Monday, 8 March 2021

ಪದೆ ಪದೇ ನೀರು ಕುಡೀಬೇಕೆನಿಸುತಿದ್ಯಾ?

ದ ವಿಷಯದಲ್ಲಿ ಎಲ್ಲ ಸರಿ ಇದೆ ಎಂದುಕೊಂಡಾಗಲೂ ಏನೋ ಸರಿ ಇಲ್ಲ ಎಂದು ಹೇಳಲು ದೇಹ ಕೆಲವು ಸೂಚನೆ ಭಾಷೆಗಳನ್ನು ಅನುಸರಿಸುತ್ತದೆ. ಕೇಳುವ ವ್ಯವಧಾನ, ಗಮನಿಸುವ ಕಣ್ಣು ನಮ್ಮದಾಗಿರಬೇಕಷ್ಟೇ. 

 

ನೀವು ಆರೋಗ್ಯವಂತರಾಗಿದ್ದೀರಿ ಎಂದುಕೊಳ್ಳುವುದೂ, ನಿಜವಾಗಿಯೂ ಆರೋಗ್ಯದಿಂದಿರುವುದು ಎರಡು ಬೇರೆ ಬೇರೆ ವಿಷಯಗಳು. ಜಿಮ್‌ಗೆ ಹೋಗುತ್ತೀರಿ, ಉತ್ತಮ ಆಹಾರವನ್ನಷ್ಟೇ ಸೇವಿಸುತ್ತೀರಿ, ರಾತ್ರಿ 10 ಗಂಟೆಗೆ ಮುಂಚೆ ನಿದ್ರಿಸುತ್ತೀರಿ - ಎಲ್ಲ ಸರಿಯಷ್ಟೇ. ಆದರೂ ಕೆಲವೊಮ್ಮೆ ಆರೋಗ್ಯ ಕೈಕೊಡುತ್ತದೆ. ದೇಹವು ಅನಾರೋಗ್ಯದ ಕುರಿತು ಸೈಲೆಂಟಾಗಿ ಕೆಲ ಸೂಚನೆಗಳನ್ನು ರವಾನಿಸುತ್ತಿರಬಹುದು. ಅದನ್ನು ನೀವು ಗಮನಿಸಲು ಸೋಲುತ್ತಿರಬಹುದು. 


1. ನಿರಂತರ ತಿನ್ನುವುದೇ ಯೋಚನೆ


ತಿನ್ನುವುದರಲ್ಲಿ ಖುಷಿಯಿದೆ. ಹಾಗಂತ ಇಡೀ ದಿನ ತಲೆಯಲ್ಲಿ ಈಗೇನು ತಿನ್ನೋಣ ಎಂದೇ ಓಡುತ್ತಿದ್ದರೆ, ನೀವು ದೇಹಕ್ಕೆ ಅಗತ್ಯವಾದಷ್ಟನ್ನು ತಿನ್ನುತ್ತಿಲ್ಲ ಎಂದರ್ಥ. ನಮ್ಮಲ್ಲಿ ಆರೋಗ್ಯವಂತರಾಗಿರುವುದಕ್ಕಾಗಿ ಡಯಟ್ ಮಾಡುವವರನ್ನು, ತೂಕ ಇಳಿಸಲು ನೋಡುವವರನ್ನು ಜನ ಶ್ಲಾಘಿಸುವುದೇನೋ ನಿಜ, ಅದಕ್ಕಾಗಿ ತಪ್ಪಾದ ರೀತಿಯ ಡಯಟ್ ಮಾಡಿದರೆ ಈಟಿಂಗ್ ಡಿಸಾರ್ಡರ್‌ಗಳು ಶುರುವಾಗಬಹುದು. ಮಾನಸಿಕ ಕಾಯಿಲೆಗಳಲ್ಲಿ ಈಟಿಂಗ್ ಡಿಸಾರ್ಡರ್‌ನಿಂದ ಸಾಯುವವರ ಸಂಖ್ಯೆಯೇ ಜಾಸ್ತಿ ಎಂಂಬುದು ನಿಮಗೆ ಗೊತ್ತಿರಲಿ.


2. ಅತಿಯಾಗಿ ಕೂದಲುದುರುವಿಕೆ


ಕೂದಲುದುರುವುದು ದೇಹದಲ್ಲಿ ಪ್ರೋಟೀನ್ ಕೊರತೆಯಾಗಿರುವುದನ್ನು ಸೂಚಿಸುತ್ತದೆ. ತಕ್ಷಣ ಸರಿ ಮಾಡಿಕೊಳ್ಳಲಿಲ್ಲವೆಂದರೆ ಅತಿಯಾದ ಸುಸ್ತು, ರೋಗ ನಿರೋಧಕ ವ್ಯವಸ್ಥೆ ಹದಗೆಡುವಿಕೆ ಕಾಣಿಸಿಕೊಳ್ಳುತ್ತದೆ.


3. ಮಧ್ಯವಯಸ್ಸಿನಲ್ಲೇ ಅತಿಯಾದ ಸುಕ್ಕು


ಸುಕ್ಕು ಕೂಡಾ ಪ್ರೋಟೀನ್ ಕೊರತೆಯಿಂದಲೇ ಬೇಗ ಅಮರಿಕೊಳ್ಳುತ್ತದೆ. 2007ರಲ್ಲಿ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್‌ನಲ್ಲಿ ಈ ಸಂಬಂಧ ಪ್ರಕಟವಾದ ಅಧ್ಯಯನ ವರದಿಯು ಪ್ರೋಟೀನ್ ಚೆನ್ನಾಗಿ ತೆಗೆದುಕೊಳ್ಳುವವರಲ್ಲಿ ಸುಕ್ಕು ಕಡಿಮೆ ಇರುವುದನ್ನು ತಿಳಿಸಿದೆ. 


4. ಸ್ಕಿನ್ ಟ್ಯಾಗ್ಸ್


ಚರ್ಮದ ಮೇಲೆ, ವಿಶೇಷವಾಗಿ ಕಣ್ಣಿನ ಸುತ್ತಮುತ್ತ ಸ್ವಲ್ಪ ಹಳದಿ ಬಣ್ಣದ ಚಿಮುಕಲು ರೀತಿಯ ಗುಳ್ಳೆಗಳು ಎದ್ದಿದ್ದರೆ ಅದನ್ನು ನೆಗ್ಲೆಕ್ಟ್ ಮಾಡಬೇಡಿ. ಬಹುಷಃ ಅದು ದೇಹದಲ್ಲಿ ಕೊಲೆಸ್ಟೆರಾಲ್ ಹೆಚ್ಚಾಗಿರುವುದನ್ನು ಸೂಚಿಸುತ್ತಿರಬಹುದು. ತಕ್ಷಣ ವೈದ್ಯರನ್ನು ಕಂಡು ನಿಮ್ಮ ಕೊಲೆಸ್ಟೆರಾಲ್ ಮಟ್ವವನ್ನು ಪರೀಕ್ಷಿಸಿಕೊಳ್ಳಿ. ಹೆಚ್ಚಿದ್ದರೆ, ಕೂಡಲೇ ಅದನ್ನು ತಗ್ಗಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಿ.


5. ಉಗುರಿನಲ್ಲಿ ವ್ಯತ್ಯಾಸ


ಅನಾರೋಗ್ಯವನ್ನು ಉಗುರುಗಳು ಬಹುಬೇಗ ತಿಳಿಸುತ್ತವೆ. ಉಗುರು ಕಂತು, ಕಪ್ಪಾಗುವುದು, ಹಳದಿ ಬಣ್ಣಕ್ಕೆ ತಿರುಗುವುದು, ಬೇಗ ಮುರಿಯುವುದು ಮುಂತಾದ ವ್ಯತ್ಯಾಸಗಳು ಕಂಡುಬಂದಲ್ಲಿ ಅವು ನೀವು ಸೇವಿಸುತ್ತಿರುವ ಆಹಾರ ಸರಿಯಿಲ್ಲವೆಂದೋ, ಸ್ಮೋಕಿಂಗ್‌ನಿಂದ ಶ್ವಾಸಕೋಶಗಳು ಸುಸ್ತಾಗಿವೆ ಎಂದೋ ಅಥವಾ ಇತರೆ ಆಂತರಿಕ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು. 


6. ಯಾವಾಗಲೂ ಬಾಯಾರಿಕೆ


ವರ್ಕೌಟ್ ಬಳಿಕ ನೀರು ಕುಡಿಯಲೇಬೇಕೆನಿಸುವುದು ನಾರ್ಮಲ್. ಆದರೆ ಕುಳಿತಲ್ಲಿ, ನಿಂತಲ್ಲಿ ಬಾಯಾರಿಕೆಯಾಗುತ್ತಿದ್ದರೆ ಅದು ನಿಮ್ಮ ಬ್ಲಡ್ ಶುಗರ್ ಮಟ್ಟದಲ್ಲಿ ವ್ಯತ್ಯಾಸವಾಗಿರುವುದನ್ನು ಸೂಚಿಸುತ್ತಿರಬಹುದು. ಇದು ಡಯಾಬಿಟೀಸ್‌ನ ಆರಂಭಿಕ ಸೂಚನೆಯಾಗಿರಬಹುದು.


7. ವಾಸನೆಯ ಉಸಿರು


ಈರುಳ್ಳಿ ಬೆಳ್ಳುಳ್ಳಿ ಸೇವಿಸಿದಾಗ ಉಸಿರಾಟ ವಾಸನೆ ಬರುವುದು ಸಹಜ. ಆದರೆ, ಅದರ ಹೊರತಾಗಿಯೂ ಯಾವಾಗಲೂ ಉಸಿರು ವಾಸನೆ ಬರುತ್ತಿದ್ದರೆ ಅದು ಬಾಯಿಯ ಅಥವಾ ಹಲ್ಲಿಗೆ ಸಂಬಂಧಿಸಿದ ಕಾಯಿಲೆಯ ಸೂಚನೆಯಾಗಿರಬಹುದು. ಅಷ್ಟೇ ಅಲ್ಲ, ಹೃದಯ ಸಮಸ್ಯೆಗಳ ಕುರಿತ ಎಚ್ಚರಿಕೆಯನ್ನೂ ನೀಡುತ್ತಿರಬಹುದು.


8. ಗಾಯಗಳು ಗುಣವಾಗದಿರುವುದು


ಗಾಯಗಳಾದರೆ ಅವು ಗುಣವಾಗಲು ಸಾಮಾನ್ಯಕ್ಕಿಂತ ಬಹಳ ದಿನಗಳನ್ನು ತೆಗೆದುಕೊಳ್ಳುತ್ತಿವೆ ಎಂದರೆ ಅದು ವಿಟಮಿನ್ ಡಿ ಕೊರತೆಯನ್ನು ಸಾರಿ ಹೇಳುತ್ತಿರುತ್ತದೆ. 


9. ಕಣ್ಣಿನ ಬಣ್ಣ ಬದಲಾವಣೆ


ಸಾಮಾನ್ಯವಾಗಿ ಬಿಳಿಯಾಗಿರುವ ಕಣ್ಣಿನ ಬಣ್ಣ ಸ್ವಲ್ಪ ಹಳದಿಯಾದರೂ ಅದನ್ನು ನೆಗ್ಲೆಕ್ಟ್ ಮಾಡಬೇಡಿ. ಅದು ಲಿವರ್, ಯಕೃತ್ತು ಹಾಗೂ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು.


10. ಅತಿಯಾದ ತಾಪಮಾನ ಸೆನ್ಸಿಟಿವಿಟಿ


ಬಿಸಿ ಅಥವಾ ತಂಪನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ, ದೇಹ ಸಹಕಾರ ನೀಡುತ್ತಿಲ್ಲವೆಂದರೆ ಅದು ಥೈರಾಯ್ಡ್ ಸಮಸ್ಯೆಯ ಸೂಚಕ. ಈ ತಾಪಮಾನ ಸೆನ್ಸಿಟಿವಿಟಿ ಹೊಸದಾಗಿ ಶುರುವಾಗಿದ್ದರೆ ಕೂಡಲೇ ವೈದ್ಯರನ್ನು ಕಂಡು ವಿಚಾರಿಸಿ.


11. ಅತಿಯಾದ ತೂಕ ಕಳೆದುಕೊಳ್ಳುವಿಕೆ


ನೀವು ಪ್ರಯತ್ನಿಸಿ ತೂಕ ಕಳೆದುಕೊಂಡಾಗ ಅದು ಖುಷಿ ಪಡುವ ವಿಷಯ. ಆದರೆ, ಪ್ರಯತ್ನಿಸದಿದ್ದರೂ ನಿರಂತರವಾಗಿ ತೂಕ ಇಳಿಯುತ್ತಲೇ ಇದೆ ಎಂದರೆ ಅದು ಡಯಾಬಿಟೀಸ್, ಹಾರ್ಟ್ ಫೇಲ್ಯೂರ್ ಅಥವಾ ಕ್ಯಾನ್ಸರನ್ನು ಸೂಚಿಸುತ್ತಿರಬಹುದು.


ಕೃಪೆ  ವಾಟ್ಸಪ್

ಟೋಲ್ ಗೇಟ್

 ಟೋಲ್ ಗೇಟ್‌ಗಳಲ್ಲಿ ನೀವು ಸ್ವೀಕರಿಸುವ ರಶೀದಿಗಳೊಂದಿಗೆ ನೀವು ಏನು ಮಾಡುತ್ತೀರಿ?


 ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.


 ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ನಿಮ್ಮ ಪ್ರಯಾಣದ ಸಮಯದಲ್ಲಿ ನೀವು ಸ್ವೀಕರಿಸುವ ರಶೀದಿಗಳು ಟೋಲ್ ಗೇಟ್‌ಗಳನ್ನು ದಾಟಲು ಮಾತ್ರವಲ್ಲ.


   ನಂತರ ಅದು ಬೇರೆ ಏನು? 

 1. ವೈದ್ಯಕೀಯ ತುರ್ತು ಸಮಯದಲ್ಲಿ ನೀವು ರಶೀದಿಯ ಇನ್ನೊಂದು ಬದಿಯಲ್ಲಿ ನೀಡಿರುವ ಫೋನ್ ಸಂಖ್ಯೆಗೆ ಕರೆ ಮಾಡಬಹುದು.  ನಿಮ್ಮ ಕರೆ ಮಾಡಿದ 10 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ತಲುಪುತ್ತದೆ.


 2. ನಿಮ್ಮ ವಾಹನಕ್ಕೆ ಕೆಲವು ಸಮಸ್ಯೆಗಳಿದ್ದರೆ ನಿಮ್ಮ ಚಕ್ರವು ಪಂಕ್ಚರ್ ಆಗಿದ್ದರೆ ನೀವು ಅಲ್ಲಿ ಉಲ್ಲೇಖಿಸಿರುವ ಇತರ ಸಂಖ್ಯೆಗೆ ಕರೆ ಮಾಡಬಹುದು ಮತ್ತು 10 ನಿಮಿಷಗಳಲ್ಲಿ ನಿಮಗೆ ಸಹಾಯ ಸಿಗುತ್ತದೆ.


 3. ನೀವು ಇಂಧನದಿಂದ ಹೊರಗುಳಿಯುತ್ತಿದ್ದರೆ ನಿಮಗೆ ಶೀಘ್ರದಲ್ಲೇ 5 ಅಥವಾ 10 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ನೀಡಲಾಗುವುದು.  ಸರಬರಾಜು ಮಾಡಿದ ಇಂಧನಕ್ಕಾಗಿ ನೀವು ಅವುಗಳನ್ನು ಪಾವತಿಸಬಹುದು ಮತ್ತು ಅದನ್ನು ಪಡೆಯಬಹುದು.


 ಟೋಲ್ ಗೇಟ್‌ಗಳಲ್ಲಿ ನೀವು ಪಾವತಿಸುವ ಹಣದಲ್ಲಿ ಈ ಎಲ್ಲಾ ಸೇವೆಗಳನ್ನು ಸೇರಿಸಲಾಗಿದೆ.  ಅನೇಕ ಜನರಿಗೆ ಈ ಮಾಹಿತಿಯಿಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ ನಾವು ಅನಗತ್ಯವಾಗಿ ನೋವನ್ನು ಅನುಭವಿಸುತ್ತೇವೆ.  ದಯವಿಟ್ಟು ಈ ಸಂದೇಶವನ್ನು ನಿಮ್ಮ ಎಲ್ಲ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ.

Jai Sri Ram

 आपदाम्-अपहर्तारम् दातारं सर्व संपदां

ApadAm-apahartAram dAtAram sarva sampadAm

लोकाभिरामं श्रीरामम्  भूयो भूयो नमाम्यहम् ॥

lokAbhirAmam shrIramAm bhooyo bhooyo namAmyaham


I bow again and again to Sree Rama who removes (all) obstacles and grants

wealth and pleases all. 

आर्तानामार्तिहन्तारम् भीतानां भीतिनाशनं

ArtAnAmArtihantAram bheetAnAm bheeti-nAshanam

द्विषतां कालदण्डं तं रामचन्द्रं नमाम्यहम्  ॥

dvishatAm kAladanDam tam rAmchandram namAmyaham



He who annihilates the pain of the distressed, He who destroys fear in the minds 

of the fearful, He who is like the Weapon of Death to his enemies, that 

Raamachandra do I worship.

Today is Vijaya Ekadashi!.

11th day of the lunar fortnight is Vijaya Ekadashi! Per our hindu calendar we have 24 Ekadashi a year, one during sukhla paksha & other being Krishna paksha.


Each Ekadashi has its own specialty and significance. By the name itself Vijaya Ekadashi in literal meaning signifies victory over the enemy.


The significance of Vijaya Ekadashi is since the times of Ram. per legend, the sages & the saints of the Ramayan era asked Rama to observe this vrat when he wondered how he can cross the ocean to reach Lanka and free his consort, Sita.

It is known that ram offered prayers to the sea god inorder to cross the sea and reach lanka., having got answered after tiresome efforts post having consulted sages and in turn the suggested solution was that he & Sugriva's Vanar Sena observe the Vijaya Ekadashi.

As per the sages suggestion, Ram & the Vanar Sena observed the Vijaya Ekadashi Vrat & eventually built the Rama Setu to reach Lanka.

Hence it's said that those who wish to succeed in a task must observe the Vijaya Ekadashi vrat.



Thursday, 4 February 2021

ಕ್ಯಾರೆಟ್ ಪಾಯಸ :

ಬೇಕಾಗುವ ಪದಾರ್ಥಗಳು :

ಕ್ಯಾರೆಟ್ - 1 ಕಿಲೊ

ಹಾಲು - 1 ಲೀಟರ್ (ಆರೆಂಜ್ ಪ್ಯಾಕೆಟ್)

ಗೋಡಂಬಿ - 100 ಗ್ರಾಮ್

ಸಕ್ಕರೆ - 4೦೦ ಗ್ರಾಮ್

ಮಿಲ್ಕ್ ಮೇಡ್/ಮಿಠಾಯಿ ಮೇಟ್ - 400 ಗ್ರಾಮ್ ಡಬ್ಬಿ

ಏಲಕ್ಕಿ - 8-10

ಮಾಡುವ ವಿಧಾನ :

100 ಗ್ರಾಮ್ ಗೋಡಂಬಿಯನ್ನು ಒಂದು ಸಣ್ಣ ಬಟ್ಟಲಿನಲ್ಲಿ ನೀರು ಹಾಕಿ, ನೆನೆಯಲು ಇಡಿ. ನಂತರ ಕ್ಯಾರೆಟ್ಟಿನ ಮೇಲ್ ಸಿಪ್ಪೆಯನ್ನು ತೆಗೆದು, ಸಣ್ಣದಾಗಿ ಹೆಚ್ಚಿಕೊಳ್ಳಿ. ಹಾಲನ್ನು ಕುದಿಯಲು ಇಡಿ. ಒಂದು ಪಾತ್ರೆಯಲ್ಲಿ ಹೆಚ್ಚಿಟ್ಟ ಕ್ಯಾರೆಟನ್ನು, ಕುದಿಸಿದ ಹಾಲು (ಪೂರ ಒಂದು ಲೀಟರ್) ಮಿಕ್ಸ್ ಮಾಡಿ. ಕುಕ್ಕರಲ್ಲಿ ಇಟ್ಟು 7 ರಿಂದ 8 ಸ್ಟೀಮ್ ಕೂಗಿಸಿ. ಸ್ಟೀಮ್ ಬಿಟ್ಟಮೇಲೆ ಪಾತ್ರೆಯನ್ನು ಹೊರಗೆ ತೆಗೆದು ಆರಲು ಇಡಿ. ಮಿಕ್ಸಿಯಲ್ಲಿ ಬೆಂದ ಕ್ಯಾರೆಟ್ ಚೂರುಗಳನ್ನು, ನೆನೆಸಿಟ್ಟ ಗೋಡಂಬಿಯನ್ನು, ಏಲಕ್ಕಿಯನ್ನು ಸ್ವಲ್ಪ ಹಾಲಿನ ಜೊತೆಗೆ ಪೇಸ್ಟ್ ಆಗುವ ರೀತಿ ಗ್ರೈಂಡ್ ಮಾಡಿಕೊಳ್ಳಿ. ನಂತರ ಅದನ್ನು ಒಲೆಯಮೇಲೆ ಸಣ್ಣ ಉರಿಯಲ್ಲಿ ಕಾಯಿಸುತ್ತ 400 ಗ್ರಾಮ್ ಸಕ್ಕರೆಯನ್ನು, 400 ಗ್ರಾಮ್ ಮಿಲ್ಕ್ ಮೇಡ್/ಮಿಠಾಯಿ ಮೇಟ್ ಮಿಕ್ಸ್ ಮಾಡಿ. ಆರಿದ ನಂತರ ಅದನ್ನು ಫ್ರಿಡ್ಜಲ್ಲಿ ಇಡಿ. ನಂತರ... ಅಷ್ಟೇ !!! ಕ್ಯಾರೆಟ್ ಪಾಯಸ ಸವಿಯಲು ಸಿದ್ದ !

Friday, 15 January 2021

*ಅವರೇಕಾಳು ತಿನ್ನೋದ್ರಿಂದ ಶರೀರಕ್ಕೆ ಏನ್ ಲಾಭ ಅನ್ನೋರು ತಿಳಿಯಬೇಕಾದ ವಿಷಯ*

ಸಾಮಾನ್ಯವಾಗಿ ಮನುಷ್ಯನ ಶರೀರಕ್ಕೆ ಹಣ್ಣು ತರಕಾರಿ, ದವಸ ದಾನ್ಯಗಳು ಹಾಗೂ ದ್ವಿದಳ ದಾನ್ಯಗಳು ಹೆಚ್ಚಿನ ಪ್ರೊಟೀನ್ ವಿಟಮಿನ್ ಅಂಶವನ್ನು ಒದಗಿಸಿಕೊಡುತ್ತವೆ. ಆದ್ರೆ ನಾವುಗಳು ಸೇವನೆ ಮಾಡುವಂತ ಒಂದಿಷ್ಟು ತರಕಾರಿ ಹಣ್ಣು ದ್ವಿದಳಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರೋದಿಲ್ಲ. ನಾವುಗಳು ಅವರೆಕಾಳನ್ನು ವಿವಿಧ ಅಡುಗೆಗಳಿಗೆ ಬಳಸುತ್ತೇವೆ ಹಾಗೂ ಬೇಯಿಸಿಕೊಡು ಸಹ ಸೇವನೆ ಮಾಡುತ್ತಿವೆ ಆದ್ರೆ ಇದರಿಂದ ನಮ್ಮ ಶರೀರಕ್ಕೆ ಏನ್ ಲಾಭವಿದೆ ಅನ್ನೋದನ್ನ ತಿಳಿದುಕೊಂಡಿರೋದಿಲ್ಲ.

ಇದರ ಬಗ್ಗೆ ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.


ಮೊದಲನೆಯದಾಗಿ ಶರೀರಕ್ಕೆ ಪ್ರೊಟೀನ್ ಅಂಶವನ್ನು ನೀಡುವಂತ ಗುಣ ಇದರಲ್ಲಿದೆ. ಹೌದು ನಾವುಗಳು ಮಟನ್ ಚಿಕನ್ ತಿನ್ನುವುದರಿಂದ ಏನ್ ಸಿಗತ್ತೋ ಅಂತಹ ಆರೋಗ್ಯಕಾರಿ ಅಂಶವನ್ನು ಈ ಅವರೆಕಾಳಿನಿಂದ ಪಡೆಯಬಹುದಾಗಿದೆ. ಅಷ್ಟೇ ಅಲ್ದೆ ಫೈಬರ್ ಅಂಶ ಇರುವುದರಿಂದ ದೇಹಕ್ಕೆ ಉತ್ತಮ ಅರೋಗ್ಯ ಲಭಿಸುತ್ತದೆ ದೇಹಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಅಂಶವನ್ನು ಅವರೆಕಾಳಿನಲ್ಲಿ ಪಡೆಯಬಹುದಾಗಿದೆ.


ದೇಹ ಬೆಳವಣಿಗೆ ಆಗಲು ಸಹಕಾರಿಯಾಗುವಂತ ಹಾರ್ಮೋನ್ ಬೆಳವಣಿಗೆಗೆ ಇದು ಪೂರಕವಾಗಿದೆ, ಇನ್ನು ಅವರೆಕಾಳಿನಿಂದ ಸಿಗುವ ಲಾಭವೇನು ಅನ್ನೋದನ್ನ ನೋಡುವದಾದರೆ ಅಜೀರ್ಣತೆ ನಿವಾರಣೆ ಯಾಗುವುದು ಪದೇ ಪದೇ ಹಸಿವು ಆದ್ರೆ ಅದನ್ನು ನಿಯಂತ್ರಿಸುವ ಗುಣ ಇದರಲ್ಲಿದೆ. ಅವರೆಕಾಳಿನಲ್ಲಿ ಹೆಚ್ಚಾಗಿ ಮ್ಯಾಗ್ನೇಶಿಯಂ, ಪೊಟ್ಯಾಶಿಯಂ ಹಾಗೆ ಕ್ಯಾಲ್ಶಿಯಂ ಅಂಶಗಳಿವೆ ಆದ್ದರಿಂದ ಇದು ದೇಹದ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಬಲ್ಲದು. ಗ್ರಾಮೀಣ ಭಾಗದ ಜನರು ಅವರೆಕಾಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಾರೆ ಆದ್ದರಿಂದ ಅವರ ಶರೀರ ಗಟ್ಟಿಮುಟ್ಟಾಗಿರುತ್ತದೆ. ಮತ್ಯಾಕೆ ತಡ ವಾರದಲ್ಲಿ ಎರಡು ಮೂರೂ ಬಾರಿಯಾದರೂ ಅವರೇಕಾಳು ಸೇವನೆ ಮಾಡಿಇದರ ಲಾಭವನ್ನು ನಿಮ್ಮದಾಗಿಸಿಕೊಳ್ಳಿ.

*ಸುಲಭವಾಗಿ ಬಾಯಲ್ಲಿ ನೀರೂರುವಂತಹ ತಮಿಳುನಾಡು ಶೈಲಿಯ ರಸಂ ಹೇಗೆ ಮಾಡುವುದು ಗೊತ್ತೇ??*

ನಮಸ್ಕಾರ ಸ್ನೇಹಿತರೇ, ಇಂದು ನಾವು ತಮಿಳುನಾಡು ಶೈಲಿಯ ರಸಂ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ತಮಿಳುನಾಡು ಶೈಲಿಯ ರಸಂ ಮಾಡಲು ಬೇಕಾಗುವ ಸಾಮಗ್ರಿಗಳು: 2 ಬಟ್ಟಲು ತೊಗರಿಬೇಳೆ, ಸ್ವಲ್ಪ ಎಣ್ಣೆ, 1 ಟೊಮೇಟೊ , 2 ಚಮಚ ಕಾಳುಮೆಣಸು, 3 ಚಮಚ ಸಾಸಿವೆ, ಎರಡೂವರೆ ಚಮಚ ಜೀರಿಗೆ, 2 ಚಮಚ ಮೆಂತ್ಯ, 1 ಬಟ್ಟಲು ಧನಿಯಾ, ಸ್ವಲ್ಪ ಇಂಗು, 8 – 10 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, 1 ಚಮಚ ಅರಿಶಿನ ಪುಡಿ, ಸ್ವಲ್ಪ ಬೆಲ್ಲ, ಸ್ವಲ್ಪ ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು.


ತಮಿಳುನಾಡು ಶೈಲಿಯ ರಸಂ ಮಾಡುವ ವಿಧಾನ: ಮೊದಲಿಗೆ ಒಂದು ಕುಕ್ಕರನ್ನು ತೆಗೆದುಕೊಂಡು ಅದಕ್ಕೆ 2 ಬಟ್ಟಲು ತೊಗರಿಬೇಳೆ, 4 ಬಟ್ಟಲು ನೀರು, 1 ಚಮಚ ಎಣ್ಣೆ, 1 ಟೊಮೇಟೊವನ್ನು ಹಾಕಿ 4 – 5 ವಿಷಲ್ ನನ್ನು ಹಾಕಿಸಿ ತಣ್ಣಗಾಗಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 2 ಚಮಚದಷ್ಟು ಕಾಳುಮೆಣಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಚಮಚದಷ್ಟು ಸಾಸಿವೆ, 2 ಚಮಚದಷ್ಟು ಜೀರಿಗೆ, 2 ಚಮಚ ಮೆಂತ್ಯವನ್ನು ಹಾಕಿ ಕಹಿ ಹೋಗುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಬಟ್ಟಲಿನಷ್ಟು ಧನಿಯಾವನ್ನು ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ಇಂಗುವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ನುಣ್ಣಗೆ ಪುಡಿಮಾಡಿಕೊಂಡರೆ ತಮಿಳುನಾಡು ಶೈಲಿಯ ರಸಂ ಪುಡಿ ರೆಡಿಯಾಗುತ್ತದೆ.


ನಂತರ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತದನಂತರ 1 ಚಿಟಿಕೆ ಇಂಗು, ಬೇಯಿಸಿಕೊಂಡ ಬೇಳೆ ಹಾಗೂ ಟೊಮೊಟೊವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಬೆಲ್ಲ, ಹುಣಸೆ ಹಣ್ಣಿನ ರಸ, ರುಚಿಗೆ ತಕಷ್ಟು ಉಪ್ಪು, 4 ಚಮಚ ರಸಂ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಕೊನೆಯದಾಗಿ ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿಕೊಂಡರೆ ತಮಿಳುನಾಡು ಶೈಲಿಯ ರಸಂ ಸವಿಯಲು ಸಿದ್ದ.

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...