ಕೀರ್ತನಕಾರರು : ವಾದಿರಾಜರು
ರಾಗ : ಪಂತುವರಾಳಿ
ತಾಳ : ರೂಪಕ
ಒಂದು ಬಾರಿ ಸ್ಮರಣೆ ಸಾಲದೆ ಆ-
ನಂದ ತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ ।।ಪ।।
ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ ।।೧।।
ಪ್ರಕೃತಿಬಂಧದಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕ ಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ ।।೨।।
ಆರುಮಂದಿ ವೈರಿಗಳನು ಸೇರಿಸಲೀಯದಂತೆ ಜರಿದು
ಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ ।।೩।।
ಘೋರಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ ।।೪।।
ಹೀನಬುದ್ಧಿಯಿಂದ ಶ್ರೀಹಯವದನನ ಜರಿದು
ತಾನು ಬದುಕಲರಿಯದಿರಲು ತೋರಿಕೊಟ್ಟ ಮಧ್ವಮುನಿಯ ।।೫।।

No comments:
Post a Comment