Thursday, 4 February 2021

ಕ್ಯಾರೆಟ್ ಪಾಯಸ :

ಬೇಕಾಗುವ ಪದಾರ್ಥಗಳು :

ಕ್ಯಾರೆಟ್ - 1 ಕಿಲೊ

ಹಾಲು - 1 ಲೀಟರ್ (ಆರೆಂಜ್ ಪ್ಯಾಕೆಟ್)

ಗೋಡಂಬಿ - 100 ಗ್ರಾಮ್

ಸಕ್ಕರೆ - 4೦೦ ಗ್ರಾಮ್

ಮಿಲ್ಕ್ ಮೇಡ್/ಮಿಠಾಯಿ ಮೇಟ್ - 400 ಗ್ರಾಮ್ ಡಬ್ಬಿ

ಏಲಕ್ಕಿ - 8-10

ಮಾಡುವ ವಿಧಾನ :

100 ಗ್ರಾಮ್ ಗೋಡಂಬಿಯನ್ನು ಒಂದು ಸಣ್ಣ ಬಟ್ಟಲಿನಲ್ಲಿ ನೀರು ಹಾಕಿ, ನೆನೆಯಲು ಇಡಿ. ನಂತರ ಕ್ಯಾರೆಟ್ಟಿನ ಮೇಲ್ ಸಿಪ್ಪೆಯನ್ನು ತೆಗೆದು, ಸಣ್ಣದಾಗಿ ಹೆಚ್ಚಿಕೊಳ್ಳಿ. ಹಾಲನ್ನು ಕುದಿಯಲು ಇಡಿ. ಒಂದು ಪಾತ್ರೆಯಲ್ಲಿ ಹೆಚ್ಚಿಟ್ಟ ಕ್ಯಾರೆಟನ್ನು, ಕುದಿಸಿದ ಹಾಲು (ಪೂರ ಒಂದು ಲೀಟರ್) ಮಿಕ್ಸ್ ಮಾಡಿ. ಕುಕ್ಕರಲ್ಲಿ ಇಟ್ಟು 7 ರಿಂದ 8 ಸ್ಟೀಮ್ ಕೂಗಿಸಿ. ಸ್ಟೀಮ್ ಬಿಟ್ಟಮೇಲೆ ಪಾತ್ರೆಯನ್ನು ಹೊರಗೆ ತೆಗೆದು ಆರಲು ಇಡಿ. ಮಿಕ್ಸಿಯಲ್ಲಿ ಬೆಂದ ಕ್ಯಾರೆಟ್ ಚೂರುಗಳನ್ನು, ನೆನೆಸಿಟ್ಟ ಗೋಡಂಬಿಯನ್ನು, ಏಲಕ್ಕಿಯನ್ನು ಸ್ವಲ್ಪ ಹಾಲಿನ ಜೊತೆಗೆ ಪೇಸ್ಟ್ ಆಗುವ ರೀತಿ ಗ್ರೈಂಡ್ ಮಾಡಿಕೊಳ್ಳಿ. ನಂತರ ಅದನ್ನು ಒಲೆಯಮೇಲೆ ಸಣ್ಣ ಉರಿಯಲ್ಲಿ ಕಾಯಿಸುತ್ತ 400 ಗ್ರಾಮ್ ಸಕ್ಕರೆಯನ್ನು, 400 ಗ್ರಾಮ್ ಮಿಲ್ಕ್ ಮೇಡ್/ಮಿಠಾಯಿ ಮೇಟ್ ಮಿಕ್ಸ್ ಮಾಡಿ. ಆರಿದ ನಂತರ ಅದನ್ನು ಫ್ರಿಡ್ಜಲ್ಲಿ ಇಡಿ. ನಂತರ... ಅಷ್ಟೇ !!! ಕ್ಯಾರೆಟ್ ಪಾಯಸ ಸವಿಯಲು ಸಿದ್ದ !

Friday, 15 January 2021

*ಅವರೇಕಾಳು ತಿನ್ನೋದ್ರಿಂದ ಶರೀರಕ್ಕೆ ಏನ್ ಲಾಭ ಅನ್ನೋರು ತಿಳಿಯಬೇಕಾದ ವಿಷಯ*

ಸಾಮಾನ್ಯವಾಗಿ ಮನುಷ್ಯನ ಶರೀರಕ್ಕೆ ಹಣ್ಣು ತರಕಾರಿ, ದವಸ ದಾನ್ಯಗಳು ಹಾಗೂ ದ್ವಿದಳ ದಾನ್ಯಗಳು ಹೆಚ್ಚಿನ ಪ್ರೊಟೀನ್ ವಿಟಮಿನ್ ಅಂಶವನ್ನು ಒದಗಿಸಿಕೊಡುತ್ತವೆ. ಆದ್ರೆ ನಾವುಗಳು ಸೇವನೆ ಮಾಡುವಂತ ಒಂದಿಷ್ಟು ತರಕಾರಿ ಹಣ್ಣು ದ್ವಿದಳಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರೋದಿಲ್ಲ. ನಾವುಗಳು ಅವರೆಕಾಳನ್ನು ವಿವಿಧ ಅಡುಗೆಗಳಿಗೆ ಬಳಸುತ್ತೇವೆ ಹಾಗೂ ಬೇಯಿಸಿಕೊಡು ಸಹ ಸೇವನೆ ಮಾಡುತ್ತಿವೆ ಆದ್ರೆ ಇದರಿಂದ ನಮ್ಮ ಶರೀರಕ್ಕೆ ಏನ್ ಲಾಭವಿದೆ ಅನ್ನೋದನ್ನ ತಿಳಿದುಕೊಂಡಿರೋದಿಲ್ಲ.

ಇದರ ಬಗ್ಗೆ ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.


ಮೊದಲನೆಯದಾಗಿ ಶರೀರಕ್ಕೆ ಪ್ರೊಟೀನ್ ಅಂಶವನ್ನು ನೀಡುವಂತ ಗುಣ ಇದರಲ್ಲಿದೆ. ಹೌದು ನಾವುಗಳು ಮಟನ್ ಚಿಕನ್ ತಿನ್ನುವುದರಿಂದ ಏನ್ ಸಿಗತ್ತೋ ಅಂತಹ ಆರೋಗ್ಯಕಾರಿ ಅಂಶವನ್ನು ಈ ಅವರೆಕಾಳಿನಿಂದ ಪಡೆಯಬಹುದಾಗಿದೆ. ಅಷ್ಟೇ ಅಲ್ದೆ ಫೈಬರ್ ಅಂಶ ಇರುವುದರಿಂದ ದೇಹಕ್ಕೆ ಉತ್ತಮ ಅರೋಗ್ಯ ಲಭಿಸುತ್ತದೆ ದೇಹಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಅಂಶವನ್ನು ಅವರೆಕಾಳಿನಲ್ಲಿ ಪಡೆಯಬಹುದಾಗಿದೆ.


ದೇಹ ಬೆಳವಣಿಗೆ ಆಗಲು ಸಹಕಾರಿಯಾಗುವಂತ ಹಾರ್ಮೋನ್ ಬೆಳವಣಿಗೆಗೆ ಇದು ಪೂರಕವಾಗಿದೆ, ಇನ್ನು ಅವರೆಕಾಳಿನಿಂದ ಸಿಗುವ ಲಾಭವೇನು ಅನ್ನೋದನ್ನ ನೋಡುವದಾದರೆ ಅಜೀರ್ಣತೆ ನಿವಾರಣೆ ಯಾಗುವುದು ಪದೇ ಪದೇ ಹಸಿವು ಆದ್ರೆ ಅದನ್ನು ನಿಯಂತ್ರಿಸುವ ಗುಣ ಇದರಲ್ಲಿದೆ. ಅವರೆಕಾಳಿನಲ್ಲಿ ಹೆಚ್ಚಾಗಿ ಮ್ಯಾಗ್ನೇಶಿಯಂ, ಪೊಟ್ಯಾಶಿಯಂ ಹಾಗೆ ಕ್ಯಾಲ್ಶಿಯಂ ಅಂಶಗಳಿವೆ ಆದ್ದರಿಂದ ಇದು ದೇಹದ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಬಲ್ಲದು. ಗ್ರಾಮೀಣ ಭಾಗದ ಜನರು ಅವರೆಕಾಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಾರೆ ಆದ್ದರಿಂದ ಅವರ ಶರೀರ ಗಟ್ಟಿಮುಟ್ಟಾಗಿರುತ್ತದೆ. ಮತ್ಯಾಕೆ ತಡ ವಾರದಲ್ಲಿ ಎರಡು ಮೂರೂ ಬಾರಿಯಾದರೂ ಅವರೇಕಾಳು ಸೇವನೆ ಮಾಡಿಇದರ ಲಾಭವನ್ನು ನಿಮ್ಮದಾಗಿಸಿಕೊಳ್ಳಿ.

*ಸುಲಭವಾಗಿ ಬಾಯಲ್ಲಿ ನೀರೂರುವಂತಹ ತಮಿಳುನಾಡು ಶೈಲಿಯ ರಸಂ ಹೇಗೆ ಮಾಡುವುದು ಗೊತ್ತೇ??*

ನಮಸ್ಕಾರ ಸ್ನೇಹಿತರೇ, ಇಂದು ನಾವು ತಮಿಳುನಾಡು ಶೈಲಿಯ ರಸಂ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ತಮಿಳುನಾಡು ಶೈಲಿಯ ರಸಂ ಮಾಡಲು ಬೇಕಾಗುವ ಸಾಮಗ್ರಿಗಳು: 2 ಬಟ್ಟಲು ತೊಗರಿಬೇಳೆ, ಸ್ವಲ್ಪ ಎಣ್ಣೆ, 1 ಟೊಮೇಟೊ , 2 ಚಮಚ ಕಾಳುಮೆಣಸು, 3 ಚಮಚ ಸಾಸಿವೆ, ಎರಡೂವರೆ ಚಮಚ ಜೀರಿಗೆ, 2 ಚಮಚ ಮೆಂತ್ಯ, 1 ಬಟ್ಟಲು ಧನಿಯಾ, ಸ್ವಲ್ಪ ಇಂಗು, 8 – 10 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, 1 ಚಮಚ ಅರಿಶಿನ ಪುಡಿ, ಸ್ವಲ್ಪ ಬೆಲ್ಲ, ಸ್ವಲ್ಪ ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು.


ತಮಿಳುನಾಡು ಶೈಲಿಯ ರಸಂ ಮಾಡುವ ವಿಧಾನ: ಮೊದಲಿಗೆ ಒಂದು ಕುಕ್ಕರನ್ನು ತೆಗೆದುಕೊಂಡು ಅದಕ್ಕೆ 2 ಬಟ್ಟಲು ತೊಗರಿಬೇಳೆ, 4 ಬಟ್ಟಲು ನೀರು, 1 ಚಮಚ ಎಣ್ಣೆ, 1 ಟೊಮೇಟೊವನ್ನು ಹಾಕಿ 4 – 5 ವಿಷಲ್ ನನ್ನು ಹಾಕಿಸಿ ತಣ್ಣಗಾಗಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 2 ಚಮಚದಷ್ಟು ಕಾಳುಮೆಣಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಚಮಚದಷ್ಟು ಸಾಸಿವೆ, 2 ಚಮಚದಷ್ಟು ಜೀರಿಗೆ, 2 ಚಮಚ ಮೆಂತ್ಯವನ್ನು ಹಾಕಿ ಕಹಿ ಹೋಗುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಬಟ್ಟಲಿನಷ್ಟು ಧನಿಯಾವನ್ನು ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ಇಂಗುವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ನುಣ್ಣಗೆ ಪುಡಿಮಾಡಿಕೊಂಡರೆ ತಮಿಳುನಾಡು ಶೈಲಿಯ ರಸಂ ಪುಡಿ ರೆಡಿಯಾಗುತ್ತದೆ.


ನಂತರ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತದನಂತರ 1 ಚಿಟಿಕೆ ಇಂಗು, ಬೇಯಿಸಿಕೊಂಡ ಬೇಳೆ ಹಾಗೂ ಟೊಮೊಟೊವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಬೆಲ್ಲ, ಹುಣಸೆ ಹಣ್ಣಿನ ರಸ, ರುಚಿಗೆ ತಕಷ್ಟು ಉಪ್ಪು, 4 ಚಮಚ ರಸಂ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಕೊನೆಯದಾಗಿ ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿಕೊಂಡರೆ ತಮಿಳುನಾಡು ಶೈಲಿಯ ರಸಂ ಸವಿಯಲು ಸಿದ್ದ.

Monday, 28 December 2020

*ಆಂಧ್ರ ಶೈಲಿಯ ದಾಲ್ ಪಪ್ಪು ಹೀಗೆ ಮಾಡಿ ನೋಡಿ, ಎಲ್ಲರೂ ಸ್ವಲ್ಪ ಜಾಸ್ತಿನೇ ಊಟ ಮಾಡ್ತಾರೆ. ಎಲ್ಲರಿಗೂ ಇಷ್ಟವಾಗುತ್ತದೆ.*

ಆಂಧ್ರಶೈಲಿಯ ದಾಲ್ ಪಪ್ಪು ಮಾಡುವ ವಿಧಾನವನ್ನು ತಿಳಿಸುತ್ತೇವೆ. ಆಂಧ್ರ ಶೈಲಿಯ ದಾಲ್ ಪಪ್ಪು ಮಾಡಲು ಬೇಕಾಗುವ ಸಾಮಗ್ರಿಗಳು: 1 ಕಟ್ಟು ಪಾಲಕ್ ಸೊಪ್ಪು, ಅರ್ಧ ಕಟ್ಟು ಚಿಲ್ಕರವೆ ಸೊಪ್ಪು, 2 ಈರುಳ್ಳಿ, 1 ಟೊಮ್ಯಾಟೊ, ಅರ್ಧ ಬಟ್ಟಲು ತೊಗರಿಬೇಳೆ, ಕಾಲು ಬಟ್ಟಲು ಹೆಸರುಬೇಳೆ, 10 -12 ಹಸಿಮೆಣಸಿನಕಾಯಿ, 2 ಒಣಮೆಣಸಿನಕಾಯಿ, 4 ಚಮಚ ಎಣ್ಣೆ, 1 ಗೆಡ್ಡೆ ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, 1 ಚಮಚ ಜೀರಿಗೆ, ಅರ್ಧ ಚಮಚದಷ್ಟು ಅರಿಶಿನ ಪುಡಿ, 1 ಚಮಚ ಧನಿಯಾ ಪುಡಿ, ಅರ್ಧ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು, 1 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ಆಂಧ್ರಶೈಲಿಯ ದಾಲ್ ಪಪ್ಪು ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು, ಅದಕ್ಕೆ ತೊಗರಿಬೇಳೆ ಮತ್ತು ಹೆಸರು ಬೇಳೆಯನ್ನು ಹಾಕಿ ನೀರಿನಿಂದ 2 – 3 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟುಕೊಂಡು ಅದಕ್ಕೆ ತೊಳೆದ ಬೇಳೆ, ಸ್ವಲ್ಪ ನೀರು, ಅರಿಶಿನ ಪುಡಿ, 1 ಚಮಚ ಎಣ್ಣೆಯನ್ನು ಹಾಕಿ 3 ವಿಷಲ್ ಆದ ನಂತರ ಕುಕ್ಕರ್ ತಣ್ಣಗಾಗಲು ಬಿಡಿ.ಕುಕ್ಕರ್ ತಣ್ಣಗಾದ ನಂತರ ಅದರಲ್ಲಿರುವ ಬೇಳೆಯನ್ನು ಸ್ಮಾಶ್ ಮಾಡಿಕೊಳ್ಳಿ. ನಂತರ ಇದಕ್ಕೆ ಕಾಲು ಲೋಟದಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

ಎಣ್ಣೆ ಕಾ’ದ ನಂತರ ಅದಕ್ಕೆ ಜೀರಿಗೆ, ಕರಿಬೇವು, ಹಚ್ಚಿದ ಹಸಿಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅರ್ಧ ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ ಹಾಕಿ 2 – 3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೊಟೊ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಪಾಲಾಕ್ ಸೊಪ್ಪು, ಚಿಲ್ಕರವೆ ಸೊಪ್ಪು, ಅರ್ಧ ಲೋಟದಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿಕೊಂಡು ಐದು ನಿಮಿಷಗಳ ಕಾಲ ಬೇಯಲು ಬಿಡಿ. ನಂತರ ನೆನೆಸಿದ ಹುಣಸೆ ಹಣ್ಣಿನ ರಸ, ಧನಿಯಾ ಪುಡಿ, ಸ್ಮಾಶ್ ಮಾಡಿದ ಬೇಳೆಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮತ್ತೆ 5 ನಿಮಿಷಗಳ ಕಾಲ ಬೇಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾದ ನಂತರ ಅದಕ್ಕೆ ಸಾಸಿವೆ, ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ.ಈ ಒಗ್ಗರಣೆಯನ್ನು ಬೇಯುತ್ತಿರುವ ಮತ್ತೊಂದು ಬಾಣಲಿಗೆ ಹಾಕಿಕೊಂಡು ಮಿಕ್ಸ್ ಮಾಡಿದರೆ ಆಂಧ್ರ ಶೈಲಿಯ ದಾಲ್ ಪಪ್ಪು ಸವಿಯಲು ಸಿದ್ಧ.

Saturday, 26 December 2020

Indina dinave shubha dinavu

 ಇಂದಿನ ದಿನವೇ ಶುಭ ದಿನವು

ಇಂದಿನ ವಾರ ಶುಭ ವಾರ

ಇಂದಿನ ತಾರೆ ಶುಭ ತಾರೆ

ಇಂದಿನ ಯೋಗ ಶುಭ ಯೋಗ

ಇಂದಿನ ಕರಣ ಶುಭ ಕರಣ

ಇಂದು ಪುರಂದರವಿಠಲರಾಯನ

ಸಂದರ್ಶನ ಫಲವೆಮಗಾಯಿತು


Indina dinave shubha Dinavu

indina vaara shubhaVaara

indina taare shubhataare

indina Yoga shubhayoga

indina karna Shubha karna

indu PurandaraviThalaraayana

sandarshana phalavemagaayithu.

Tuesday, 22 December 2020

About Supreme Personality Lord Sri Krishna

 EXCELLENT INFO ABOUT 

*SRi KRISHNA*


1) Krishna was born *5252 years  ago* 

2) Date of *Birth* : *18 th July,3228 B.C*

3) Month : *Shravan*

4) Day :  *Ashtami*

5) Nakshatra : *Rohini*

6) Day : *Wednesday*

7) Time : *00:00 A.M.*

8) Shri Krishna *lived 125 years, 08 months & 07 days.*

9) Date of *Death* : *18th February 3102BC.*

10) When Krishna was *89 years old* ; the mega war *(Kurukshetra)* war took place. 

11) He died *36 years after the Kurukshetra* war.

12) Kurukshetra War was *started on Mrigashira Shukla Ekadashi,BC 3139. i.e "8th December 3139BC" and ended on "25th December, 3139BC".*  

12) There was a *Solar eclipse between "3p.m to 5p.m on 21st December, 3139BC" ; cause of Jayadrath's death.*

13) Bhishma died on *2nd February,(First Ekadasi of the Uttarayana), in 3138 B.C.*

14) Krishna  is worshipped as:

(a)Krishna *Kanhaiyya* : *Mathura*

(b) *Jagannath*:- In *Odisha*

(c) *Vithoba*:- In *Maharashtra*

(d) *Srinath*:  In *Rajasthan*

(e) *Dwarakadheesh*: In *Gujarat*

(f) *Ranchhod*: In *Gujarat*

(g) *Krishna* : *Udipi, Karnataka*

15) *Bilological Father*: *Vasudeva*

16) *Biological Mother*: *Devaki*

17) *Adopted Father*:- *Nanda*

18) *Adopted Mother*: *Yashoda*

19 *Elder Brother*: *Balaram*

20) *Sister*: *Subhadra*

21) *Birth Place*: *Mathura*

22) *Wives*: *Rukmini, Satyabhama, Jambavati, Kalindi, Mitravinda, Nagnajiti, Bhadra, Lakshmana*

23) Krishna is reported to have *Killed only 4 people* in his life time. 

(i) *Chanoora* ; the Wrestler

(ii) *Kamsa* ; his maternal uncle

(iii) & (iv) *Shishupaala and Dantavakra* ; his cousins. 

24) Life was not fair to him at all. His *mother* was from *Ugra clan*, and *Father* from *Yadava clan,* inter-racial marriage. 

25) He was *born dark skinned.* He was not named at all throughout his life. The whole village of Gokul started calling him the black one ; *Kanha*. He was ridiculed and teased for being black, short and adopted too. His childhood was wrought with life threatening situations.

26) *'Drought' and "threat of wild wolves" made them shift from 'Gokul' to 'Vrindavan' at the age 9.*

27) He stayed in Vrindavan *till 14~16 years*. He killed his own uncle at the age of  14~16 years at Mathura.He then released  his biological mother and father. 

28) He *never returned to Vrindavan ever again.*

29) He had to *migrate to Dwaraka from Mathura due to threat of a Sindhu King ;  Kala Yaavana.*

30) He *defeated 'Jarasandha' with the help of 'Vainatheya' Tribes on Gomantaka hill (now Goa).*

31) He *rebuilt Dwaraka*. 

32) He then *left to Sandipani's Ashram in Ujjain* to start his schooling at age 16~18. 

33) He had to *fight the pirates from Afrika and rescue his teachers son ;  Punardatta*;  who *was kidnapped near Prabhasa* ; a sea port in Gujarat. 

34) After his education, he came to know about his cousins fate of Vanvas. He came to their rescue in ''Wax house'' and later his cousins got married to *Draupadi.* His role was immense in this saga. 

35) Then, he helped his cousins  establish Indraprastha and their Kingdom.


36) He *saved Draupadi from embarrassment.*


37) He *stood by his cousins during their exile.*

38) He stood by them and *made them win the Kurushetra war.*


39) He *saw his cherished city, Dwaraka washed away.* 

40) He was *killed by a hunter (Jara by name)* in nearby forest. 

41) He never did any miracles. His life was not a successful one. There was not a single moment when he was at peace throughout his life. At every turn, he had challenges and even more bigger challenges. 

42) He *faced everything and everyone with a sense of responsibility and yet remained unattached.*


43)  He is the *only person, who knew the past and probably future ; yet he lived at that present moment always.*


44) He and his life is truly *an example for every human being.*🌷🙏🏻

Saturday, 12 December 2020

ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೇ ನಮಃ.

*ತೋಳ್ ಕಂಡಾರ್ ತೋಳೇ ಕಂಡಾರ್,*

*ತೊಡು ಕழರ್ ಕಮಲಂ ಅನ್ನ ತಾಳ್ ಕಂಡಾರ್*

*ತಾಳೇ ಕಂಡಾರ್,*

*ಆರೇ ವಡಿವಿನೈ ಮುಡಿಯ ಕಂಡಾರ್,*

*ಊழ்ಕಂಡ ಶಮಯತ್ತು*

*ಅನ್ನಾನ್ ಉರುವು ಕಂಡಾರೈ ಒತ್ತಾರ್.*


ಇದು ತಮಿಳು ಮಹಾಕವಿ ಕಂಬನ್ ತಮ್ಮ ರಾಮಾಯಣದಲ್ಲಿ ಶ್ರೀ ರಾಮಚಂದ್ರನ ಸೌಂದರ್ಯವನ್ನು ವರ್ಣಿಸಿರುವ ಒಂದು ಪದ್ಯ. 


ಮಿಥಿಲಾಪಟ್ಟಣದಲ್ಲಿ ವಿಶ್ವಾಮಿತ್ರರ ಹಿಂದೆ ರಾಮ ಲಕ್ಷ್ಮಣರು ನಡೆದು ಹೋಗುತ್ತಿದ್ದ ಸಂದರ್ಭ. ಈ ಮೂವರೇ ನಡೆದು ಹೋಗುತ್ತಿದ್ದರೂ ದೊಡ್ಡ ಮೆರವಣಿಗೆ ಹೋದರೆ ಬೆರಗಾಗಿ ನೋಡಲು ಸೇರುವ ಜನಸಂದಣಿಯಂತೆ ಜನ ಸೇರಿದ್ದರಂತೆ. ಅದರಲ್ಲೂ ಹೆಚ್ಚುಜನ ಸ್ತ್ರೀಯರೇ. ಅದಕ್ಕೆ ಕಾರಣ ರಾಮಲಕ್ಷ್ಮಣರ ರೂಪ, ನಡಿಗೆಯ ಸೊಬಗು. ಲಕ್ಷ್ಮಣ ಶುದ್ಧ ಗೌರವರ್ಣದ ಸುಂದರ. ರಾಮನದು ಅಪರೂಪದ ಶ್ಯಾಮವರ್ಣ. ಈ ಅಪೂರ್ವ ರೂಪ ಲಾವಣ್ಯವನ್ನು, ಸೌಂದರ್ಯವನ್ನು ನೋಡಿ ಸವಿಯಲೆಂದೇ ಹೆಂಗಸರು ಸೇರಿದ್ದರು. 


ಅವರಲ್ಲಿ ಒಬ್ಬಳು ಶ್ರೀರಾಮಚಂದ್ರನ  ದೃಢವಾದ  ದುಂಡು ತೋಳುಗಳನ್ನು ನೋಡಿದಳು. ಅವುಗಳ ಚೆಲುವನ್ನೇ ತನ್ನ ಕಂಗಳಿಂದ ಹೀರುತ್ತಾ ಮೈಮರೆತಳು. ತನ್ನ ದೃಷ್ಟಿಯಿಂದ ರಾಮಚಂದ್ರ ಮರೆಯಾಗುವವರೆಗೂ ಅವಳು ಆ ತೋಳುಗಳನ್ನೇ ನೋಡುತ್ತಿದ್ದಳೇ ವಿನಃ ರಾಮಚಂದ್ರನನ್ನು ಪೂರ್ತಿಯಾಗಿ ಅವಳು ನೋಡಲೇ ಇಲ್ಲ. ಅದನ್ನೇ ಕಂಬಮಹಾಕವಿ *ತೋಳ್ ಕಂಡಾರ್ ತೋಳೇ ಕಂಡಾರ್* ಎಂದು ವರ್ಣಿಸಿರುವುದು.   


ಅವಳಂತೆಯೇ ಇನ್ನೊಬ್ಬಳು ತಾವರೆ ಹೂವಿನಂತಿದ್ದ ರಾಮನ ಪಾದಗಳನ್ನು ನೋಡಿ ಆ ಪಾದಕಮಲಗಳಲ್ಲೇ ಕಣ್ಣನ್ನೂ ಮನವನ್ನೂ ನೆಟ್ಟಳು. ಅಷ್ಟು ಚಂದ ಆ ಪಾದಗಳು! ಇನ್ನೂ ಒಬ್ಬಳು ರಾಮನ ಅಗಲವಾದ ಹಸ್ತಗಳನ್ನೂ ನೀಳಬೆರಳುಗಳನ್ನೂ ನೋಡುತ್ತಾ ಅವುಗಳ ಸೌಂದರ್ಯದಲ್ಲೇ ಮಗ್ನಳಾಗಿ ಹೋದಳು. 

ಹೀಗೆ ಒಬ್ಬೊಬ್ಬರೂ ರಾಮಚಂದ್ರನ ಒಂದೊಂದೇ ಅವಯವಗಳ ಸೊಬಗನ್ನು ಕಂಡು ಅನುಭವಿಸಿದರೂ, ತಾವು ಅವನ ಪರಿಪೂರ್ಣ ಸೌಂದರ್ಯವನ್ನು ಅನುಭವಿಸಿದಂತೆಯೇ ಅವರವರಲ್ಲಿ  ವರ್ಣಿಸತೊಡಗಿದರಂತೆ.  


ತೋಳನ್ನೇ ಕಂಡವಳು ರಾಮನ ಪಾದಗಳನ್ನು ಕಾಣಲಿಲ್ಲ!

ಪಾದಗಳನ್ನು ನೋಡಿದವಳು ರಾಮನ ತೋಳುಗಳನ್ನು ನೋಡಲಿಲ್ಲ. ಅವನ ಸುಂದರ ಮುಂಗೈಯನ್ನು ನೋಡಿದವಳು ತೋಳುಗಳನ್ನೂ, ಪಾದಗಳನ್ನೂ ಕಾಣಲಿಲ್ಲ. ಆದರೆ ಅವರು ನೋಡಿದ ಒಂದೊಂದೇ ಅಂಗಗಳ ಸೌಂದರ್ಯ ಆಸ್ವಾದನೆಯಲ್ಲೇ ಅವರು ಮೈಮರೆತರಂತೆ. ಭಗವಂತನ ಮುಡಿಯ ಚೆಲುವನ್ನು ಯಾರೂ ಕಾಣಲಿಲ್ಲವಲ್ಲ! ತೊಡೆಯ ಚೆಲುವನ್ನೂ ಕಾಣಲಿಲ್ಲ.  ಅಯ್ಯೋ! ಇವರಾರೂ ರಾಮನನ್ನು ಪೂರ್ಣವಾಗಿ ನೋಡಿ ಅನುಭವಿಸಲಿಲ್ಲವಲ್ಲಾ ಎಂದು ಕಂಬರು ಆಳುತ್ತಾರೆ. 


ಈ ಹೆಂಗಸರು ಹೀಗೆ ಮೈಮರೆಯಲೂ ಒಂದು ಕಾರಣವಿದೆಯಂತೆ. 

ರಾಮನ ತೋಳುಗಳನ್ನು ನೋಡಿದವಳು, " ಓ! ಇದೇ ತೋಳಲ್ಲವೇ ಶಿವಧನುಸ್ಸನ್ನು ಮುರಿದದ್ದು?" ಎನ್ನುತ್ತಾ  ಆ ಶಿವಧನುರ್ಭಂಗದ ಘಟನೆಯನ್ನೇ ನೆನೆದುಕೊಂಡಳಂತೆ. 


ಪಾದಗಳನ್ನು ನೋಡಿ ಆನಂದಿಸಿದವಳು "ಅಬ್ಬಾ! ಇದೇ ಪಾದಗಳಲ್ಲವೇ ಕಲ್ಲಾಗಿದ್ದ ಅಹಲ್ಯೆಯ ಶಾಪ ವಿಮೋಚನೆ ಮಾಡಿದ್ದು? " ಎಂದು ತಾನೇ ಅಹಲ್ಯೆ ಎನ್ನುವಂತೆ ಮೈಮರೆತಳಂತೆ!


ಅವನ ಮುಂಗೈ ಬೆರಳುಗಳ ಚೆಲುವನ್ನು ಕಂಡವಳು, " ಇದೇ ಕೈಗಳಿಂದಲ್ಲವೇ  ತಾಟಕೆಯನ್ನು ರಾಮ ವಧಿಸಿದ್ದು ? " ಎಂದು ತನ್ನ ಗೆಳತಿಯೊಡನೆ ಹೇಳಿದಳಂತೆ. ಹೀಗೇ ಮಾತಾಡುತ್ತಾ ಅವರೆಲ್ಲ ಗದ್ಗದಿತರಾದರಂತೆ. ತಾವು ರಾಮಚಂದ್ರನನ್ನು ಪೂರ್ತಿಯಾಗಿ ನೋಡಲಿಲ್ಲವಲ್ಲಾ ಎಂದು ಅವರಿಗೆ ತೋಚಲೇ ಇಲ್ಲವಂತೆ. 


ಅಷ್ಟು ಸುಂದರ ಶ್ರೀ ರಾಮಚಂದ್ರ. ರಾಮಾವತಾರದುದ್ದಕ್ಕೂ

ಅವನ ಸೌಂದರ್ಯವನ್ನು ಆಸ್ವಾದಿಸಿದವರು ಎಷ್ಟೋ ಜನ. ಮಲಗಿದ್ದ ಬಾಲರಾಮನನ್ನು ಕಂಡ ವಿಶ್ವಾಮಿತ್ರರು  ಕೌಸಲ್ಯೆಯ ಭಾಗ್ಯವನ್ನು ಕಂಡು ಕರುಬಿ, ಕೌಸಲ್ಯಾ ಸುಪ್ರಜಾ ರಾಮ ಎಂದು ಹಾಡಿದರು. ಶಾಂತನಾಗಿ ಕಣ್ಣು ಮುಚ್ಚಿ ಮಲಗಿದ್ದ ಬಾಲಕ ರಾಮಚಂದ್ರ ಎಷ್ಟು  ಮುದ್ದಾಗಿರಬಹುದು? 


ಮಿಥಿಲೆಯ ಜನರಂತೂ ರಾಮನನ್ನು ಕಂಡು ಹಿಗ್ಗಿ,  ತಮ್ಮೂರಿನ ಸುಂದರಿ ಸೀತೆಗೆ  ಅಳಿಯ ರಾಮ ಹೇಳಿ ಮಾಡಿಸಿದಂಥ ಜೋಡಿ ಎಂದೇ ಸಂತೋಷಪಟ್ಟರಂತೆ. 


ಮುಂದೆ ಚಿತ್ರಕೂಟದಲ್ಲಿ ಕುಳಿತ ರಾಮಚಂದ್ರನನ್ನು ಕಂಡು ಭರತ ನಿಧಿಯನ್ನು ಕಂಡವನಂತೆ ಆ ಕುಳಿತ ಭಂಗಿಗೇ ಮನಸೋತನಂತೆ. 

ಶೂರ್ಪಣಖೆಯೋ! ಪಂಚವಟಿಯಲ್ಲಿ ಸೀತಾ ಲಕ್ಷ್ಮಣರೊಡನೆ ವಿನೋದವಾಗಿ ಹರಟುತ್ತಿದ್ದ ರಾಮಚಂದ್ರನನ್ನು ಕಂಡು ಮೋಹಗೊಂಡಳು. 

ಕಿಷ್ಕಿಂಧೆಯಲ್ಲಿ ವಾಲಿವಧೆಯ ನಂತರ ಅವನ ಪತ್ನಿ  ತಾರೆಗೆ, ತನ್ನ ಬಿಲ್ಲಿನ ಒಂದು ತುದಿಯನ್ನು ನೆಲದಲ್ಲಿ ಊರಿ  ಇನ್ನೊಂದು ತುದಿಗೆ ಗಲ್ಲವಾನಿಸಿ ನಿಂತ ರಾಮಚಂದ್ರ ಮೋಹಕವಾಗಿ ಕಂಡ. 

ಅದೇ ರಾಮನೇ ಮಂಡೋದರಿಗೆ ಶಂಖಚಕ್ರಧಾರಿಯಾಗಿ ದರ್ಶನ ಕೊಟ್ಟ. 


ಹೀಗೆ ರಾಮಾಯಣದುದ್ದಕ್ಕೂ ಶ್ರೀರಾಮನ ವರ್ಣನೆಯನ್ನು ಕಾಣುವ ನಮಗೆ ಅಯ್ಯೋ! ನಾವು ರಾಮನನ್ನು ಕಾಣಲಿಲ್ಲವಲ್ಲ! ಎಂದು ಅನ್ನಿಸದೇ ಇರದು. 

ಇಂದಿಗೂ ಅರ್ಚಾಮೂರ್ತಿಯಾಗಿ ಪೂಜೆಗೊಳ್ಳುತ್ತಿರುವ ಕೋದಂಡ ರಾಮ ಅಥವಾ ಪಟ್ಟಾಭಿರಾಮ, ಅಷ್ಟೇಕೆ,  ವನವಾಸಿರೂಪದ  ರಾಮನ ಸೌಂದರ್ಯ ಕೂಡ ಇತರ ಎಲ್ಲಾ ವಿಗ್ರಹರೂಪೀ ದೇವರುಗಳಿಗಿಂತ ಒಂದು ಕೈ ಹೆಚ್ಚೇ ಎಂದು ಹೇಳಬಹುದು. 

ತಮಿಳಿನಲ್ಲಿ ಕಂಬ ಮಹಾಕವಿಯ ಈ ತೋಳ್ ಕಂಡಾರ್ ತೋಳೇ ಕಂಡಾರ್ ಎಂಬುದು ಒಂದು ನಾಣ್ಣುಡಿಯಂತೆಯೇ ಆಗಿಹೋಗಿದೆ. 


ಭಗವಂತನ ಸೌಂದರ್ಯವನ್ನು ಪರಿಪೂರ್ಣವಾಗಿ  ಅನುಭವಿಸಲು ನಮ್ಮಂಥ ಪಾಮರರಿಂದ ಸಾಧ್ಯವೇ ಇಲ್ಲ. 

ಒಂದೇ ಒಂದು ಬಾರಿ ಶ್ರೀರಂಗನಾಥನ  ದರ್ಶನ ಮಾಡಿದ  ಕೂಡಲೇ, ಅಡಿಯಿಂದ ಮುಡಿಯವರೆಗೆ ಅವನ ಸೌಂದರ್ಯವನ್ನು ಅನುಭವಿಸಿದ ತಿರುಪ್ಪಾಣಾಳ್ವಾರರು ಇವನೇ ರಾಮ, ಇವನೇ ಕೃಷ್ಣ ಎಂದು ಕಂಡುಕೊಂಡರು. *ಆಪಾದ ಚೂಡಮನುಭೂಯ ಹರಿ ಶಯಾನಂ* ಎಂದು ಅನುಭವಿಸಿ ಹಾಡಿದವರು, ಅವನನ್ನು ಕಂಡ ಕಂಗಳು ಮತ್ತೇನನ್ನೂ ಕಾಣಲಾರವು ಎಂದು ಹೇಳುತ್ತಾ ಅಲ್ಲೇ ಕುಸಿದು ರಂಗನಲ್ಲೇ ಐಕ್ಯರಾದರು. ಹಾಗಿದೆ ಭಗವಂತನ ಸೌಂದರ್ಯ!


🙏🙏🙏🙏🙏


ಉಪದೇಶ: 

ಶ್ರೀ ಕೆ.ಎಸ್. ನಾರಾಯಣಾಚಾರ್ಯರು.


TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...