Monday, 21 January 2019

#ಶಿವಕುಮಾರ_ಶ್ರೀ #ಶಿವ_ಸಂಭಾಷಣೆ

ಶಿವನ ಕರೆ ಬಂತು. ಯಮರಾಜನಿಗೆ ಭಯ ಶುರುವಾಯಿತು. ನಾನೇನು ತಪ್ಪು ಮಾಡಿದ್ದೇನೆ ಎಂದುಕೊಳ್ಳುತ್ತಾ ಕೈಲಾಸದ ಕಡೆ ಹೊರಟ.

ಶಿವ: ಇಂದು ಯಾರ ಆತ್ಮ ಕರೆತರಲು ಹೊರಟ್ಟಿದ್ದಿಯಾ ಯಮ?

ಯಮ: ತಮ್ಮ ಭಕ್ತ, ಶಿವಕುಮಾರ ಸ್ವಾಮಿಯದು?

ಶಿವ: ಏನು ನನ್ನ ಭಕ್ತರ ಮುಟ್ಟೊವಷ್ಟು ಧೈರ್ಯವೇ ನಿನಗೆ. ಅವರಿಗೆ ನನ್ನ ರಕ್ಷಣೆ ಇರುತ್ತದೆ ಎಂಬ ಅರಿವಿಲ್ಲವೇ.?

ಯಮ: ಅರಿವಿದೆ ಪ್ರಭು. ಆದರೆ ಏನು ಮಾಡಲಿ ನನ್ನ ಕರ್ತವ್ಯ ನಾನು ಮಾಡಲೇಬೇಕು ಅದಕ್ಕೆಂದೆ 'ಉತ್ತರಾಯಣ ಪುಣ್ಯ ಕಾಲ'ದವರೆಗೂ ಕಾದೇ  , ನಿನ್ನ ಪ್ರೀತಿಯ ವಾರ ಸೋಮವಾರವೇ ಹೊರಟಿದ್ದೇನೆ. ಸಾಧ್ಯವಾದಷ್ಟು ಒಳ್ಳೆಯ ಗಳಿಗೆಯಲ್ಲೇ ಕರೆದುಕೊಂಡು ಬರಲು ಯೋಜನೆ ಮಾಡಿದ್ದೇನೆ.

ಶಿವ: ಇಲ್ಲ. ನೀನು ಹೋಗುವುದಿಲ್ಲ.

ಯಮ: ಪ್ರಭು, ತಮ್ಮ ನಿಯಮ ತಾವೇ ಮುರಿಯುವುದು ತರವೇ.?

ಶಿವ(ನಸುನಗುತ್ತ): ಹಾಗಲ್ಲ ಯಮ, ನಾನೇ ಹೊರಟು ಕರೆತರುತ್ತೇನೆ‌ ನನ್ನ ಪ್ರಿಯ ಭಕ್ತನನ್ನು.

ಶಿವ ನಂದಿಯೇರಿ ಸಿದ್ಧಗಂಗೆಯಲ್ಲಿ ಇಳಿದನು.

ಸ್ವಾಮೀಜಿ: ಬಂದೆಯಾ ಒಡೆಯ?

ಶಿವ: ಬರುವೆಯಾ ಜೊತೆಗೆ.

ಸ್ವಾಮೀಜಿ: ಇನ್ನೂ ದಾಸೋಹ ಕಾರ್ಯ ಮುಗಿದಿಲ್ಲವಲ್ಲ ಪ್ರಭು. ತುಂಬಾ ಕೆಲಸ ಬಾಕಿ ಇದೆ.

ಶಿವ: ಅದಕ್ಕೆ ಅಲ್ಲವೇ ಬಂದಿದ್ದು. ಈ ದೇಹ ತುಂಬಾ ಕೃಶವಾಗಿದೆ. ಹೊಸ ದೇಹ ಹೊತ್ತು ಇಲ್ಲಿಯೇ ಬರುವೇ. ಇದು ನನ್ನ ಅಭಯ ವಚನ ನಿನಗೆ. ಹೊರಡು ಮಗು.

ಸ್ವಾಮೀಜಿ(ಕಿರಿಯ ಶ್ರೀಗಳಿಗೆ): ನಾನು ಹೊರಡುತ್ತೇನೆ. ನನಗೆ ಕರೆ ಬಂದಿದೆ. ನನ್ನ ಅಂತ್ಯದ ಸುದ್ದಿಯನ್ನು ಮಕ್ಕಳು ಊಟ ಮಾಡಿದ ನಂತರ ತಿಳಿಸಿ. ಅವರು ಹಸಿದುಕೊಂಡು ಇರಬಾರದು.

(ಈ ಮಾತುಗಳನ್ನು ಕೇಳುತ್ತಾ ಶಿವನು ಮುಗುಳ್ನಗುತ್ತಾ ತನ್ನ ಬಲಗೈಯಲ್ಲಿ ಶ್ರೀಗಳ ಹಿಡಿದು ನಂದಿ ಮೇಲೆ ಕೂರಿಸಿದನು.ಮೂವರು ಕೈಲಾಸದ ಕಡೆ ಹೊರಟರು. ಜ್ಯೋತಿಯೊಂದು ಕೈಲಾಸ ಸೇರಿತು. ಮತ್ತೆ ಬರಲು ಶಿವನಿಲಯದಲ್ಲಿ ಅಣಿಯಾಗುತ್ತಿತ್ತು)

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...