಿಕೆ,ಸುಣ್ಣ ಹಾಕಿ ಬಾಯಿಕೆಂಪಾಗಿಸಿದ್ರೆ ಊಟದ ಕಾರ್ಯಕ್ರಮ ಸಂಪೂರ್ಣಮಸ್ತು!ಜೈ!

We don't just eat! We celebrate food 😍😍


No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...