ಕೀರ್ತನಕಾರರು : ವ್ಯಾಸರಾಯರು
ರಾಗ : ಯಮನ್ ಕಲ್ಯಾಣಿ
ತಾಳ : ಛಾಪು
ಕೃಷ್ಣಾ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನು ತೋರೋ ।।ಪ।।
ಕಾಲಲಂದುಗೆ ಗೆಜ್ಜೆ ನೀಲದ ಬಾವುಲಿ
ನೀಲವರ್ಣನೆ ನಾಟ್ಯವನಾಡುತ ಬಾರೋ ।।೧।।
ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ
ಕೊರಳೊಳು ಧರಿಸಿದ ವೈಜಯಂತಿ ಮಾಲೆ ।।೨।।
ಕಾಶಿಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ ।।೩।।
ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ
ಜಗದೋದ್ಧಾರಕ ನಮ್ಮ ಉಡುಪಿಯ ಶ್ರೀಕ್ರಷ್ಣ ।।೪।।
ರಾಗ : ಯಮನ್ ಕಲ್ಯಾಣಿ
ತಾಳ : ಛಾಪು
ಕೃಷ್ಣಾ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನು ತೋರೋ ।।ಪ।।
ಕಾಲಲಂದುಗೆ ಗೆಜ್ಜೆ ನೀಲದ ಬಾವುಲಿ
ನೀಲವರ್ಣನೆ ನಾಟ್ಯವನಾಡುತ ಬಾರೋ ।।೧।।
ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ
ಕೊರಳೊಳು ಧರಿಸಿದ ವೈಜಯಂತಿ ಮಾಲೆ ।।೨।।
ಕಾಶಿಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ ।।೩।।
ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ
ಜಗದೋದ್ಧಾರಕ ನಮ್ಮ ಉಡುಪಿಯ ಶ್ರೀಕ್ರಷ್ಣ ।।೪।।
No comments:
Post a Comment