Sunday, 10 June 2018

🙏

ಪ್ರಶ್ನೆ:
ವೇದವೆಂದರೇನು ?

ಉತ್ತರ:
*ವೇದವೆಂದರೆ ಜ್ಞಾನ.*

ಪ್ರಶ್ನೆ:
ವೇದಜ್ಞಾನವನ್ನು ನೀಡಿದವರು ಯಾರು ?

ಉತ್ತರ:
*ಸಾಕ್ಷಾತ್ ಭಗವಂತ*

ಪ್ರಶ್ನೆ:
ಭಗವಂತ ವೇದಜ್ಞಾನವನ್ನು ಎಂದು ನೀಡಿದ ?

ಉತ್ತರ:
*ಸೃಷ್ಟಿಯ ಆರಂಭದಲ್ಲೇ ಭಗವಂತ ವೇದಜ್ಞಾನವನ್ನು ನೀಡಿದ.*

ಪ್ರಶ್ನೆ:
ಭಗವಂತ ವೇದಜ್ಞಾನವನ್ನೇಕೆ ನೀಡಿದ ?

ಉತ್ತರ:
*ಮಾನವಕುಲದ ಒಳಿತಿಗಾಗಿ ನೀಡಿದ.*


ಪ್ರಶ್ನೆ:
ವೇದಗಳೆಷ್ಟು?

ಉತ್ತರ:
*ನಾಲ್ಕು*
*ಋಗ್ವೇದ*
*ಯಜುರ್ವೇದ*
*ಸಾಮವೇದ*
*ಅಥರ್ವವೇದ.*

ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಯಾರಿಗೆ ನೀಡಿದ ?

ಉತ್ತರ:
*ನಾಲ್ಕು ಋಷಿಗಳಿಗೆ.*

ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಋಷಿಗಳಿಗೆ ಹೇಗೆ ನೀಡಿದ ?

ಉತ್ತರ:
*ಯೋಗಾವಸ್ಥೆಯ ಸಮಾಧಿ ಸ್ಥಿತಿಯಲ್ಲಿ.*

ಪ್ರಶ್ನೆ:
ವೇದಗಳಲ್ಲಿ ಎಂತಹ ಜ್ಞಾನವಿದೆ ?

ಉತ್ತರ:
*ಎಲ್ಲ ಸತ್ಯ ವಿದ್ಯೆಗಳು,ಜ್ಞಾನ ಹಾಗೂ ವಿಜ್ಞಾನ*

ಪ್ರಶ್ನೆ:
ವೇದಗಳ ಜ್ಞಾನವನ್ನು ಮೊದಲು ಪಡೆದವರು ಯಾರಾರು ?

ಉತ್ತರ:
*ಅಗ್ನಿ-ಋಗ್ವೇದ*
 *ವಾಯು-ಯಜುರ್ವೇದ*
*ಆದಿತ್ಯ-ಸಾಮವೇದ*
*ಅಂಗಿರಾ-ಅಥರ್ವವೇದ*

ಪ್ರಶ್ನೆ:
ಋಗ್ವೇದದ ಪ್ರಮುಖ ವಿಷಯ ಯಾವುದು ?

ಉತ್ತರ:
*ಜ್ಞಾನ*
 
ಪ್ರಶ್ನೆ:
ಯಜುರ್ವೇದದ ಪ್ರಮುಖ ವಿಷಯ ಯಾವುದು ?

ಉತ್ತರ:
*ಕರ್ಮ*

ಪ್ರಶ್ನೆ:
ಸಾಮವೇದದ ಪ್ರಮುಖ ವಿಷಯ ಯಾವುದು ?

ಉತ್ತರ:
*ಉಪಾಸನೆ*

ಪ್ರಶ್ನೆ:
ಅಥರ್ವವೇದದ ಪ್ರಮುಖ ವಿಷಯ ಯಾವುದು ?

ಉತ್ತರ:
*ವಿಜ್ಞಾನ*

ಪ್ರಶ್ನೆ:
ವೇದವನ್ನು ಓದುವ ಅಧಿಕಾರ ಯಾರಿಗಿದೆ ?

ಉತ್ತರ:
*ಉತ್ತಮ ಸಂಸ್ಕಾರ ಹಾಗೂ ಕಾಯಿಕ,ವಾಚಿಕ,ಮಾನಸಿಕ ಪರಿಶುದ್ಧಿಯಿರುವವರಿಗಷ್ಟೇ*

ಪ್ರಶ್ನೆ:
ವೇದಗಳಲ್ಲಿ ಮೂರ್ತಿಪೂಜೆಯ ವಿಧಾನವಿದೆಯೇ ?

ಉತ್ತರ:
*ಖಂಡಿತವಾಗಲೂ ಇಲ್ಲ.*

ಪ್ರಶ್ನೆ:
ವೇದಗಳಲ್ಲಿ ಅವತಾರವಾದದ ಪ್ರಮಾಣವಿದೆಯೇ ?

ಉತ್ತರ:
*ಇಲ್ಲ*

ಪ್ರಶ್ನೆ:
ವೇದಗಳಲ್ಲಿ ಜಾತಿಪದ್ಧತಿಯನ್ನು ಹೇಳಲಾಗಿದೆಯೇ ?

ಉತ್ತರ:
*ಎಲ್ಲೂ ಇಲ್ಲ.*

ಪ್ರಶ್ನೆ:
ವೇದಗಳಲ್ಲಿ ಪ್ರಾಣಿಹತ್ಯೆಯನ್ನು ಸಮರ್ಥಿಸಲಾಗಿದೆಯೇ ?

ಉತ್ತರ:
*ಖಂಡಿತಾ ಇಲ್ಲ.*

ಪ್ರಶ್ನೆ:
ಅತಿದೊಡ್ಡ ವೇದ ಯಾವುದು ?

ಉತ್ತರ:
*ಋಗ್ವೇದ*

ಪ್ರಶ್ನೆ:
ವೇದಗಳ ಇತಿಹಾಸವೆಷ್ಟಿರಬಹುದು ?

ಉತ್ತರ:
*ಸುಮಾರು ಒಂದು ಅರಬ್ ೯೬ ಕೋಟಿ ವರ್ಷಕ್ಕಿಂತಲೂ ಮುಂಚೆ.*

ಪ್ರಶ್ನೆ:
ವೇದಾರ್ಥವನ್ನು ಅರಿಯಲು ದರ್ಶನಶಾಸ್ತ್ರಗಳ ಅವಶ್ಯಯಕತೆಯಿದೆಯೇ ?

ಉತ್ತರ:
*ಖಂಡಿತಾ ಇದೆ.*

ಪ್ರಶ್ನೆ:
ದರ್ಶನ ಶಾಸ್ತ್ರಗಳೆಷ್ಟಿವೆ ? ಅವುಗಳ ಪ್ರವರ್ತಕರು ಯಾರು ?

ಉತ್ತರ:
*ಷಟ್ (ಆರು) ದರ್ಶನಗಳಿವೆ.*

 *ನ್ಯಾಯದರ್ಶನ-ಗೌತಮ ಮುನಿಗಳು*

*ವೈಶೇಷಿಕ ದರ್ಶನ- ಕಣಾದ ಮುನಿಗಳು*

*ಯೋಗದರ್ಶನ-ಪತಂಜಲಿ ಮುನಿಗಳು*

*ಮೀಮಾಂಸಾದರ್ಶನ- ಜೈಮಿನಿ ಮುನಿಗಳು*

*ಸಾಂಖ್ಯದರ್ಶನ*ಕಪಿಲ ಮುನಿಗಳು*

 *ವೇದಾಂತದರ್ಶನ-ವ್ಯಾಸ ಮುನಿಗಳು*

ಪ್ರಶ್ನೆ:
ದರ್ಶನಗಳಲ್ಲಿರುವ ವಿಷಯಗಳೇನು ?

ಉತ್ತರ: *ಆತ್ಮಾ, ಪರಮಾತ್ಮಾ, ಪ್ರಕೃತಿ, ಜಗತ್ತಿನ ಉತ್ಪತ್ತಿ, ಮೋಕ್ಷ, ಭೌತಿಕ ಹಾಗೂ ಆಧ್ಯಾತ್ಮಿಕ ಜ್ಞಾನ ಮುಂತಾದವು.*

ಪ್ರಶ್ನೆ:
ಪ್ರಾಮಾಣಿಕ ಉಪನಿಷತ್ತುಗಳೆಷ್ಟು ?

ಉತ್ತರ:
*ಕೇವಲ ಹನ್ನೊಂದು.*

 ಪ್ರಶ್ನೆ:
ಉಪನಿಷತ್ತಿನ ಹೆಸರುಗಳು ?

ಉತ್ತರ:
*ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ ಹಾಗೂ ಶ್ವೇತಾಶ್ವತರ*

ಪ್ರಶ್ನೆ:
ಉಪನಿಷತ್ತುಗಳಲ್ಲಿರುವ ವಿಷಯಗಳ ಆಧಾರ ಯಾವುದು ?

ಉತ್ತರ:
*ವೇದಗಳು*

ಪ್ರಶ್ನೆ:
ವೇದಾಂಗಗಳೆಷ್ಟು ? ಅವು ಯಾವವು ?

ಉತ್ತರ:
*ಆರು*
ಅವು:
*ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ ಹಾಗೂ ಕಲ್ಪ*

ಪ್ರಶ್ನೆ:
ವೇದಾಂಗಗಳ ಪ್ರಯೋಜನವೇನು ?

ಉತ್ತರ:
*ವೇದಾರ್ಥವನ್ನು ತಿಳಿಯಲು.*

🌕ಲೋಕಾಃ ಸಮಸ್ತಾಃ ಸುಖಿನೋ ಭವಂತು.✋

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...