ಸಂಧ್ಯಾವಂದನೆಯಿಂದಾಗುವ ದೈಹಿಕ ಹಾಗೂ ಮಾನಸಿಕ ಪರಿಣಾಮಗಳು
ಮುಂಜಾನೆ ಸೂರ್ಯೋದಯದ ಮುಂಚೆ ೧೫ ನಿಮಿಷ ಹಾಗೂ ಸೂರ್ಯೋದಯದ ನಂತರದ ೧೫ ನಿಮಿಷ,ಮಧ್ಯಾಹ್ನ ಹನ್ನೆರಡು ಘಂಟೆಯ ಮುಂಚೆ ೧೫ ನಿಮಿಷ ಹಾಗೂ ಹನ್ನೆರಡು
ಘಂಟೆಯ ನಂತರ ೧೫ ನಿಮಿಷ,ಸಾಯಂಕಾಲ ಸೂರ್ಯಾಸ್ತದ ಮುಂಚೆ ೧೫ ನಿಮಿಷ ಹಾಗೂ ಸೂರ್ಯಾಸ್ತವಾದ ಮೇಲೆ ೧೫ ನಿಮಿಷಗಳ ಅವಧಿಯನ್ನು ಸಂಧ್ಯಾಕಾಲ ಎಂದು ಪರಿಗಣಿಸಲಾಗಿದೆ.”ಸಂಧ್ಯಾಕಾಲ” ಎಂದರೆ ಎರಡು ಸಮಯಗಳ ಮಿಲನ.ಆಧ್ಯಾತ್ಮಿಕ ದೃಷ್ಟಿಯಲ್ಲಿ ಪರಮಾತ್ಮ ಹಾಗೂ ಜೀವಾತ್ಮರ ಮಿಲನ.ಸಂಧ್ಯಾಕಾಲದಲ್ಲಿ ಆಚರಿಸುವ ಧಾರ್ಮಿಕಕಾರ್ಯಕ್ರಮಗಳು ಫಲಪ್ರದವಾಗುತ್ತವೆಂದು ಶಾಸ್ತ್ರಗಳು ತಿಳಿಸುತ್ತವೆ.ಹಾಗಾಗಿ ಸಂಧ್ಯಾಕಾಲದಲ್ಲಿ ಜಪ,ಪ್ರಾಣಾಯಾಮ,ಸ್ತೋತ್ರಗಳನ್ನೊಳಗೊಂಡ ವಂದನೆಯನ್ನು ಪರಮಾತ್ಮನಿಗೆ ಸಲ್ಲಿಸುವ ಪ್ರಕ್ರಿಯೆ ಅನಾದಿ ಕಾಲದಿಂದ ನಡೆದುಬಂದಿದೆ.ಅದನ್ನೇ ಸಂಧ್ಯಾವಂದನೆ ಎನ್ನುತ್ತೇವೆ. ಸಂಧ್ಯಾವಂದನೆಯಿಂದಾಗುವ ಪರಿಣಾಮಗಳು..
* ನಿತ್ಯವೂ ಸಂಧ್ಯಾವಂದನೆ ಮಾಡುವುದರಿಂದ ಚಿತ್ತಚಾಂಚಲ್ಯ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ.
* ಭಗವಂತನಲ್ಲಿ ಶ್ರದ್ಧೆ,ನಂಬಿಕೆ,ಪ್ರೀತಿ,ಭಕ್ತಿ ಮುಂತಾದ ಭಾವನೆಗಳು ಅಚಲವಾಗಿ ವ್ಯಕ್ತಿ ಆಧ್ಯಾತ್ಮ ಸಾಧನೆಗೆ ಅರ್ಹನಾಗುತ್ತಾನೆ.
* ವ್ಯಕ್ತಿಯ ಅಂತಃಪ್ರೇರಣೆ ಜಾಗೃತವಾಗಿ ಜೀವನದ ಪ್ರತಿಕ್ಷಣದಲ್ಲೂ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ.
* ಅಂತಃಕರಣದ ಸಂಸ್ಕಾರದಿಂದ ಜನ್ಮಜನ್ಮಾಂತರದ ಅಜ್ಞಾನ ದೂರವಾಗಿ ವ್ಯಕ್ತಿ ಸಂಸ್ಕಾರವಂತನಾಗುತ್ತಾನೆ.
* ಮನುಷ್ಯನ ಕಾಂತಿ ಹಾಗೂ ತೇಜಸ್ಸು ಅಧಿಕವಾಗುತ್ತದೆ.
* ಮಾತಿನಲ್ಲಿ ಮೃದುತೆ,ವಿನಯ ಹಾಗೂ ಸತ್ಯ ನೆಲೆಗೊಳ್ಳುತ್ತದೆ.
* ಮನಸ್ಸಿನಲ್ಲಿ ಸದ್ಭಾವನೆ,ಶ್ರೇಷ್ಟವಿಚಾರ ಹಾಗೂ ಸಾತ್ವಿಕಗುಣಗಳು ಸ್ಥಾನ ಪಡೆಯುತ್ತವೆ.
* ಮನಸ್ಸಿನಲ್ಲಿ ಸಂಕಲ್ಪಶಕ್ತಿಯು ಪ್ರಬಲವಾಗುತ್ತದೆ.
* ಶಾಂತಿ,ಸಂತೋಷ,ಕ್ಷಮೆ,ದಯೆ,ಪ್ರೀತಿ ಮುಂತಾದ ಸದ್ಭಾವನೆಗಳು ಮನದಲ್ಲಿ ನೆಲೆಗೊಳ್ಳುತ್ತವೆ.
* ಮನುಷ್ಯನಲ್ಲಿರುವ ಪ್ರಮುಖ ಗುಣ ಅಹಂಕಾರ.ಅಹಂಕಾರದ ಮೂಲರೂಪ ನಾನು.ನಾನು ಎಂಬ ಭಾವನೆ ಬಂದಾಗ ಆಧ್ಯಾತ್ಮಸಾಧನೆ ಸಾಧ್ಯವಿಲ್ಲ.ಸಂಧ್ಯಾವಂದನೆ ನಾನು ಎಂಬ ಅಹಂಕಾರವನ್ನು ದೂರಮಾಡಿ,ವ್ಯಕ್ತಿ ಆಧ್ಯಾತ್ಮಸಾಧನೆ ಮಾಡಲು ಪ್ರೇರೇಪಿಸುತ್ತದೆ.
* ಪ್ರಾತಃಕಾಲದ ಸಂಧ್ಯಾವಂದನೆ ರಾತ್ರಿಯ ಪಾಪಗಳನ್ನು ನಾಶಗೊಳಿಸುತ್ತದೆ.ಮಧ್ಯಾಹ್ನದ ಸಂಧ್ಯಾವಂದನೆ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ.ಸಾಯಂಕಾಲದ ಸಂಧ್ಯಾವಂದನೆ ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ.ಹಾಗಾಗಿ ನಿತ್ಯಸಂಧ್ಯಾವಂದನೆಯನ್ನು ಮಾಡುವವನು ಪಾಪಗಳಿಂದ ವಿಮುಕ್ತನಾಗಿರುತ್ತಾನೆ.
* ಸಂಧ್ಯಾವಂದನೆಯಿಂದ ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ.ಸಂಧ್ಯಾವಂದನೆಯಲ್ಲಿ ಮಾಡುವ ಪ್ರಾಣಾಯಾಮ ಹಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಷ್ಣುಪುರಾಣದಲ್ಲಿ ಔರ್ವ ಎಂಬ ಋಷಿ ಸಗರರಾಜನಿಗೆ ತಿಳಿಸುತ್ತಾನೆ..

No comments:
Post a Comment