"ಕ್ರೇಜಿಸ್ಟಾರ್"
ರವಿಚಂದ್ರನ್ ನನಗಿಷ್ಟ ಎಂಬ ಕಾರಣಕ್ಕೆ ಇಷ್ಟವಾದ ಚಿತ್ರ.
"ಕ್ರೇಜಿ ಸ್ಟಾರ್ "
ಈಶ್ವರಿ ಬ್ಯಾನರ್ ನ ಚಿತ್ರ ಎಂಬ ಕಾರಣಕ್ಕೆ ಇಷ್ಟವಾದ ಚಿತ್ರ
ಯಾಕಂದ್ರೆ ಚಿತ್ರದ ಶುರುವಿನಲ್ಲಿ.... ಪಿಬಿಎಸ್ ಧ್ವನಿಯಲ್ಲಿ "ದೇವೀ ..ಪ್ರಪನ್ನಾರ್ಥಿಹರೇ ಪ್ರಸೀಧ... ಪ್ರಸೀಧ ಮಾತರ್ಜಗತೋ ಕಿಲಸ್ಯ... ಪ್ರಸೀಧ ವಿಶ್ವೇಶ್ವರೀ ಪಾಹಿ ವಿಶ್ವಂ... ತ್ವಮೀಶ್ವರೀ ದೇವಿ ಚರಾಚರಸ್ಯ.." ಶ್ಲೋಕ ಇರುತ್ತೆ. ಅದು ನಂಗಿಷ್ಟ.
ಸಿನ್ಮಾ ಬಗ್ಗೆ ಒಂದಷ್ಟ್ ಮಾತು:
ಕ್ರೇಜಿಸ್ಟಾರ್ ಚಿತ್ರದಲ್ಲಿ ರವಿಚಂದ್ರನ್ ತನ್ನ ಗೆಳೆಯರ ಪಾತ್ರದಲ್ಲಿರುವ ಸಹನಟರಿಗೆ (ಹಿಂದಿನ ಚಿತ್ರಗಳ ಥರ) ಕಪಾಳಮೋಕ್ಷ ಮಾಡುವುದಿಲ್ಲ.
ಈಗಿನ ಚಿತ್ರಗಳಲ್ಲಿ ಯಶಸ್ಸಿಗಾಗಿ ನಾಯಕರು ಲಾಂಗ್ ಹಿಡಿಯುತ್ತಾರೆ. ಅದರಲ್ಲೂ ಫಸ್ಟ್ ಹಾಫಲ್ಲಿ ಸಾಫ್ಟ್ ಇದ್ದವರು ಸೆಕೆಂಡ್ ಹಾಫಲ್ಲಿ ಲಾಂಗ್ ಹಿಡಿದರೆ ಚಿತ್ರಕ್ಕೊಂದು ಕಮರ್ಶಿಯಲ್ ಟ್ವಿಸ್ಟ್ ಎಂದು ನಂಬಿದವರಿದ್ದಾರೆ. ಆದರೆ ಕ್ರೇಜಿಸ್ಟಾರ್ ಚಿತ್ರದಲ್ಲಿ ರವಿಚಂದ್ರನ್ ಲಾಂಗ್ ಹಿಡಿಯಬಹುದಾದ ಸಿಚುಯೇಶನ್ನಲ್ಲೂ ತಮ್ಮ ಇಮೇಜಿಗೆ ತಕ್ಕಂತೆ ಗಿಟಾರ್ ಹಿಡಿಯುತ್ತಾರೆ.
(ಆದರೆ ಇಲ್ಲಿ ಗಿಟಾರ್ ಹಿಡಿದಿರುವ ಟೈಮಿಂಗ್ ಮಿಸ್ ಹೊಡೆದಿದೆಯಷ್ಟೆ)
ರವಿಚಂದ್ರನ್ ಅವರ ಅಭಿಮಾನಿ ಪಾತ್ರದಲ್ಲಿ ನಟಿಸಿರುವುದು ಅವರ ಪುತ್ರ ವಿಕ್ರಮ್.
ಟೈಟಲ್ ಕಾರ್ಡಲ್ಲಿ ಅವರ ಹೆಸರು ಆರ್. ಸೂರ್ಯನ್ ಅಂತ ತೋರಿಸ್ತಾರೆ.
(ರವಿಚಂದ್ರನ್ ತಮ್ಮ ಮಗನ ಹೆಸರನ್ನು ರವಿಸೂರ್ಯನ್ ಅಂತ ಬದಲಾಯಿಸಿದ್ದಾರಾ? ಈ ಸುದ್ದಿ ಸ್ಕ್ರೀನಲ್ಲೇ ಗೊತ್ತಾಗಿದ್ದು)
ರವಿಚಂದ್ರನ್ ಪತ್ನಿಯ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿರುವುದು ಗೊತ್ತಿರುವ ವಿಷಯ.
ಅಚ್ಚರಿಯೆಂದರೆ..... ವಿಕ್ರಮ್ ಅಲಿಯಾಸ್ ಆರ್.ಸೂರ್ಯನ್ ಕೆಲವು ಆಂಗಲ್ ಗಳಲ್ಲಿ ಶ್...... ಚಿತ್ರದ ಉಪೇಂದ್ರನಂತೆ ಕಾಣುತ್ತಾನೆ. ( ಡೂಪ್ಲಿಕೇಟ್ ಪೋಲಿಸ್ ಆಗಿ ಒದೆ ತಿಂತಾನಲ್ಲ ಉಪ್ಪಿ ನೆನಪಾಯ್ತಾ?)
ಕ್ರೇಜಿಸ್ಟಾರ್ ಚಿತ್ರದಲ್ಲಿ ........ಧೂಮಪಾನ ನಿಷೇಧಿಸಿದೆ ಎಂಬ ಸೆನ್ಸಾರ್ ಎಚ್ಚರಿಕೆ ಬೋರ್ಡು ಕೂಡ ಸ್ಟೈಲಿಷಾಗಿ ಕಾಣುತ್ತದೆ.
ಟ್ರಾಫಿಕ್ ಚಿತ್ರವನ್ನು ರೀಮೇಕ್ ಮಾಡುವ ಅಗತ್ಯವಿರಲಿಲ್ಲ. ಇಡೀ ಚಿತ್ರ ಕನಸುಗಾರನ ಒಂದು ಕನಸು ಎಂಬಂತೆ ಮಂಜಿನ ಹನಿಯ ಮೇಕಿಂಗು, ಏಕಾಂಗಿಯ ಸೋಲಿನ ಬಡಬಡಿಕೆ ಇತ್ಯಾದಿಗಳನ್ನೇ ತುಂಬಿಸಿ ಕೊಟ್ಟಿದ್ದರೂ ನೋಡಿಬಿಡಬಹುದಿತ್ತು. ಟ್ರಾಫಿಕ್ಕನ್ನ ಸಪರೇಟಾಗಿ ರೀಮೇಕ್ ಮಾಡಬಹುದಿತ್ತು. ಅಥವಾ ಇನ್ಯಾರೋ ಮಾಡ್ಕೊಳ್ತಿದ್ರು ಬಿಟ್ ಬಿಡ್ಬೇಕಿತ್ತು.
ಚಿತ್ರಕ್ಕೆ ರವಿಚಂದ್ರನ್ ಸೇರಿದಂತೆ ಇನ್ನಿಬ್ಬರು ನಿರ್ಮಾಪಕರು ಇರೋದ್ರಿಂದ, ಅರ್ಧ ಚಿತ್ರ ತಮಗಾಗಿ ಇನ್ನರ್ಧ ಮಿಕ್ಕ ನಿರ್ಮಾಪಕರಿಗಾಗಿ ಎಂಬಂತೆ ಪಾಲು ಮಾಡಿಕೊಂಡಂತಿದೆ.
ಒಂದೊಳ್ಳೇ ಚಿತ್ರ ರೀಮೇಕಾಗಿ ಹಾಳಾಗಿದೆ ಅನ್ನೋ ಬೇಜಾರಿಗಿಂತ
ಒಂದು ಅದ್ಭುತವೆನಿಸಬಹುದಾಗಿದ್ದ ರವಿಚಂದ್ರನ್ ಚಿತ್ರ ಇನ್ಯಾವುದರದ್ದೋ ರೀಮೇಕ್ ಆಗಲು ಹೋಗಿ ಹಾಳಾಗಿದೆ ಅನ್ನೋದೇ ಸರಿ.
ಏನೇ ಇರಲಿ ಈ ಚಿತ್ರ ನಂಗಿಷ್ಟ. ರವಿಚಂದ್ರನ್ ಗೆ ಸಿಣೆಮಾ ಪ್ರೀತಿ ಹೋಗಲ್ಲ. ನಂಗೆ ರವಿಚಂದ್ರನ್ ಮೇಲಿನ ಅಭಿಮಾನ ಹೋಗಲ್ಲ. ಮಂಜಿಣ ಹಣಿ ಅದೆಷ್ಟು ಆವರಿಸಿಕೊಂಡಿದೆ ನಿಮ್ಮನ್ನು ಅನ್ನೋದು ನಿಮ್ಮ ಅಭಿಮಾನಿಯಾಗಿ ನಾನು ಫೀಲ್ ಮಾಡಬಲ್ಲೆ. ನಿಮ್ಮ ಕನಸು ನನ್ನ ಕನಸೂ ಕೂಡ. ಇನ್ನು ಹತ್ತು ವರ್ಷ ಆದ್ರೂ ಸರಿ.. ಕಾಯ್ತೀನಿ. ಅದಕ್ಕೆ ಮೊದಲು ಇಂಥ ಹತ್ತು ಟ್ರೇಲರ್ ನೋಡೋಕೂ ನಾ ರೆಡಿ.
ಧನ್ಯವಾದಗಳು ನವೀನ್ ಸಾಗರ್ ರವರೆ !_/\_
ಈ ಬರಹದ ಕ್ರೆಡಿಟ್ಸ್ ನವೀನ್ ಸಾಗರ್ ರವರಿಗೆ ಸಲ್ಲಬೇಕು ನನ್ನದಲ್ಲ !!!

No comments:
Post a Comment