ಬದರಿ ಯಾತ್ರೆ - ಮಾಡಬೇಕಾದ ತಯಾರಿ.-ಒಂದು ಸುಂದರ ದೈವೀಕ ಅನುಭವ.-
ಬದರಿ ಯಾತ್ರೆ - ಮಾಡಬೇಕಾದ ತಯಾರಿ.-ಒಂದು ಸುಂದರ ದೈವೀಕ ಅನುಭವ.-ಕಮಲಾತನಯ.
ಹಿಂದುಗಳಾದ ನಮಗೆ ತೀರ್ಥ ಕ್ಷೇತ್ರ ದರ್ಶನ ಬಹಳವೇ ಸಾಮಾನ್ಯವಾದ ವಿಚಾರ. ಆದರೆ ಬ್ರಾಹ್ಮಣರಾದವರಿಗೆ ಬದರಿಕಾಶ್ರಮದ ಯಾತ್ರೆ,ಅದರಲ್ಲೂ ಶ್ರೀ ಬದರಿ ನಾರಾಯಣನ ದರುಶನದೊಂದಿಗೆ ಅಲಕನಂದಾ ತೀರದಲ್ಲಿ ಮಾಡುವ ಪಿತೃಕಾರ್ಯ ಬಳಿಕ ಬ್ರಹ್ಮಳಕಪಾಲದಲ್ಲಿ ಪಿತೃ ಪಿಂಡವಿಟ್ಟು ಗಂಗೆಯಲ್ಲಿ ವಿಸರ್ಜನೆ ಕರ್ತವ್ಯವಲ್ಲದಿದ್ದರೂ ಅದನ್ನು ಮಾಡಿದರೆ ಜೀವನ ಸಾರ್ಥಕವಾದ ಅನುಭವ. ಪಿತೃಗಳಿಗೆ ಮೋಕ್ಷದದಾರಿ.
ಇಲ್ಲಿರುವುದು ನನ್ನ ಬದರಿ ಯಾತ್ರೆಯ ಅನುಭವ, ಪ್ರತಿಯೊಂದು ಯಾತ್ರಿಗೂ ತನ್ನದೇ ಆದ ಸುಂದರ,ದೈವೀಕ, ಸಹನೀಯ, ಅಸಯನೀಯ,ಅನಾರೋಗ್ಯ, ಕಷ್ಟಗಳನ್ನು ಎದುರಿಸಿದ ಅನುಭವವಿರುತ್ತದೆ. ಬದರಿಗೆ ಹೋಗಿ ತಿರುಗಿ ಬಂದಾಗ ಸಿಗುವ ಅನುಭವ ಮನಶಾಂತಿ ಅನುಭವಿಸಿದವರೀಗೆ ಗೊತ್ತು.
ಬದರಿಕಾಶ್ರಮ -ಹಿಂದೂಗಳ ೪ ಅತೀ ಮಹತ್ವದ ಪುಣ್ಯಕ್ಷೇತ್ರಗಳಲ್ಲಿ ಒಂದು. (ಬದರಿ,ದ್ವಾರಕ, ಪುರಿ, ಮತ್ತು ರಾಮೇಶ್ವರ).ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಪುಟ್ಟ ನಗರ.ಸಮುದ್ರ ಮಟ್ಟದಿಂದ 10800 ಅಡಿ ಎತ್ತರದಲ್ಲಿ ಹಿಮಾಲಯದಲ್ಲಿ ನರ ನಾರಾಯಣ ಪರ್ವತದ ಮಧ್ಯ ಅಲಕನಾಂದಾ ನದಿಯ ದಡದಲ್ಲಿದೆ.ಇಂಡೋ ಚೈನಾ ಗಡಿಪ್ರದೇಶ ದಲ್ಲಿದೆ.
ಆದಿ ಶಂಕರರೀಗೆ ಅಲಕನಂದ ನದಿಯಲ್ಲಿ ಸಿಕ್ಕಿದ ಸಾಲಿಗ್ರಾಮ ಶಿಲೆಯ ವಿಗ್ರಹವೆ ಶ್ರೀ ಬದರಿ ನಾರಾಯಣ ವಿಗ್ರಹ ೩.೩ ಅಡಿ ಎತ್ತರದ ಸಾಲಿಗ್ರಾಮ ಶಿಲೆಯ ಪದ್ಮಾಸನ ಹಾಕಿ ಕೂತಿರುವ ೪ ಕೈಗಳುಳ್ಳ ಶ್ರೀ ಬದರಿ ನಾರಾಯಣ. ಎತ್ತಿದ ಎರಡು ಕೈಗಳಲ್ಲಿ ಶಂಕ ಚಕ್ರ , ಉಳಿದೆರಡು ಯೋಗಮುದ್ರೆಯಲ್ಲಿ ತೊಡೆಯಮೆಲಿದೆ..
ಅನುಕೂಲವಾದ ಸಮಯ ಜೂನ್ -ಸಪ್ಟೆಂಬರ್ ವರೆಗೆ.
ಹರಿದ್ವಾರ--ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಗಂಗಾ ನದಿಯ ದಡದಲ್ಲಿರುವ ಪಟ್ಟಣ. ಇದು ೭ ಮಹಾ ಪುಣ್ಯ ಕ್ಷೇತ್ರಗಳಲ್ಲಿ ಒಂದು.ಅಯೋಧ್ಯ ಮದುರ ಮಾಯಾ ಕಾಶಿ ಕಾಂಚಿ ಅವಂತಿಕ ಪುರಿ ದ್ವಾರಾವತಿ ಚೈವ ಸಪ್ತೈತ ಮೊಕ್ಷದಾಯಕಾಹ. ಇದರಲ್ಲಿ ಮಾಯಾ ಅನ್ನುವುದೇ ಈಗಿನ ಹರಿದ್ವಾರ. ಅಲ್ಲಿರುವ ದೇವರು ಮಾಯಾದೇವಿ ಮತ್ತು ಚಾಮುಂಡಿ.
ಕುರುಕ್ಷೇತ್ರ, ಗೋಕುಲ, ವೃಂದಾವನ ಮಥುರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರ . ಇವೆಲ್ಲವೂ ಮಹಾಭಾರತ ಮತ್ತು ಕೃಷ್ಣ ನಿಗೆ ಸಂಭಂದಿಸಿದ ಊರು.
ಯಾತ್ರೆಯ ತಯಾರಿ.
ಉಡುಪಿ, ಮಂಗಳೂರು,ಬೆಂಗಳೂರು, ಮೈಸೂರು ನವರಿಗೆ ವಿಮಾನದಲ್ಲಿ ಡೆಲ್ಲಿ ಅಥವಾ ದೇಹರಡುಂ ಗೆ ಹೋಗುವುದು ಅನುಕೂಲ.ಅದೇ ರೀತಿ ರಿಟರ್ನ್ ಬರುವುದು ಅನುಕೂಲ ವಿಚಾರ.
ಡೆಲ್ಲಿ ಇಂದ ಟೂರಿಸ್ಟ್ ಟ್ಯಾಕ್ಸಿ ಇಲ್ಲವೇ ೨೫ ಜನರಿದ್ದರೆ ಕಾಂಟ್ರಾಕ್ಟ್ ಬಸ್ ವ್ಯವಸ್ತೆ ಮಾಡಿಕೊಳ್ಳುವುದು ಅನುಕೂಲ.ಖರ್ಚು ಕಡಿಮೆ ಅದಕ್ಕೆ. ದೆಲ್ಹಿಯಲ್ಲಿ ಶ್ರೀ ಪೇಜಾವರ ಮಠದಲ್ಲಿ ಕೋಣೆಗಳ ವ್ಯವಸ್ತೆ ಇದೆ. ಅದರ ಉಪಯೋಗವನ್ನು ಪಡೆದುಕೊಲ್ಲ ಬಹುದು. ಅಲ್ಲಿಂದ ಸೀದಾ ಹರಿದ್ವಾರಕ್ಕೆ ಹೊರಟು ಅಲ್ಲಿಯ ಶ್ರೀ ಪೇಜಾವರ ಮಠದಲ್ಲಿ ಇದ್ದು , ಬೆಳಿಗ್ಗೆ ಗಂಗಾಸ್ನಾನ ಮಾಡಿ ತರ್ಪಣಾದಿಗಳನ್ನು ಕೊಟ್ಟು.ಅಲ್ಲೇ ಮದ್ಯನ್ನದ ಪ್ರಸಾದ ಸ್ವೀಕರಿಸಬಹುದು. ಮದ್ಯನ್ನದ ಸಮಯದಲ್ಲಿ ಶ್ರೀ ಚಂಡಿ ಮತ್ತು ಮಾಯಾ ದೇವಸ್ಥಾನಗಳ ದರ್ಶನ ಮಾಡಿಕೊಳ್ಳಬಹುದು. ಹಾಗೆ ಸೂರ್ಯಸ್ತಕ್ಕೆ ಸರಿಯಾಗಿ ಗಂಗಾ ಆರತಿ ಇದೆ ಅದನ್ನು ನೋಡಬಹುದು. ಮರುದಿನ ರುಶಿಕೇಹ ಯಾತ್ರೆ ಮುಗಿಸಿ ಸಾಯಂಕಾಲದ ಸಮಯದಲ್ಲಿ ದೊಡ್ಡ ಅಂಜನೆಯ ಸ್ವಾಮಿ (ಪಲಿಮಾರ್ ಮಠ ) ಸಂದರ್ಶನ ಮುಗಿಸಬಹುದು.
ಮರುದಿನ ಬೆಳಿಗ್ಗೆ ಬೇಗ ಬದರಿಗೆ ಹೊರಟರೆ ದಾರಿಯಲ್ಲಿ ಸಿಗುವ ದೇವಪ್ರಯಾಗ, ರುದ್ರ ಪ್ರಯಾಗ, ಕರ್ಣ ಪ್ರಯಾಗ, ನಂದ ಪ್ರಯಾಗ ಸ್ನಾನ ತರ್ಪಣ ಮುಗಿಸಿ ಅಲ್ಲೇ ಇರುವ ಗೆಸ್ಟ್ ಹೌಸ್ ನಲ್ಲಿ ಉಳಕೊಂಡು ಬೆಳಿಗ್ಗೆ ಹೊರಟರೆ ವಿಷ್ಣುಪ್ರಯಾಗ ಸ್ನಾನ ಮಾಡಿ ಜೊಶಿಮಠ ಸಂದರ್ಶನ ಮಾಡಿ 3 ಗಂಟೆಯ ಹೊತ್ತಿಗೆ ಬದರಿ ಸೇರಬಹುದು. ಅಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ಮಧ್ಯಾನ್ನದ ಪ್ರಸಾದ ಸ್ವೀಕರಿಸಿ , 4 ಗಂಟೆಯ ಹೊತ್ತಿಗೆ ಬದರಿ ನಾರಾಯಣನ ದರ್ಶನಕ್ಕೆ ಹೊರಡಬಹುದು.ಅನುಕೂಲ ಇದ್ದವರು ಬದರಿ ನಾರಾಯಣನಿಗೆ ಬೆಳಗ್ಗಿನ ಅಭಿಷೇಕವನ್ನು ಸೇವೆಯಾಗಿ ಕೊಡಬಹುದು, (4.30AM to 8AM )3 ಜನರಿಗೆ ಪ್ರವೇಶವಿದೆ, ಬಳಿಕ ಪಿತ್ರುಪಿಂಡಪ್ರಧಾನ ಕಾರ್ಯಕ್ರಮ ಇದ್ದವರು ಬೆಳಿಗ್ಗೆ ಅಲಕನಂದಾದಲ್ಲಿ ಮತ್ತು ತಪ್ತ ಕುಂಡದಲ್ಲಿ ಸ್ನಾನಮಾಡಿ ಪಿಂಡಪ್ರಧಾನ ಮುಗಿಸಿ ದೇವರ ದರ್ಶನ ಮುಗಿಸಿ ಶ್ರೀ ಪೆಜವರ ಮಠದಲ್ಲಿ ಪ್ರಸಾದ ಸ್ವೀಕರಿಸಿ , ಸಾಯಂಕಾಲದ ಸಮಯಕ್ಕೆ ವ್ಯಾಸಗುಹೆ , ಗಣೇಶ ಗುಹೆ , ಸರಸ್ವತಿ ನದಿಯ ದರ್ಶನ ಮತ್ತು ಕೇಶವ ಪ್ರಯಾಗ ನೋಡಬಹುದು.ವಯಸಾದವರಿಗೆ ಡಾಲಿಯ ಹೊತ್ತುಕೊಂಡುಹೊಗುವ ವ್ಯವಸ್ತೆ ಇದೆ.(ರು.೩೫೦ ರಿಂದ ೫೦೦ ಪ್ರತಿಒಬ್ಬರಿಗೆ )
ಪ್ರಯಾಗಗಳಲ್ಲಿ ಸ್ನಾನ ಮಾಡುವವರು ಸ್ನಾನಕ್ಕೆ ಬೇಕಾದ ಉಡುಪುಗಳನ್ನು ಹಿಡಿದುಕೊಂಡರೆ ಅನುಕೂಲ.ತರ್ಪಣಕ್ಕೆ ಬೇಕಾದ ಎಳ್ಳು ಅವಶ್ಯ. ಬದರಿಯಲ್ಲಿ ಚಳಿ ಇರುವುದರಿಂದ ತಲೆಗೆ ಮಂಕಿ ಕ್ಯಾಪ್ , ಗ್ಲೌಸೆ, ಸಾಕ್ಸ್ ಹೊದೆಯಲು ಬೆಚ್ಚಗಿನ ಶಾಲು ಅವಶ್ಯ.
ಮರುದಿನ ಹೊರಟು ಹರಿದ್ವಾರಕ್ಕೆ ಬಂದರೆ ವಿಶ್ರಮಿಸಿ ಮರುದಿನ ಕುರುಕ್ಷೆತ್ರಕ್ಕೆ ಹೊರಡಬಹುದು. ಬೆಳಗಿನ ೯ ಗಂಟೆಗೆ ಅಲ್ಲಿಸೇರಿದರೆ ಅಲ್ಲಿಯ ಸೂರ್ಯ ಸರೋವರ - ಪಂಪಾ ಸರೋವರ , ಗೀತೋಪದೇಶದ ಸ್ತಳ -ಇಲ್ಲಿ ಗೀತ ಪರಾಯಣ ವಿಶೇಷ. , ಭೀಮಶ ಪಿತಾಮಹರು ಶರ ಶಯ್ಯೆಯಲ್ಲಿಮಲಗಿದ ಸ್ತಳ ಇಲ್ಲೇ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ವಿಶೇಷ . ಬ್ರಹ್ಮ ಸರೋವರ -ಅತೀದೊಡ್ಡ ಪ್ರಕೃತಿ ನಿರ್ಮಿತ ಸರೋವರ, ಸೂರ್ಯ , ಚಂದ್ರ ಗ್ರಹಣ ದಿನದಂದು ಲಕ್ಷ ಗಟ್ಟಲೆ ಜನ ಬಂದು ಸ್ನಾನಮಾಡುವ ಸರೋವರ. ನೋಡಿ ಅಲ್ಲಿಂದ ಡೆಲ್ಲಿ ಸೇರಬಹುದು.
ಮರುದಿನ ಬೇಗ ಹೊರಟರೆ ಮಥುರ, ಗೋಕುಲ, ವೃಂದಾವನ , ನೋಡಬಹುದು. ಇಲ್ಲಿ ಗೈಡ್ಸ್ ಮತ್ತು ಪಂಡರ ಹಾವಳಿ ತುಂಬಾ ಜಾಸ್ತಿ. ಗೋಧಾನ , ಬ್ರಾಹ್ಮಣ ಭೋಜನಧಾನ ಅಂತೆಲ್ಲ ಹೇಳಿ ಹಣ ಸುಲಿಗೆ ಮಾಡುವವರೆ ಜಾಸ್ತಿ. ಜಾಗ್ರತೆ ವಹಿಸುವುದು ಉತ್ತಮ.ಶ್ರೀ ಕೃಷ್ಣ ನ ಜನ್ಮಸ್ತಾನ , (ಈಗ ಅರ್ದದಸ್ಟು ಜಾಗದಲ್ಲಿ ಮಸಿದಿ ಇದೆ.) ಶ್ರೀ ಕೃಷ್ಣ ಓಡಿ ಆಡಿದ ಸ್ತಳ. ,(ಫಂಡರು ಗೈಡ್ಸ್ ಹೇಳುವಂತೆ). ಗೋವರ್ಧನ ಗಿರಿ ನೋಡಬಹುದು. ರಾತ್ರಿ ಡೆಲ್ಲಿ ತಲುಪಿ ವಿರಮಿಸಿ ಮರುದಿನ ರಿಟರ್ನ್ ಹೊರಡಬಹುದು, ಇಲ್ಲಹುದು. ಇಲ್ಲವೇ ಡೆಲ್ಲಿ ಒಂದು ದಿನ ನೊಡಿ ಬರಬಹುದು.
ವಿ.ಸೂ.ಸಕ್ಕರೆ ಖಾಯಿಲೆ, ರಕ್ತದೊತ್ತಡ ,ಆಸ್ತಮಾ ಗಳಿಗೆ ಮದ್ದು ತೆಗೆದು ಕೊಳ್ಳುವವರು ತಮಗೆ ಬೇಕಾದಷ್ಟು ಮದ್ದಿನೊಡನೆ, ನೋವಿಗೆ, ಜ್ವರಕ್ಕೆ, ಬೇಕಾದ ಮದ್ದನ್ನು ಕೊಂಡುಹೊಗುವುದು ಉತ್ತಮ. Dryfruits ಕೊಂಡುಹೊದರೆ ದೇವರ ಸಮರ್ಪಣೆಗು ತದನಂತರ ಸ್ವಕಾರ್ಯಕ್ಕು ಬರುತ್ತದೆ.
Distence chart
ಡೆಲ್ಲಿ ಇಂದ ಹರಿದ್ವಾರ.......220KM
ಹರಿದ್ವಾರ ದಿಂದ ರುಶಿಕೆಹ್ಸ...20KM
ಹರಿದ್ವಾರ ದಿಂದ ಬದರಿ.....321KM
ಹರಿದ್ವಾರ ದಿಂದ ಕುರುಕ್ಷೇತ್ರ 141km
ಕುರುಕ್ಷೇತ್ರ ದಿಂದ ಡೆಲ್ಲಿ.154KM
ಡೆಲ್ಲಿ ಇಂದ ಮಥುರ. 178KM
ಕಮಲಾತನಯ.

No comments:
Post a Comment