1.ನಿಮ್ಮ
ರಾಜಕೀಯ ದಾಳಗಳಿಗೆ ಎಂಥಹ ಅತಿರತ ಮಹಾರತರು ಶರಣಗುವಂತೆ ಮಾಡುವ ಗುಟ್ಟು ನಮಗೆ
ತಿಳಿದಿದ್ದು ನೀವು ಒಬ್ಬ ಒಳ್ಳೆಯ ಹಾಕಿ ಆಟಗಾರ ಎಂದು ತಿಳಿದಾಗ ನೀವು ಆಟದಲ್ಲಿ
ಎದುರಾಳಿಯ ದಿಕ್ಕುತಪ್ಪಿಸಿ ಗೋಲುಬಾರಿಸುವುದರಲ್ಲಿ ನಿಮಗೆ ನೀವೇ ಸಾಟಿ.
2.
ನಿಮಗೆ ಇಷ್ಟು ವಯಸ್ಸಾದರು ನಿಮ್ಮ ಜ್ಞಾಪಕ ಶಕ್ತಿ ಪ್ರತಿಯೊಂದು ಅಂಕಿ ಅಂಶಗಳನ್ನ ನೀವು
ನಿರರ್ಗಳವಾಗಿ ಹೇಳುವುದನ್ನ ನೋಡಿದರೆ ನಮ್ಮಂತಹ ಯುವಕರನ್ನ ಬೆರಗುಗೊಳಿಸುತ್ತದೆ.
3.ನೀವು ಇಲ್ಲಿಯವರಗೆ ಸರ್ಕಾರಗಳಿಂದ ಯಾವುದೇ ಬತ್ಯೆಯನ್ನ ಪಡೆಯದೆ ಇರುವುದು ಇಂದಿನ ರಾಜಕಾರಣಿಗಳಿಗೆ ಮುಟ್ಟಿ ನೋಡಿಕೊಳ್ಳುವಂತಾಗಬಹುದು.
4. ಬೆಂಗಳೂರು ನಗರ ಒಂದು ಲಕ್ಷ ಬಡವರಿಗೆ ಮನೆಯ ಹಕ್ಕುಪತ್ರ ನೀಡಿ ಎಷ್ಟೋ ಬಡವರು ಸದಾ ನೆನೆಯುವಂತೆ ಮಾಡಿದ್ದೀರಿ.
5.ಬೆಂಗಳೂರು ಮೆಟ್ರೋ, IT,BT.ಕ್ಷೇತ್ರದಲ್ಲಿ ಪ್ರಗತಿಸಾಧಿಸಲು ನೀವು ಹಾಕಿದ ಬನಾದಿಯೇ ಕಾರಣ.
6. ಕೃಷ್ಣ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ದೇವೇಗೌಡರು ಮಾಡಿರುವ ಕೆಲಸವನ್ನ ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ
7.40000 ಕೇಸು ಸಂಧಾನ ಮೂಲಕ ರಾಜಿ ಮಾಡಿ ದಿನರಾತ್ರಿ ಪಾಳೆಯಲ್ಲಿ 5ವರ್ಷದ ಒಳಗೆ ಕಾಮಗಾರಿಯನ್ನ ಪೂರ್ಣಗೊಳಿಸಿ ಕರ್ನಾಟಕದ ಪಾಲಿನ ನೀರನ್ನ ಉಳಿಸಿದಿರಿ.
8.
ಕೇಂದ್ರ ಸರ್ಕಾರ ಯಾವುದೇ ಆರ್ಥಿಕ ನೆರವು ನೀಡದೆ ಇದ್ದಾಗ ದೇಶದಲ್ಲಿಯೇ ಪ್ರಥಮ ಬಾರಿಗೆ
ಬಾಂಡ್ ಗಳ ಮೂಲಕ ಹಣ ಸಂಗ್ರಹಿಸಿ ಆರ್ಥಿಕ ತೊಡಕನ್ನ ನೀವಾರಿಸಿದ್ದೀರಿ.
9.
ಆಲಮಟ್ಟಿ ಆಣಕಟ್ಟೆಯ ಎತ್ತರವನ್ನು ಎತ್ತರಿಸದಂತೆ ಒತ್ತಡ ಬಂದಾಗ ನೀರಿನ ಪ್ರಮಾಣ
ನಿಗದಿಗೊಳಿಸಿ ಆಲಮಟ್ಟಿ ಎತ್ತರಿಸಿ ವಿದ್ಯುತ್ತಿನ ಉತ್ಪಾದನೆಯನ್ನು ಮಾಡುವಂತೆ
ಮಾಡಿದ್ದೀರಿ.
10. ಕರ್ನಾಟಕದ ನೆಲ, ಜಲ, ಏಳಿಗೆಯ ಬಗ್ಗೆ
ಅವರಿಗಿರುವ ಕಾಳಜಿಯ ಬಗ್ಗೆ, ಅವರು ತಮ್ಮ ಸೀಮಿತ ಅಧಿಕಾರವಧಿಯಲ್ಲಿ ಮಾಡಿರುವ ಹಲವು
ಕೆಲಸಗಳ ಸಾರ್ಥಕತೆಯ ಬಗ್ಗೆ ಭಿನ್ನಾಭಿಪ್ರಾಯವಿರಲಾರದು. ಕಾವೇರಿ ಬೋರ್ಡ್ ಸ್ಥಾಪನೆಯಾಗಿ
ನಮ್ಮ ಆಣೆಕಟ್ಟುಗಳೆಲ್ಲ ತಮಿಳುನಾಡಿನ ಪರೋಕ್ಷ ಹಿಡಿತಕ್ಕೆ ಸಿಗುವುದು ಸದ್ಯಕ್ಕಾದರೂ
ತಪ್ಪಿದೆ ಅಂದರೆ ಅದಕ್ಕೆ ದೇವೇಗೌಡರು ಮಾಡಿದ ಆಮರಣಾಂತ ಉಪವಾಸವೇ ಕಾರಣ.
11..ದೇವೇಗೌಡರು ಹೊಂದಿರುವ ರೈತರ ಬಗೆಗಿನ ಅಪಾರ ಕಾಳಜಿಗೆ ಪ್ರಪಂಚದ ಯಾವುದೇ ರಾಜಕಾರಣಿ ಸರಿಸಾಟಿ ಆಗಲಾರರು
13.
ದೇವೇಗೌಡರು ನಮ್ಮ ನಾಡಿನ ವ್ಯಕ್ತಿ ದೇಶದ ಅತ್ಯುನ್ನತ ಸ್ಥಾನವೇರಿ ಮುತ್ಸದಿ ಅಂತಾ
ಅನ್ನಿಸಿಕೊಳ್ಳೋದು ಸುಲಭಕ್ಕೆ ಸಿಗುವ ಕಡಲೆಯಲ್ಲ,ಸಾಮಾನ್ಯ ಕುಟುಂಬದಲ್ಲಿ ಜನಿಸಿ
ಅಸಮಾನ್ಯ ವ್ಯಕ್ತಿಯಾಗಿ ಬೆಳೆದು ಬಂದ ದಾರಿ, ಅವರ ಸರಳತೆ ಪ್ರಾಮಾಣಿಕತೆ.ದಿಟ್ಟನಿಲುವು
.ಸಂಕಲ್ಪ,ತಂದೆ ತಾಯಿ ದೇವರಲ್ಲಿರುವ ಭಕ್ತಿ ಅವರನ್ನ ಇಲ್ಲಿಯವರೆಗೆ ತಂದು ನಿಲ್ಲಿಸಿದೆ.
10. ಪಕ್ಷ ರಾಜಕಾರಣದ ವಿಷಯದಲ್ಲಿ , ಚುನಾವಣಾ ರಾಜಕಾರಣದ ವಿಷಯದಲ್ಲಿ ದೇವೇಗೌಡರ ಬಗ್ಗೆ ಬಿನ್ನಾಭಿಪ್ರಾಯ
ಏನೇ
ಇರಬಹುದು, ಆದರೆ ಕರ್ನಾಟಕದ ರಾಜಕಾರಣದಲ್ಲಿ ಎಂದಿಗೂ ಮರೆಯಬಾರದ, ಮರೆಯಲಾಗದ ಕೆಲವೇ
ಕೆಲವು ವ್ಯಕ್ತಿಗಳ ಹೆಸರಿನಲ್ಲಿ ದೇವೇಗೌಡರದ್ದು ಮುಂಚೂಣಿಯಲ್ಲಿರುವ ಹೆಸರು.......
ಹೆಚ್ಚಿನ ಸಂಖ್ಯೆಯಲ್ಲಿ ಹೆಮ್ಮೆಯಿಂದ ಶೇರ್ ಮಾಡಿ
No comments:
Post a Comment