Thursday, 15 September 2016

ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ:


♦ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿl
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂll
💠ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:
♦ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll
💠ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:
♦ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
💠ಮಂತ್ರ ಸ್ನಾನ:
♦ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll
💠 ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:
♦ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll
♦ ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll
💠ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:
♦ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
♦ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll
💠ಸಂಕಷ್ಟದಲ್ಲಿರುವಾಗ ಪ್ರಾರ್ಥನೆ:
♦ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚl
ಋತುಪರ್ಣಸ್ಯ ರಾಜರ್ಷೆ ಕೀರ್ತನಂ ಕಲಿ ನಾಶನಂll
💠ಕ್ಷಮಾಪಣೆಗೆ ಹೇಳುವ ಮಂತ್ರ:
♦ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂl
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರll
♦ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl
ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll
♦ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll
💠 ಲೋಕ ಕಲ್ಯಾಣಕ್ಕೆ ಹೇಳುವ ಮಂತ್ರ:
♦ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂl ನ್ಯಾಯೇನ ಮಾರ್ಗೆನ ಮಹೀಂ ಮಹೇಶಃl
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂl
ಲೋಕಾ ಸಮಸ್ತ ಸುಖಿನೋ ಭವಂತು
💠 ಆರತಿ ತೆಗೆದು ಕೊಳ್ಳುವಾಗ ಹೇಳುವ ಮಂತ್ರ:
♦ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂl ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನll
💠 ಜ್ಯೋತಿ ಬೆಳಗುವಾಗ ಹೇಳುವ ಮಂತ್ರ:
♦ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃl
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇll
💠 ಶುಭ ಪ್ರಯಾಣಕ್ಕೆ ಹೇಳುವ ಮಂತ್ರ:
♦ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚl
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃll
💠ಚಿರಂಜೀವಿಗಳ ಸ್ಮರಿಸುವಿಕೆ:
♦ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃl
ಕೃಪಃ ಪರುಶುರಾಮಚ ಸಪ್ತೈತೆ ಚಿರಜೀವಿನಃll
💠ಮಾತಾ ಪಿತೃಗಳ ಸ್ಮರಣೆ:
♦ಮಾತೃ ದೇವೊ ಭವಃl ಪಿತೃ ದೇವೋ ಭವಃl ಆಚಾರ್ಯ ದೇವೋ ಭವಃl ಅತಿಥಿ ದೇವೋ ಭವಃl
💠 ಸರ್ಪ ಭಯಕ್ಕೆ ಹೇಳುವ ಮಂತ್ರ:
♦ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ
💠 ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ:
♦ಮೂಲತೋ ಬ್ರಹ್ಮರೂಪಾಯl ಮಧ್ಯತೋ ವಿಷ್ಣುರೂಪಿಣೇl ಅಗ್ರತಃ ಶಿವರೂಪಾಯl ಅಶ್ವತ್ಥಾಯ ನಮೋ ನಮಃll
💠 ಶಾಂತಿ ಮಂತ್ರಗಳು:
♦ಓಂ ಅಸತೋಮಾ ಸದ್ಗಮಯl ತಮಸೋಮಾ ಜ್ಯೋತಿರ್ಗಮಯl
ಮೃತ್ಯೋರ್ಮಾ ಅಮೃತಂಗಮಯಾll 
ಓಂ ಶಾಂತಿಃ ಶಾಂತಿಃ ಶಾಂತಿಃ
♦ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈl
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈll
ಓಂ ಶಾಂತಿಃ ಶಾಂತಿಃ ಶಾಂತಿಃ
💠ಮಲಗುವಾಗ ಹೇಳುವ ಮಂತ್ರ:
♦ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂlkoko
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃll
ದಿನ ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ ಪಠಿಸಿ, ನಿಮ್ಮ ದಿನಚರಿಯಲ್ಲಿ, ಆರೋಗ್ಯದಲ್ಲಿ ವ್ಯತ್ಯಾಸವನ್ನು ಗಮನಿಸಿ.

Thursday, 25 August 2016

*ಕೃಷ್ಣ ಜನ್ಮಾಷ್ಟಮಿ ಶುಭ ತರಲಿ*

ಕೃಷ್ಣ ಎಂದಿನಂತೆ ಬೆಣ್ಣೆ ಕದಿಯಲು ಹೋದ . ಯಶೋದೆಗೆ ಅವನ ತುಂಟತನ ನೋಡಿ ಸಾಕಾಗಿತ್ತು. ಸರಿ ಬೆಣ್ಣೆಯ ಕುಡಿಕೆಯನ್ನ ನೆಲುವಿನ ಮೇಲೆ ಕಟ್ಟಿ ಒಂದು ಗಂಟೆಯನ್ನ ಕಾವಲಿಗೆ ನೇಮಿಸಿ ಕೃಷ್ಣ ಬಂದು ಬೆಣ್ಣೆ ಕದ್ದರೆ ತನಗೆ ಅರುಹುವಂತೆ ಹೇಳುತ್ತಾಳೆ . ಕೃಷ್ಣ ಬರ್ತಾನೆ . ಅಮ್ಮ ಕಟ್ಟಿದ ಗಂಟೆ ನೋಡ್ತಾನೆ. ಸರಿ ಗಂಟೆಗೆ ತಾಕೀತು ಮಾಡ್ತಾನೆ 'ನಾ ಬೆಣ್ಣೆ ಕದಿಯೋದನ್ನ ಅಮ್ಮನಿಗೆ ಹೇಳಬಾರದು' ಗಂಟೆ ಒಪ್ಪಿಕೊಳ್ಳುತ್ತದೆ.. ಕೃಷ್ಣ ಎಂದಿನಂತೆ ಗೆಳೆಯರ ಸಹಾಯದಿಂದ ಬೆಣ್ಣೆಯ ಗಡಿಗೆ ಇಳಿಸಿ ಎಲ್ಲರಿಗೂ ಬೆಣ್ಣೆ ಹಂಚುತ್ತಾನೆ. ಗಂಟೆ ಅವನಿಗೆ ಕೊಟ್ಟ ಮಾತಿನಂತೆ ಸುಮ್ಮನಿರುತ್ತದೆ. ಗೆಳೆಯರೆಲ್ಲ ಖುಷಿಖುಷಿಯಿಂದ ತಿಂತಾರೆ .. ಎಲ್ಲರಿಗೂ ಹಂಚಿದ ಕೃಷ್ಣ ತಾನೂ ತಿನ್ನಲು ಬಾಯಿಗಿಡುತ್ತಾನೆ ಅಷ್ಟೇ .. ಗಂಟೆ ಒಂದೇ ಸಮ ಸದ್ದು ಮಾಡಲು ಶುರು ಮಾಡುತ್ತದೆ.. ಗೋಪಮ್ಮ ಓಡಿ ಬಂದು ಕೃಷ್ಣನನ್ನ ಹಿಡಿಯುತ್ತಾಳೆ . ಎಂದಿನಂತೆ ಬಣ್ಣದ ಮಾತಿನಿಂದ ಅಮ್ಮನನ್ನ ನಗಿಸಿದ ಕೃಷ್ಣ ಅಮ್ಮನಿಂದ ಮುತ್ತು ಪಡೆದುಕೊಂಡು ಅಮ್ಮನನ್ನ ಮರುಳು ಮಾಡುತ್ತಾನೆ. ಎಲ್ಲಾ ಆದ ಮೇಲೆ ಗಂಟೆಯನ್ನ ತರಾಟೆಗೆ ತೆಗೆದುಕೊಳ್ಳುತ್ತಾನೆ. 'ಅಲ್ಲಾ, ನನಗೆ ಮಾತು ಕೊಟ್ಟಿದ್ದೆ ತಾನೇ ? ಎಲ್ಲರೂ ತಿನ್ನುವವರೆಗೂ ಸುಮ್ಮನಿದ್ದು ನಾ ತಿನ್ನುವಾಗ ಏಕೆ ಹೀಗೆ ಮಾಡಿದೆ?' ಅಂದು ಕೇಳುತ್ತಾನೆ. ಗಂಟೆ 'ಇದರಲ್ಲಿ ನನ್ನ ತಪ್ಪೇನು ಇಲ್ಲ ಗೋಪಾಲ .. ನಿನಗೆ ನೈವೇದ್ಯ ಮಾಡುವಾಗ ನಾನು ಸದ್ದು ಮಾಡುವುದು ನನಗೆ ಅಭ್ಯಾಸವಾಗಿ ಬಿಟ್ಟಿದೆ' ಅನ್ನುತ್ತದೆ ..!!!! ಕೃಷ್ಣ ನಕ್ಕು ಬಿಡುತ್ತಾನೆ ... 
ಎಲ್ಲಾ ವಯಸ್ಸಿನವರಿಗೂ ಕೃಷ್ಣ ಇಷ್ಟ ಆಗೋದು ಕೃಷ್ಣನ ವಿಶೇಷ.. ಓಹ್ ಇಂತಹ ಒಬ್ಬ ಕಂದನೋ, ಆಪ್ತನೋ, ಪ್ರಿಯಕರನೋ, ಹಿತೈಷಿಯೋ, ಮಂತ್ರಿಯೋ, ರಕ್ಷಕನೋ ಇರಬಾರದಿತ್ತೇ ಅನಿಸುವಷ್ಟು ಆಯಾ ವಯಸ್ಸಿಗೆ ಇಷ್ಟವಾಗ್ತಾ ಹೋಗ್ತಾನೆ ... 
ನನಗೂ ಕೃಷ್ಣ ಇಷ್ಟವಾಗ್ತಾನೆ ...... ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ ಎನ್ನುವ ಕೃಷ್ಣ, ರಾಧೆಯ ಗೆಲ್ಲುವ ಕಳ್ಳ ಕೃಷ್ಣ , ಮತ್ತೆ ಗೀತೋಪದೇಶ ಮಾಡುವ ಬೃಹತ್ ಕೃಷ್ಣ .... 
ತುಂಟತನ, ಪ್ರೀತಿ, ಸ್ನೇಹ, ಕುಟಿಲತೆ, ಆಪ್ತತೆಗಳ ಪ್ರತೀಕವಾಗಿ .... ನಮ್ಮದೇ ಬದುಕಿನ ಪ್ರತಿಬಿಂಬಗಳಂತೆ ಕೃಷ್ಣ ಕಾಣುತ್ತಾನೆ ...

"Om Namo Bhaghavathe Vasudevaya"


Happy Sri Krishna Janmashtami, 
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಷಯಗಳು
ಕೃಷ್ಣಾಷ್ಟಕಮ್
ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಮ್ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ||
ಅತಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಮ್ |
ರತ್ನ ಕಂಕಣ ಕೇಯೂರಂ ಕೃಷ್ಣಂ ವಂದೇ ಜಗದ್ಗುರುಮ್ ||
ಕುಟಿಲಾಲಕ ಸಂಯುಕ್ತಂ ಪೂರ್ಣಚಂದ್ರ ನಿಭಾನನಮ್ |
ವಿಲಸತ್ ಕುಂಡಲಧರಂ ಕೃಷ್ಣಂ ವಂದೇ ಜಗದ್ಗುರಮ್ ||
ಮಂದಾರ ಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಮ್ |
ಬರ್ಹಿ ಪಿಂಛಾವ ಚೂಡಾಂಗಂ ಕೃಷ್ಣಂ ವಂದೇ ಜಗದ್ಗುರುಮ್ ||
ಉತ್ಫುಲ್ಲ ಪದ್ಮಪತ್ರಾಕ್ಷಂ ನೀಲ ಜೀಮೂತ ಸನ್ನಿಭಮ್ |
ಯಾದವಾನಾಂ ಶಿರೋರತ್ನಂ ಕೃಷ್ಣಂ ವಂದೇ ಜಗದ್ಗುರುಮ್ ||
ರುಕ್ಮಿಣೀ ಕೇಳಿ ಸಂಯುಕ್ತಂ ಪೀತಾಂಬರ ಸುಶೋಭಿತಮ್ |
ಅವಾಪ್ತ ತುಲಸೀ ಗಂಧಂ ಕೃಷ್ಣಂ ವಂದೇ ಜಗದ್ಗುರುಮ್ ||
ಗೋಪಿಕಾನಾಂ ಕುಚದ್ವಂದ ಕುಂಕುಮಾಂಕಿತ ವಕ್ಷಸಮ್ |
ಶ್ರೀನಿಕೇತಂ ಮಹೇಷ್ವಾಸಂ ಕೃಷ್ಣಂ ವಂದೇ ಜಗದ್ಗುರುಮ್ ||
ಶ್ರೀವತ್ಸಾಂಕಂ ಮಹೋರಸ್ಕಂ ವನಮಾಲಾ ವಿರಾಜಿತಮ್ |
ಶಂಖಚಕ್ರ ಧರಂ ದೇವಂ ಕೃಷ್ಣಂ ವಂದೇ ಜಗದ್ಗುರುಮ್ ||
ಕೃಷ್ಣಾಷ್ಟಕ ಮಿದಂ ಪುಣ್ಯಂ ಪ್ರಾತರುತ್ಥಾಯ ಯಃ ಪಠೇತ್ |
ಕೋಟಿಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಸಾಹಿತ್ಯ: ಶ್ರೀವ್ಯಾಸರಾಯರು

ಕೃಷ್ಣಾ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೆ ತೋರೋ
ಕಾಲಲಂದುಗೆ ಗೆಜ್ಜೆ ನೀಲದ ಭಾಪುರಿ
ನೀಲವರ್ಣನೆ ನಾಟ್ಯವಾಡುತ ಬಾರೋ
ಉಡಿಯಲ್ಲಿ ಕಿರುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳೊಳು ಧರಿಸಿದ ವೈಜಯಂತಿ ಮಾಲೆ
ಕಾಶಿಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ
ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ

Tuesday, 16 August 2016

ಭಾರತಕ್ಕೆ ಮಾತ್ರ English ನಲ್ಲಿ India ಎನ್ನತ್ತಾರೆ. ಏಕೆಂದರೆ?

ಅಮೇರಿಕಕ್ಕೆ English ನಲ್ಲಿ America ಎನ್ನುವರು.
ಜಪಾನಕ್ಕೆ English ನಲ್ಲಿ Japan
ಎನ್ನುವರು.
ಭೂತಾನಕ್ಕೆ English ನಲ್ಲಿ Bhutan
ಎನ್ನುವರು.
ಶ್ರೀಲಂಕಕ್ಕೆ English ನಲ್ಲಿ
Sri Lanka ಎನ್ನುವರು.
ಬಾಂಗ್ಲಾದೇಶಕ್ಕೆ English ನಲ್ಲಿ
Bangladesh ಎನ್ನುವರು.
ನೇಪಾಳಕ್ಕೆ English ನಲ್ಲಿ Nepal ಎನ್ನುವರು.
ಇಷ್ಟೇ ಅಲ್ಲ
ನಮ್ಮ ಸಮೀಪವಿರುವ ಪಾಕಿಸ್ತಾನಕ್ಕೆ
English ನಲ್ಲಿ Pakistan ಎನ್ನುವರು.
ಆದರೆ ಭಾರಕ್ಕೆ ಮಾತ್ರ English ನಲ್ಲಿ India ಎನ್ನತ್ತಾರೆ. ಏಕೆಂದರೆ? Oxford Dictionary ಅನುಸಾರ -
India ಶಬ್ದಕ್ಕೆ ೯೯% ಜನರಿಗೆ ಮಾಹಿತಿ ಇಲ್ಲದೆ ಇರಬಹುದು...
I - Independent
N- Nation
D- Declared
I - In
A- August
ಆದ್ದರಿಂದ India ಎನ್ನುತ್ತಾರೆ.
ಸ್ನೇಹಿತರೆ,
ಇದನ್ನು
ಈ ಮೆಸೇಜ್ ಎಲ್ಲರಿಗೂ ಕಳಿಸಿ ಹಾಗೂ ತಿಳಿಸಿ...

Thursday, 4 August 2016

ನಿಮ್ಮ ಜನ್ಮ ನಕ್ಷತ್ರದ ಪ್ರಕಾರ ನಿಮ್ಮ ಸ್ವಭಾವ ತಿಳಿದುಕೊಳ್ಳಿ


1. ಅಶ್ವಿನಿ- ಬೌದ್ಧಿಕ ಪ್ರಖರತೆ, ಸಂಚಾಲನ ಶಕ್ತಿ, ಚಂಚಲತೆ ಹಾಗೂ ಚಪಲತೆ ಈ ನಕ್ಷತ್ರದಲ್ಲಿ ಹುಟ್ಟಿದವರ ಗುಣಗಳು.
2. ಭರಣಿ- ಸ್ವಾರ್ಥಿ, ಸ್ವಕೇಂದ್ರಿತ ಮನಸ್ಥಿತಿ, ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಮರ್ಥರಾಗಿರುವುದು ಈ ನಕ್ಷತ್ರ ಹೊಂದಿರುವವರ ವಿಶೇಷತೆ.
3. ಕೃತ್ತಿಕಾ- ಈ ನಕ್ಷತ್ರದಲ್ಲಿ ಹುಟ್ಟಿದವರು ಅತಿ ಸಾಹಸಿ ಮನೋಭಾವ, ಆಕ್ರಮಣಶೀಲತೆ, ಸ್ವಕೇಂದ್ರಿತ, ಅಹಂಕಾರಿಗಳು ಆಗಿರುತ್ತಾರೆ. ಇವರಿಗೆ ಶಸ್ತ್ರಾಸ್ತ್ರ, ಅಗ್ನಿ ಹಾಗೂ ವಾಹನ ಭಯ ಹೆಚ್ಚು.
4. ರೋಹಿಣಿ- ಪ್ರಸನ್ನ ಭಾವ, ಕಲೆಯ ಮೇಲೆ ಅತೀವ ಆಸಕ್ತಿ, ಮನಸ್ಸು ಯಾವಾಗಲೂ ಪ್ರಫುಲ್ಲವಾಗಿ ಸ್ವಚ್ಛವಾಗಿರುವ ಮನೋಭಾವ, ಹಾಗೂ ಅತ್ಯುಚ್ಛ ಅಭಿರುಚಿಗಳು ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಇರುತ್ತದೆ.
5. ಮೃಗಶಿರಾ- ಈ ನಕ್ಷತ್ರದಲ್ಲಿ ಜನಿಸಿದವರು ಅತಿ ಬುದ್ಧಿವಂತಿಗೆ ಹಾಗೂ ಅತಿ ಭೋಗಪ್ರಿಯರು ಆಗಿರುತ್ತಾರೆ. ಬುದ್ಧಿ ಹಾಗೂ ಭೋಗ ಸಮಪ್ರಮಾಣದಲ್ಲೇ ಇದ್ದರೆ ಚಿಂತೆಯಿಲ್ಲ. ಆದರೆ ಬುದ್ಧಿ ಹೆಚ್ಚಾದರೆ ಇವರ ಉಪಯೋಗಕ್ಕೆ ಬರುವುದಿಲ್ಲ.
6. ಆರ್ದ್ರಾ- ಸಂಶಯ ಸ್ವಭಾವ, ಯಾವಾಗಲೂ ದ್ವಂದ್ವ ಮನೋಸ್ಥಿತಿ ಈ ರಾಶಿಯಲ್ಲಿ ಹುಟ್ಟಿದವರದ್ದು.
7. ಪುನರ್ವಸು- ಆದರ್ಶವಾದಿ, ಆಧ್ಯಾತ್ಮದಲ್ಲಿ ಅತೀವ ಆಸಕ್ತಿ ಹೊಂದಿರುವ ಈ ನಕ್ಷತ್ರದಲ್ಲಿ ಜನಿಸಿದವರು ಎಲ್ಲರ ಸಹಯೋಗದಲ್ಲಿ ಶಾಂತ ಮನೋಸ್ಥಿತಿಯನ್ನು ಹೊಂದಿರುತ್ತಾರೆ.
8. ಆಶ್ಲೇಷಾ- ಜಿದ್ದಿನ ಸ್ವಭಾವ, ಹಟ ಸಾಧಿಸುವ ವ್ಯಕ್ತಿತ್ವ ಇವರದ್ದು. ವಿಶ್ವಾಸ ಎಂಬುದೇ ಇವರಿಗೆ ದೂರದ ಮಾತು. ಹಾಗಾಗಿ ಇವರು ಸುಮ್ಮನೆ ತಮಗೆ ತಾವೇ ತೊಂದರೆಯನ್ನು ಆಹ್ವಾನಿಸುತ್ತಾರೆ.
9. ಮಘಾ- ಸ್ವಾಭಿಮಾನಿ, ಸ್ವಾವಲಂಬಿ, ಮಹತ್ವಾಕಾಂಕ್ಷಿ ಹಾಗೂ ನಾಯಕತ್ವದ ಗುಣಗಳನ್ನು ಹೊಂದಿರುವವರು ಇವರು.
10. ಪೂರ್ವ- ಶ್ರದ್ಧೆ, ಲಲಿತಕಲೆಗಳಲ್ಲಿ ಆಸಕ್ತಿ, ರಸಿಕತನ ಹಾಗೂ ಶೋಕಿತನ ಇವರಿಗಿರುತ್ತದೆ.
11. ಉತ್ತರಾ- ಸಮತೋಲನ ಮನೋಭಾವ ಇವರದ್ದು. ವ್ಯವಹಾರಗಳಲ್ಲಿ ಚತುರರಿರುವ ಇವರು ಅತ್ಯಂತ ಪರಿಶ್ರಮಿಗಳು.
12. ಹಸ್ತಾ- ಕಲ್ಪನಾಶೀಲ, ಸಂವೇದನಾಶೀಲ, ಸುಖೀ ಹಾಗೂ ಸಮಾಧಾನಚಿತ್ತವಿರುವ ಇವರು ಸದಾ ಒಳ್ಳೆಯ ಹಾದಿಯಲ್ಲೇ ನಡೆಯುತ್ತಾರೆ.
13. ಚಿತ್ರಾ- ಬರೆಯುವುದು, ಓದುವುದರಲ್ಲಿ ಆಸಕ್ತಿ, ಶೋಕಿತನ ಇರ ಗುಣ. ಅಲ್ಲದೆ, ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ಪುರುಷರೆಡೆಗೆ ಅಥವಾ ಪುರುಷರು ಮಹಿಳೆಯರೆಡೆಗೆ ಆಕರ್ಷಿತರಾಗುವುದು ಬಲು ಬೇಗ.
14. ಸ್ವಾತಿ- ಸಮತೋಲನ ಪ್ರಕೃತಿ, ಮನಸ್ಸಿನ ನಿಯಂತ್ರಣ, ಸಮಾಧಾನ ಚಿತ್ತ, ದುಃಖವ್ನು ತಾಳಿಕೊಳ್ಳುವ ಶಕ್ತಿ ಇವರಿಗೆ ಹೆಚ್ಚಿರುತ್ತದೆ.
15. ವಿಶಾಖಾ- ಸ್ವಾರ್ಥಿ, ಜಿದ್ದಿನ ಸ್ವಭಾವ ಇವರಿಗೆ ಹೆಚ್ಚು. ಏನಾದರೊಂದು ನೆವ ಹೇಳಿ ಕೆಲಸ ತಪ್ಪಿಸಿಕೊಳ್ಳಲು ಇವರು ನಿಪುಣರು.
16. ಅನುರಾಧಾ- ಕುಟುಂಬದ ಮೇಲೆ ಅಪಾರ ಪ್ರೀತಿ ಹೊಂದಿರುವ ಇವರು ಒಳ್ಳೆಯ ನಡತೆಯೊಂದಿಗೆ ಸನ್ಮಾರ್ಗದಲ್ಲೇ ನಡೆಯುತ್ತಾರೆ.
ಶೋಕಿತನ ಸ್ವಲ್ಪ ಹೆಚ್ಚಿರುವ ಇವರು, ಮಧುರವಾದ ಸ್ವರವನ್ನು ಹೊಂದಿರುತ್ತಾರೆ. ಜತೆಗೆ ಶೃಂಗಾರಪ್ರಿಯರೂ ಕೂಡಾ.
17. ಜೇಷ್ಠ- ನಿರ್ಮಲ ಸ್ವಭಾವ, ಎಲ್ಲವನ್ನೂ ಸಲೀಸಾಗಿ ಮನಸ್ಸಿಗೆ ತೆಗೆದುಕೊಳ್ಳುವ ಪ್ರವೃತ್ತಿ ಇವರಿಗಿದ್ದರೂ, ಶತ್ರುಗಳನ್ನು ಎಂದಿಗೂ ಮರೆಯಲಾರರು. ಹೇಗಾದರೂ ಮಾಡಿ ಸದ್ದಿಲ್ಲದೆಯಾದರೂ, ಇವರು ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳುವ ಜಾಯಮಾನ ಹೊಂದಿರುತ್ತಾರೆ.
18. ಮೂಲ- ಪ್ರಾರಂಭಿಕ ಜೀವನ ಕಷ್ಟಕರವಾಗಿರುತ್ತದೆ. ಜತೆಗೆ ಖಾಸಗಿ ಜೀವನದಲ್ಲಿ ಇವರು ದುಃಖಿಗಳಾಗಿರುತ್ತಾರೆ. ಆದರೂ, ಇವರು ಕಲಾಪ್ರೇಮಿಗಳು. ಕಲಾ ಸಂಬಂಧೀ ಕೆಲಸಗಳಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ. ಜತೆಗೆ ಇವರು ರಾಜಕಾರಣದಲ್ಲೂ ಚತುರರಾಗಿರುತ್ತಾರೆ.
19. ಪೂರ್ವಷಾಢ- ಶಾಂತ, ನಿಧಾನಗತಿಯ, ಹಾಗೂ ಸಮಾಧಾನಚಿತ್ತವಿರುವ ಇವರು ಶ್ರೀಮಂತಿಕೆ, ಐಶ್ವರ್ಯವನ್ನೇ ಬಯಸುತ್ತಾರೆ.
20. ಉತ್ತರಾಷಾಢಾ- ವಿನಯಶೀಲತ್ವ, ಬುದ್ಧಿವಂತಿಕೆ ಹಾಗೂ ಆಧ್ಮಾತ್ಮದಲ್ಲಿ ಅಪಾರ ಅಭಿರುಚಿ ಈ ನಕ್ಷತ್ರದಲ್ಲಿ ಹುಟ್ಟಿದವರ ಗುಣಗಳು. ಇವರು ಎಲ್ಲರೊಂದಿಗೂ ಚೆನ್ನಾಗಿ ವ್ಯವಹರಿಸುತ್ತಾರೆ.
21. ಶ್ರವಣ- ಶ್ರದ್ಧೆ, ಪರೋಪಕಾರಿ ಗುಣ, ಕೃತಜ್ಞತೆ ಹೊಂದಿರುವ ಇವರು ಸನ್ಮಾರ್ಗಿಗಳಾಗಿರುತ್ತಾರೆ.
22. ಧನಿಷ್ಠಾ- ಅಹಂಕಾರಿಗಳು, ಕಟು ಮಾತಿನವರಾಗಿರುವ ಇವರಿಗೆ ಸ್ವಲ್ಪ ಸಂಯಮ ಕಡಿಮೆ.
23. ಶತಭಿಷಾ- ರಸಿಕತನ ಹೆಚ್ಚಿರುವ ಇವರು ಚಟ, ವ್ಯಸನಗಳಿಗೆ ಬಲಿಬೀಳುವುದು ಹೆಚ್ಚು. ಇವರು ಸಮಯಪಾಲನೆ ಮಾಡುವುದು ಕಡಿಮೆ.
24. ಪುಷ್ಯ- ಸನ್ಮಾರ್ಗಿಗಳಾಗಿರುವ ಇವರು ದಯೆ, ಬುದ್ಧಿವಂತಿಕೆ ಗುಣಗಳನ್ನು ರೂಢಿಸಿಕೊಂಡಿರುತ್ತಾರೆ. ಇವರು ದಾನಿಗಳು. ಜತೆಗೆ ಬಲುಬೇಗನೆ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ.
25. ಪೂರ್ವಭಾದ್ರ- ಬುದ್ಧಿವಂತಿಕೆ, ಸಂಶೋಧನಾ ಪ್ರವೃತ್ತಿ, ಕುಶಲನೆ, ಹಾಗೂ ಕೆಲಸದಲ್ಲಿ ನಿಪುಣತನ ಇವರ ಗುಣಗಳು.
26. ಉತ್ತರಾಭಾದ್ರ- ಮೋಹಕ ವ್ಯಕ್ತಿತ್ವವನ್ನು ಹೊಂದಿರುವ ಇವರು, ಮಾತುಗಾರಿಕೆಯಲ್ಲಿ ಚತುರರು. ಸ್ವಲ್ಪ ಚಂಚಲತೆ ಹೆಚ್ಚಿರುವ ಇವರು ಇನ್ನೊಬ್ಬರನ್ನು ಬಲುಬೇಗನೆ ತಮ್ಮಿಂದ ಪ್ರಭಾವಿತರನ್ನಾಗಿ ಮಾಡುವ ಶಕ್ತಿ ಹೊಂದಿರುತ್ತಾರೆ.
27. ರೇವತಿ- ಸತ್ಯಸಂಧರಾಗಿರುವ ಇವರು, ವಿವೇಕಿಗಳೂ, ನಿರಪೇಕ್ಷಿಗಳೂ ಆಗಿರುತ್ತದೆ.

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...