1. ಅಶ್ವಿನಿ- ಬೌದ್ಧಿಕ ಪ್ರಖರತೆ, ಸಂಚಾಲನ ಶಕ್ತಿ, ಚಂಚಲತೆ ಹಾಗೂ ಚಪಲತೆ ಈ ನಕ್ಷತ್ರದಲ್ಲಿ ಹುಟ್ಟಿದವರ ಗುಣಗಳು.
2. ಭರಣಿ- ಸ್ವಾರ್ಥಿ, ಸ್ವಕೇಂದ್ರಿತ ಮನಸ್ಥಿತಿ, ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವುದರಲ್ಲಿ ಸಮರ್ಥರಾಗಿರುವುದು ಈ ನಕ್ಷತ್ರ ಹೊಂದಿರುವವರ ವಿಶೇಷತೆ.
3. ಕೃತ್ತಿಕಾ- ಈ ನಕ್ಷತ್ರದಲ್ಲಿ ಹುಟ್ಟಿದವರು ಅತಿ ಸಾಹಸಿ ಮನೋಭಾವ, ಆಕ್ರಮಣಶೀಲತೆ, ಸ್ವಕೇಂದ್ರಿತ, ಅಹಂಕಾರಿಗಳು ಆಗಿರುತ್ತಾರೆ. ಇವರಿಗೆ ಶಸ್ತ್ರಾಸ್ತ್ರ, ಅಗ್ನಿ ಹಾಗೂ ವಾಹನ ಭಯ ಹೆಚ್ಚು.
4. ರೋಹಿಣಿ- ಪ್ರಸನ್ನ ಭಾವ, ಕಲೆಯ ಮೇಲೆ ಅತೀವ ಆಸಕ್ತಿ, ಮನಸ್ಸು ಯಾವಾಗಲೂ ಪ್ರಫುಲ್ಲವಾಗಿ ಸ್ವಚ್ಛವಾಗಿರುವ ಮನೋಭಾವ, ಹಾಗೂ ಅತ್ಯುಚ್ಛ ಅಭಿರುಚಿಗಳು ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಇರುತ್ತದೆ.
5. ಮೃಗಶಿರಾ- ಈ ನಕ್ಷತ್ರದಲ್ಲಿ ಜನಿಸಿದವರು ಅತಿ ಬುದ್ಧಿವಂತಿಗೆ ಹಾಗೂ ಅತಿ ಭೋಗಪ್ರಿಯರು ಆಗಿರುತ್ತಾರೆ. ಬುದ್ಧಿ ಹಾಗೂ ಭೋಗ ಸಮಪ್ರಮಾಣದಲ್ಲೇ ಇದ್ದರೆ ಚಿಂತೆಯಿಲ್ಲ. ಆದರೆ ಬುದ್ಧಿ ಹೆಚ್ಚಾದರೆ ಇವರ ಉಪಯೋಗಕ್ಕೆ ಬರುವುದಿಲ್ಲ.
6. ಆರ್ದ್ರಾ- ಸಂಶಯ ಸ್ವಭಾವ, ಯಾವಾಗಲೂ ದ್ವಂದ್ವ ಮನೋಸ್ಥಿತಿ ಈ ರಾಶಿಯಲ್ಲಿ ಹುಟ್ಟಿದವರದ್ದು.
7. ಪುನರ್ವಸು- ಆದರ್ಶವಾದಿ, ಆಧ್ಯಾತ್ಮದಲ್ಲಿ ಅತೀವ ಆಸಕ್ತಿ ಹೊಂದಿರುವ ಈ ನಕ್ಷತ್ರದಲ್ಲಿ ಜನಿಸಿದವರು ಎಲ್ಲರ ಸಹಯೋಗದಲ್ಲಿ ಶಾಂತ ಮನೋಸ್ಥಿತಿಯನ್ನು ಹೊಂದಿರುತ್ತಾರೆ.
8. ಆಶ್ಲೇಷಾ- ಜಿದ್ದಿನ ಸ್ವಭಾವ, ಹಟ ಸಾಧಿಸುವ ವ್ಯಕ್ತಿತ್ವ ಇವರದ್ದು. ವಿಶ್ವಾಸ ಎಂಬುದೇ ಇವರಿಗೆ ದೂರದ ಮಾತು. ಹಾಗಾಗಿ ಇವರು ಸುಮ್ಮನೆ ತಮಗೆ ತಾವೇ ತೊಂದರೆಯನ್ನು ಆಹ್ವಾನಿಸುತ್ತಾರೆ.
9. ಮಘಾ- ಸ್ವಾಭಿಮಾನಿ, ಸ್ವಾವಲಂಬಿ, ಮಹತ್ವಾಕಾಂಕ್ಷಿ ಹಾಗೂ ನಾಯಕತ್ವದ ಗುಣಗಳನ್ನು ಹೊಂದಿರುವವರು ಇವರು.
10. ಪೂರ್ವ- ಶ್ರದ್ಧೆ, ಲಲಿತಕಲೆಗಳಲ್ಲಿ ಆಸಕ್ತಿ, ರಸಿಕತನ ಹಾಗೂ ಶೋಕಿತನ ಇವರಿಗಿರುತ್ತದೆ.
11. ಉತ್ತರಾ- ಸಮತೋಲನ ಮನೋಭಾವ ಇವರದ್ದು. ವ್ಯವಹಾರಗಳಲ್ಲಿ ಚತುರರಿರುವ ಇವರು ಅತ್ಯಂತ ಪರಿಶ್ರಮಿಗಳು.
12. ಹಸ್ತಾ- ಕಲ್ಪನಾಶೀಲ, ಸಂವೇದನಾಶೀಲ, ಸುಖೀ ಹಾಗೂ ಸಮಾಧಾನಚಿತ್ತವಿರುವ ಇವರು ಸದಾ ಒಳ್ಳೆಯ ಹಾದಿಯಲ್ಲೇ ನಡೆಯುತ್ತಾರೆ.
13. ಚಿತ್ರಾ- ಬರೆಯುವುದು, ಓದುವುದರಲ್ಲಿ ಆಸಕ್ತಿ, ಶೋಕಿತನ ಇರ ಗುಣ. ಅಲ್ಲದೆ, ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ಪುರುಷರೆಡೆಗೆ ಅಥವಾ ಪುರುಷರು ಮಹಿಳೆಯರೆಡೆಗೆ ಆಕರ್ಷಿತರಾಗುವುದು ಬಲು ಬೇಗ.
14. ಸ್ವಾತಿ- ಸಮತೋಲನ ಪ್ರಕೃತಿ, ಮನಸ್ಸಿನ ನಿಯಂತ್ರಣ, ಸಮಾಧಾನ ಚಿತ್ತ, ದುಃಖವ್ನು ತಾಳಿಕೊಳ್ಳುವ ಶಕ್ತಿ ಇವರಿಗೆ ಹೆಚ್ಚಿರುತ್ತದೆ.
15. ವಿಶಾಖಾ- ಸ್ವಾರ್ಥಿ, ಜಿದ್ದಿನ ಸ್ವಭಾವ ಇವರಿಗೆ ಹೆಚ್ಚು. ಏನಾದರೊಂದು ನೆವ ಹೇಳಿ ಕೆಲಸ ತಪ್ಪಿಸಿಕೊಳ್ಳಲು ಇವರು ನಿಪುಣರು.
16. ಅನುರಾಧಾ- ಕುಟುಂಬದ ಮೇಲೆ ಅಪಾರ ಪ್ರೀತಿ ಹೊಂದಿರುವ ಇವರು ಒಳ್ಳೆಯ ನಡತೆಯೊಂದಿಗೆ ಸನ್ಮಾರ್ಗದಲ್ಲೇ ನಡೆಯುತ್ತಾರೆ.
ಶೋಕಿತನ ಸ್ವಲ್ಪ ಹೆಚ್ಚಿರುವ ಇವರು, ಮಧುರವಾದ ಸ್ವರವನ್ನು ಹೊಂದಿರುತ್ತಾರೆ. ಜತೆಗೆ ಶೃಂಗಾರಪ್ರಿಯರೂ ಕೂಡಾ.
ಶೋಕಿತನ ಸ್ವಲ್ಪ ಹೆಚ್ಚಿರುವ ಇವರು, ಮಧುರವಾದ ಸ್ವರವನ್ನು ಹೊಂದಿರುತ್ತಾರೆ. ಜತೆಗೆ ಶೃಂಗಾರಪ್ರಿಯರೂ ಕೂಡಾ.
17. ಜೇಷ್ಠ- ನಿರ್ಮಲ ಸ್ವಭಾವ, ಎಲ್ಲವನ್ನೂ ಸಲೀಸಾಗಿ ಮನಸ್ಸಿಗೆ ತೆಗೆದುಕೊಳ್ಳುವ ಪ್ರವೃತ್ತಿ ಇವರಿಗಿದ್ದರೂ, ಶತ್ರುಗಳನ್ನು ಎಂದಿಗೂ ಮರೆಯಲಾರರು. ಹೇಗಾದರೂ ಮಾಡಿ ಸದ್ದಿಲ್ಲದೆಯಾದರೂ, ಇವರು ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳುವ ಜಾಯಮಾನ ಹೊಂದಿರುತ್ತಾರೆ.
18. ಮೂಲ- ಪ್ರಾರಂಭಿಕ ಜೀವನ ಕಷ್ಟಕರವಾಗಿರುತ್ತದೆ. ಜತೆಗೆ ಖಾಸಗಿ ಜೀವನದಲ್ಲಿ ಇವರು ದುಃಖಿಗಳಾಗಿರುತ್ತಾರೆ. ಆದರೂ, ಇವರು ಕಲಾಪ್ರೇಮಿಗಳು. ಕಲಾ ಸಂಬಂಧೀ ಕೆಲಸಗಳಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ. ಜತೆಗೆ ಇವರು ರಾಜಕಾರಣದಲ್ಲೂ ಚತುರರಾಗಿರುತ್ತಾರೆ.
19. ಪೂರ್ವಷಾಢ- ಶಾಂತ, ನಿಧಾನಗತಿಯ, ಹಾಗೂ ಸಮಾಧಾನಚಿತ್ತವಿರುವ ಇವರು ಶ್ರೀಮಂತಿಕೆ, ಐಶ್ವರ್ಯವನ್ನೇ ಬಯಸುತ್ತಾರೆ.
20. ಉತ್ತರಾಷಾಢಾ- ವಿನಯಶೀಲತ್ವ, ಬುದ್ಧಿವಂತಿಕೆ ಹಾಗೂ ಆಧ್ಮಾತ್ಮದಲ್ಲಿ ಅಪಾರ ಅಭಿರುಚಿ ಈ ನಕ್ಷತ್ರದಲ್ಲಿ ಹುಟ್ಟಿದವರ ಗುಣಗಳು. ಇವರು ಎಲ್ಲರೊಂದಿಗೂ ಚೆನ್ನಾಗಿ ವ್ಯವಹರಿಸುತ್ತಾರೆ.
21. ಶ್ರವಣ- ಶ್ರದ್ಧೆ, ಪರೋಪಕಾರಿ ಗುಣ, ಕೃತಜ್ಞತೆ ಹೊಂದಿರುವ ಇವರು ಸನ್ಮಾರ್ಗಿಗಳಾಗಿರುತ್ತಾರೆ.
22. ಧನಿಷ್ಠಾ- ಅಹಂಕಾರಿಗಳು, ಕಟು ಮಾತಿನವರಾಗಿರುವ ಇವರಿಗೆ ಸ್ವಲ್ಪ ಸಂಯಮ ಕಡಿಮೆ.
23. ಶತಭಿಷಾ- ರಸಿಕತನ ಹೆಚ್ಚಿರುವ ಇವರು ಚಟ, ವ್ಯಸನಗಳಿಗೆ ಬಲಿಬೀಳುವುದು ಹೆಚ್ಚು. ಇವರು ಸಮಯಪಾಲನೆ ಮಾಡುವುದು ಕಡಿಮೆ.
24. ಪುಷ್ಯ- ಸನ್ಮಾರ್ಗಿಗಳಾಗಿರುವ ಇವರು ದಯೆ, ಬುದ್ಧಿವಂತಿಕೆ ಗುಣಗಳನ್ನು ರೂಢಿಸಿಕೊಂಡಿರುತ್ತಾರೆ. ಇವರು ದಾನಿಗಳು. ಜತೆಗೆ ಬಲುಬೇಗನೆ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ.
25. ಪೂರ್ವಭಾದ್ರ- ಬುದ್ಧಿವಂತಿಕೆ, ಸಂಶೋಧನಾ ಪ್ರವೃತ್ತಿ, ಕುಶಲನೆ, ಹಾಗೂ ಕೆಲಸದಲ್ಲಿ ನಿಪುಣತನ ಇವರ ಗುಣಗಳು.
26. ಉತ್ತರಾಭಾದ್ರ- ಮೋಹಕ ವ್ಯಕ್ತಿತ್ವವನ್ನು ಹೊಂದಿರುವ ಇವರು, ಮಾತುಗಾರಿಕೆಯಲ್ಲಿ ಚತುರರು. ಸ್ವಲ್ಪ ಚಂಚಲತೆ ಹೆಚ್ಚಿರುವ ಇವರು ಇನ್ನೊಬ್ಬರನ್ನು ಬಲುಬೇಗನೆ ತಮ್ಮಿಂದ ಪ್ರಭಾವಿತರನ್ನಾಗಿ ಮಾಡುವ ಶಕ್ತಿ ಹೊಂದಿರುತ್ತಾರೆ.
27. ರೇವತಿ- ಸತ್ಯಸಂಧರಾಗಿರುವ ಇವರು, ವಿವೇಕಿಗಳೂ, ನಿರಪೇಕ್ಷಿಗಳೂ ಆಗಿರುತ್ತದೆ.
No comments:
Post a Comment