Thursday, 28 February 2019

ಅತಿಥಿ ಸತ್ಕಾರ...

ಯಾರಾದರೂ ಮನೆಗೆ ಬಂದಾಗ ಕೆಲವು ಮನೆಗಳಲ್ಲಿ ತಿನ್ನಲು ಏನಾದರೂ ಕೊಟ್ಟು ಕುಡಿಯಲು ಕೊಟ್ಟು ಅಥವಾ ಎರಡರಲ್ಲಿ ಏನೋ ಒಂದು ಕೊಟ್ಟು ಆ ಸಂಪ್ರದಾಯ ಮುಂದುವರೆಸಿಕೊಂಡು ಹೋಗುತ್ತಾರೆ. ಅದು ನಮ್ಮ ಕರ್ತವ್ಯ ಎಂಬ ಭಾವನೆ ಅಷ್ಟೇ ಹೊರತು ಬೇರೆ ಯಾವ ಪ್ರತಿಫಲಾಪೇಕ್ಷೆ ಇಟ್ಟುಕೊಂಡಿರುವುದಿಲ್ಲ.
.
ಕೆಲವು ಮನೆಗಳಲ್ಲಿ ಇಂತಹ ಯಾವ ಉಪಚಾರವೂ ಇರುವುದಿಲ್ಲ. ಕಾಫಿ ತಿಂಡಿ ಇರಲಿ ಒಂದು ಲೋಟ ನೀರು ಕೂಡಾ ಕೇಳುವುದಿಲ್ಲ. ಅದೇ ಆ ಮನೆಯ ಪದ್ಧತಿಯಾಗಿ ಉಳಿಯುತ್ತದೆ.

ಆದರೆ ಬಂದ ಅತಿಥಿ ಸತ್ಕರಿಸಿದ ಮನೆಯವರನ್ನು ಎಂದಿಗೂ ಮರೆಯುವುದಿಲ್ಲ. ಆ ಜೀವ ಸಂತೃಪ್ತಿ ಪಡೆದು ಒಳ್ಳೆಯದನ್ನು ಬಯಸುತ್ತದೆ. ಇಡೀ ಜೀವಮಾನಕ್ಕೆ ಒಂದೇ ಒಂದು ಸಲ ಒಬ್ಬರ ಮನೆಗೆ ಹೋಗಿ ಬಂದರೂ ಸರಿ ಯಾರ ಮನೆಯಲ್ಲಿ ಯಾವ ರೀತಿ ನೋಡಿಕೊಂಡರು. ಯಾರು ಉಪಚರಿಸಿದರು. ಯಾರು ಏನೂ ನೀಡದೆ ಕಳುಹಿಸಿದರು ಎಂದು ಖಾಯಂ ಆಗಿ ಮರೆಯದ ನೆನಪಾಗಿ ಉಳಿದು ಹೋಗುತ್ತದೆ.

ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಎಂಬ ಸಾಲಿನಲ್ಲಿ ಮುಂದಿನದು ಅತಿಥಿ ದೇವೋಭವ. ಅಪ್ಪ ಅಮ್ಮ ಗುರುಗಳ ಸಾಲಿನಲ್ಲಿ ಅತಿಥಿಗಳನ್ನೂ ದೇವರಂತೆ ಕಾಣಬೇಕು. ಇದು ನಮ್ಮ ಸಂಸ್ಕೃತಿ. ಇದು ನಿಜವಾದ ಸಂಸ್ಕಾರ. ಇಂತಹ ಫಲಗಳು ನಮ್ಮನ್ನು ಕಷ್ಟಕಾಲದಲ್ಲಿ ಕೈ ಹಿಡಿದು ಕಾಪಾಡುತ್ತವೆ. ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಮನುಷ್ಯ ರೂಪದ ಅತಿಥಿ ಖಂಡಿತ ಸಾಮಾನ್ಯನಲ್ಲ. ದೈವಂ ಮಾನಸ ರೂಪೇಣ. ಅಷ್ಟಿಲ್ಲದೆ ಹಿರಿಯರು ಇಂತಹ ಸದಾಚಾರ ಸತ್ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿರಲಿಲ್ಲ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...