Thursday, 14 June 2018

*Marriage proposal for Swami Vivekananda in the USA*

```When Swami Vivekananda went to the United States, a woman approached him and asked to marry her. Vivekananda was surprised and wanted to know the reason of such desire. The lady replied, she was amazed by Vivekananda's intellect and wanted to have a child with similar intellect.
Vivekananda listened to her points and replied, "I understand why you are desirous to marry me, but it'll take a long time to get a grown-up child with intellect like me. I can give you a better option at this moment. Become my mother and make me your child. That's how, your desire will be fulfilled right now."```

*The lady was speechless.*

Quiz

1. What do cricket and Karnataka music have in common?

PITCH

2. What is the difference between Kunnakudi Vaidyanathan and Mahatma Gandhi?

One is a violinist and the other is a non-violinist

3. What is the ragam of the Xerox Company?

kApi

4. Favourite raga of Popeye

"Keera"vaani

5. What ragam does Mrs. Ravi sing when her husband goes away?

Bhairavi ( Bye Ravi)

6. Which ragam is sung in a North American country?

Kanada

7. In which ragam do you sing after a darshan of Ranganatha?

sAranga ( Saw Ranga)

8. If a stone 'kottAvi vittAl', what raga it will be in?

kalyawni

9. Ah, tomorrow is Pongal

Abhogi

10. Diabetics better not think about this raga

Chakravakam

Wednesday, 13 June 2018

ತಪ್ಪದೆ ಓದಿ ... ಹಿಂದೂ ಧರ್ಮದವರೆಂದಮೇಲೆ ನಿಮಗಿದು ತಿಳಿದಿರಲೇ ಬೇಕು.....🚩

*ವೇದಗಳು (೪)*
ಋಗ್ವೇದ,
ಯಜುರ್ವೇದ,
ಸಾಮವೇದ,
ಅಥರ್ವವೇದ.
*********************

*ರಾಶೀಗಳು (೧೨)*
ಮೇಷ,
ವೃಷಭ,
ಮಿಥುನ,
ಕರ್ಕ,
ಸಿಂಹ,
ಕನ್ಯಾ,
ತುಲಾ,
ವೃಶ್ಚಿಕ,
ಧನು,
ಮಕರ,
ಕುಂಭ,
ಮೀನ.
*********************

*ಋತುಗಳು (೬) ಮತ್ತು ಮಾಸ (೧೨) *
ವಸಂತ (ಚೈತ್ರ-ವೈಶಾಖ),
ಗ್ರೀಷ್ಮ (ಜೇಷ್ಠ-ಆಷಾಢ) ,
ವರ್ಷಾ (ಶ್ರಾವಣ-ಭಾದ್ರಪದ),
ಶರದ (ಅಶ್ವಿನ-ಕಾರ್ತಿಕ),
ಹೇಮಂತ (ಮಾರ್ಗಶಿರ-ಪೌಷ),
ಶಿಶಿರ (ಮಾಘ-ಫಾಲ್ಗುಣ).
*******************

*ದಿಕ್ಕುಗಳು* (೧೦)
ಪೂರ್ವ,
ಪಶ್ಚಿಮ,
ಉತ್ತರ,
ದಕ್ಷಿಣ,
ಈಶಾನ್ಯ,
ಆಗ್ನೇಯ,
ವಾಯವ್ಯ,
ನೈಋತ್ಯ,
ಆಕಾಶ,
ಪಾತಾಳ.
******************

*ಸಂಸ್ಕಾರಗಳು* (೧೬)
ಗರ್ಭಧಾನ,
ಪುಂಸವನ,
ಸೀಮನ್ತೋತ್ರಯನ,
ಜಾತಕರ್ಮ,
ನಾಮಕರಣ,
ನಿಷಕ್ರಮಣ,
ಅನ್ನಪ್ರಾಶನ,
ಚೂಡಾಕರ್ಮ,
ಕರ್ಣಭೇದ,
ಯಜ್ಞೋಪವೀತ,
ವೇದಾರಂಭ,
ಕೇಶಾಂತ,
ಸಮಾವರ್ತನ,
ವಿವಾಹ,
ಆವಸಥ್ಯಧಾನ,
ಶ್ರೌತಧಾನ.
******************

*ಸಪ್ತ ಋಷಿಗಳು* (೭)
ವಿಶ್ವಾಮಿತ್ರ,
ಜಮದಗ್ನಿ,
ಭಾರದ್ವಾಜ,
ಗೌತಮ,
ಅತ್ರಿ,
ವಸಿಷ್ಠ,
ಕಶ್ಯಪ.
******************

*ಸಪ್ತಪರ್ವತಗಳು*
ಹಿಮಾಲಯ (ಉತ್ತರ ಭಾರತ)
ಮಲಯ (ಕರ್ನಾಟಕ ಮತ್ತು ತಮಿಳನಾಡು) ,
ಸಹ್ಯಾದ್ರೀ (ಮಹಾರಾಷ್ಟ್ರ) ,
ಮಹೇಂದ್ರ (ಉಡಿಸಾ),
ವಿಂಧ್ಯಾಚಲ (ಮಧ್ಯಪ್ರದೇಶ),
ಅರವಲೀ (ರಾಜಸ್ಥಾನ),
ರೈವತಕ (ಗಿರನಾರ-ಗುಜರಾತ)
******************

*ಜ್ಯೋತಿರ್ಲಿಂಗಗಳು* (೧೨)
ಸೋಮನಾಥ ನಾಗೇಶ (ಗುಜರಾಥ),
ಮಲ್ಲಿಕಾರ್ಜುನ (ಆಂಧ್ರಪ್ರದೇಶ),
ರಾಮೇಶ್ವರ (ತಮಿಳನಾಡು),
ಮಹಾಕಾಲೇಶ್ವರ (ಉಜ್ಜೈನ),
ಓಂಕಾರೇಶ್ವರ (ಮಧ್ಯಪ್ರದೇಶ)
ಕೇದಾರನಾಥ (ಉತ್ತರಾಂಚಲ),
ವಿಶ್ವನಾಥ (ಉತ್ತರ ಪ್ರದೇಶ),
ಪರಳೀ ವೈಜನಾಥ,
ತ್ರ್ಯಂಬಕೇಶ್ವರ ,
ಘೃಷ್ಣೇಶ್ವರ ,
ಭೀಮಾಶಂಕರ (ಎಲ್ಲ ಮಹಾರಾಷ್ಟ್ರ).
*****************

*ಪೀಠಗಳು* (೪)
ಶಾರದಾಪೀಠ (ದ್ವಾರಕಾ-ಗುಜರಾತ),
ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ),
ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ),
ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)
****************

*ಚಾರಧಾಮಗಳು*
ಬದ್ರಿನಾಥ (ಉತ್ತರಾಂಚಲ),
ರಾಮೇಶ್ವರಮ (ತಮಿಳನಾಡು),
ದ್ವಾರಿಕಾ (ಗುಜರಾತ),
ಜಗನ್ನಾಥಪುರೀ (ಉಡೀಸಾ).
**************

*ಸಪ್ತಪುರಿಗಳು*
ಅಯೋಧ್ಯಾ,
ಮಥುರಾ,
ಕಾಶೀ (ಎಲ್ಲ ಉತ್ತರ ಪ್ರದೇಶ),
ಹರಿದ್ವಾರ (ಉತ್ತರಾಂಚಲ),
ಕಾಂಚೀಪುರಂ (ತಮಿಳನಾಡು) ,
ಅವಂತಿಕಾ (ಉಜ್ಜೈನ - ಮ.ಪ್ರ.),
ದ್ವಾರಿಕಾ (ಗುಜರಾಥ).
********************

*ಚಾರಕುಂಭಗಳು*
ಹರಿದ್ವಾರ (ಉತ್ತರಖಂಡ),
ಪ್ರಯಾಗ (ಉತ್ತ ಪ್ರದೇಶ),
ಉಜ್ಜೈನ (ಮಧ್ಯ ಪ್ರದೇಶ) ,
ನಾಶಿಕ(ಮಹಾರಾಷ್ಟ್ರ)
***********************

*ಪವಿತ್ರ-ಸ್ಮರಣೀಯ ನದಿಗಳು*
ಗಂಗಾ ,
ಕಾವೇರಿ,
ಯಮುನಾ,
ಸರಸ್ವತೀ,
ನರ್ಮದಾ,
ಮಹಾನದೀ,
ಗೋದಾವರೀ,
ಕೃಷ್ಣಾ ,
ಬ್ರಹ್ಮಪುತ್ರಾ.
********************

*ಅಷ್ಟಲಕ್ಷ್ಮೀಯರು* (೮)
ಆದಿಲಕ್ಷ್ಮೀ ,
ವಿದ್ಯಾಲಕ್ಷ್ಮೀ ,
ಸೌಭಾಗ್ಯಲಕ್ಷ್ಮೀ,
ಅಮೃತಲಕ್ಷ್ಮೀ,
ಕಾಮಲಕ್ಷ್ಮೀ,
ಸತ್ಯಲಕ್ಷ್ಮೀ,
ಭೋಗಲಕ್ಷ್ಮೀ,
ಯೋಗಲಕ್ಷ್ಮೀ.
*********************

*ಯುಗಗಳು*(೪)
ಸತ್ಯಯುಗ,
ತ್ರೇತಾಯುಗ,
ದ್ವಾಪರಯುಗ,
ಕಲಿಯುಗ.
********************

*ಪುರುಷಾರ್ಥ* (೪)
ಧರ್ಮ ,
ಅರ್ಥ ,
ಕಾಮ ,
ಮೋಕ್ಷ.
***********************

*ಪ್ರಕೃತಿಯ ಗುಣಗಳು* (೩)
ಸತ್ವ ,
ರಜ ,
ತಮ.
*******************

*ನಕ್ಷತ್ರಗಳು* (೨೮)
ಅಶ್ವನೀ,
ಭರಣೀ,
ಕೃತಿಕಾ,
ರೋಹಿಣೀ,
ಮೃಗ,
ಆರ್ದ್ರಾ,
ಪುನರ್ವಸು,
ಪುಷ್ಯ,
ಆಶ್ಲೇಷಾ,
ಮೇಘಾ,
ಪೂರ್ವಾಫಾಲ್ಗುನೀ,
ಉತ್ತರಾ ಫಾಲ್ಗುನೀ,
ಹಸ್ತ,
ಚಿತ್ರಾ,
ಸ್ವಾತೀ,
ವಿಶಾಖಾ,
ಅನುರಾಧಾ,
ಜ್ಯೇಷ್ಠ, ಮೂಲ,
ಪೂರ್ವಾಷಾಢಾ,
ಉತ್ತರಾಷಾಢಾ,
ಶ್ರಾವಣ,
ಘನಿಷ್ಠಾ,
ಶತತಾರಕಾ,
ಪೂರ್ವಾಭಾದ್ರಪದಾ,
ಉತ್ತರಾಭಾದ್ರಪದಾ,
ರೇವತೀ,
ಅಭಿಜಿತ.

******************
*ದಶಾವತಾರ* (೧೦)
ಮತ್ಸ್ಯ,
ಕೂರ್ಮ,
ವರಾಹ,
ನರಸಿಂಹ,
ವಾಮನ,
ಪರಶುರಾಮ,
ರಾಮ,
ಕೃಷ್ಣ,
ಬುದ್ಧ,
ಕಲ್ಕಿ

Sunday, 10 June 2018

🙏

ಪ್ರಶ್ನೆ:
ವೇದವೆಂದರೇನು ?

ಉತ್ತರ:
*ವೇದವೆಂದರೆ ಜ್ಞಾನ.*

ಪ್ರಶ್ನೆ:
ವೇದಜ್ಞಾನವನ್ನು ನೀಡಿದವರು ಯಾರು ?

ಉತ್ತರ:
*ಸಾಕ್ಷಾತ್ ಭಗವಂತ*

ಪ್ರಶ್ನೆ:
ಭಗವಂತ ವೇದಜ್ಞಾನವನ್ನು ಎಂದು ನೀಡಿದ ?

ಉತ್ತರ:
*ಸೃಷ್ಟಿಯ ಆರಂಭದಲ್ಲೇ ಭಗವಂತ ವೇದಜ್ಞಾನವನ್ನು ನೀಡಿದ.*

ಪ್ರಶ್ನೆ:
ಭಗವಂತ ವೇದಜ್ಞಾನವನ್ನೇಕೆ ನೀಡಿದ ?

ಉತ್ತರ:
*ಮಾನವಕುಲದ ಒಳಿತಿಗಾಗಿ ನೀಡಿದ.*


ಪ್ರಶ್ನೆ:
ವೇದಗಳೆಷ್ಟು?

ಉತ್ತರ:
*ನಾಲ್ಕು*
*ಋಗ್ವೇದ*
*ಯಜುರ್ವೇದ*
*ಸಾಮವೇದ*
*ಅಥರ್ವವೇದ.*

ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಯಾರಿಗೆ ನೀಡಿದ ?

ಉತ್ತರ:
*ನಾಲ್ಕು ಋಷಿಗಳಿಗೆ.*

ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಋಷಿಗಳಿಗೆ ಹೇಗೆ ನೀಡಿದ ?

ಉತ್ತರ:
*ಯೋಗಾವಸ್ಥೆಯ ಸಮಾಧಿ ಸ್ಥಿತಿಯಲ್ಲಿ.*

ಪ್ರಶ್ನೆ:
ವೇದಗಳಲ್ಲಿ ಎಂತಹ ಜ್ಞಾನವಿದೆ ?

ಉತ್ತರ:
*ಎಲ್ಲ ಸತ್ಯ ವಿದ್ಯೆಗಳು,ಜ್ಞಾನ ಹಾಗೂ ವಿಜ್ಞಾನ*

ಪ್ರಶ್ನೆ:
ವೇದಗಳ ಜ್ಞಾನವನ್ನು ಮೊದಲು ಪಡೆದವರು ಯಾರಾರು ?

ಉತ್ತರ:
*ಅಗ್ನಿ-ಋಗ್ವೇದ*
 *ವಾಯು-ಯಜುರ್ವೇದ*
*ಆದಿತ್ಯ-ಸಾಮವೇದ*
*ಅಂಗಿರಾ-ಅಥರ್ವವೇದ*

ಪ್ರಶ್ನೆ:
ಋಗ್ವೇದದ ಪ್ರಮುಖ ವಿಷಯ ಯಾವುದು ?

ಉತ್ತರ:
*ಜ್ಞಾನ*
 
ಪ್ರಶ್ನೆ:
ಯಜುರ್ವೇದದ ಪ್ರಮುಖ ವಿಷಯ ಯಾವುದು ?

ಉತ್ತರ:
*ಕರ್ಮ*

ಪ್ರಶ್ನೆ:
ಸಾಮವೇದದ ಪ್ರಮುಖ ವಿಷಯ ಯಾವುದು ?

ಉತ್ತರ:
*ಉಪಾಸನೆ*

ಪ್ರಶ್ನೆ:
ಅಥರ್ವವೇದದ ಪ್ರಮುಖ ವಿಷಯ ಯಾವುದು ?

ಉತ್ತರ:
*ವಿಜ್ಞಾನ*

ಪ್ರಶ್ನೆ:
ವೇದವನ್ನು ಓದುವ ಅಧಿಕಾರ ಯಾರಿಗಿದೆ ?

ಉತ್ತರ:
*ಉತ್ತಮ ಸಂಸ್ಕಾರ ಹಾಗೂ ಕಾಯಿಕ,ವಾಚಿಕ,ಮಾನಸಿಕ ಪರಿಶುದ್ಧಿಯಿರುವವರಿಗಷ್ಟೇ*

ಪ್ರಶ್ನೆ:
ವೇದಗಳಲ್ಲಿ ಮೂರ್ತಿಪೂಜೆಯ ವಿಧಾನವಿದೆಯೇ ?

ಉತ್ತರ:
*ಖಂಡಿತವಾಗಲೂ ಇಲ್ಲ.*

ಪ್ರಶ್ನೆ:
ವೇದಗಳಲ್ಲಿ ಅವತಾರವಾದದ ಪ್ರಮಾಣವಿದೆಯೇ ?

ಉತ್ತರ:
*ಇಲ್ಲ*

ಪ್ರಶ್ನೆ:
ವೇದಗಳಲ್ಲಿ ಜಾತಿಪದ್ಧತಿಯನ್ನು ಹೇಳಲಾಗಿದೆಯೇ ?

ಉತ್ತರ:
*ಎಲ್ಲೂ ಇಲ್ಲ.*

ಪ್ರಶ್ನೆ:
ವೇದಗಳಲ್ಲಿ ಪ್ರಾಣಿಹತ್ಯೆಯನ್ನು ಸಮರ್ಥಿಸಲಾಗಿದೆಯೇ ?

ಉತ್ತರ:
*ಖಂಡಿತಾ ಇಲ್ಲ.*

ಪ್ರಶ್ನೆ:
ಅತಿದೊಡ್ಡ ವೇದ ಯಾವುದು ?

ಉತ್ತರ:
*ಋಗ್ವೇದ*

ಪ್ರಶ್ನೆ:
ವೇದಗಳ ಇತಿಹಾಸವೆಷ್ಟಿರಬಹುದು ?

ಉತ್ತರ:
*ಸುಮಾರು ಒಂದು ಅರಬ್ ೯೬ ಕೋಟಿ ವರ್ಷಕ್ಕಿಂತಲೂ ಮುಂಚೆ.*

ಪ್ರಶ್ನೆ:
ವೇದಾರ್ಥವನ್ನು ಅರಿಯಲು ದರ್ಶನಶಾಸ್ತ್ರಗಳ ಅವಶ್ಯಯಕತೆಯಿದೆಯೇ ?

ಉತ್ತರ:
*ಖಂಡಿತಾ ಇದೆ.*

ಪ್ರಶ್ನೆ:
ದರ್ಶನ ಶಾಸ್ತ್ರಗಳೆಷ್ಟಿವೆ ? ಅವುಗಳ ಪ್ರವರ್ತಕರು ಯಾರು ?

ಉತ್ತರ:
*ಷಟ್ (ಆರು) ದರ್ಶನಗಳಿವೆ.*

 *ನ್ಯಾಯದರ್ಶನ-ಗೌತಮ ಮುನಿಗಳು*

*ವೈಶೇಷಿಕ ದರ್ಶನ- ಕಣಾದ ಮುನಿಗಳು*

*ಯೋಗದರ್ಶನ-ಪತಂಜಲಿ ಮುನಿಗಳು*

*ಮೀಮಾಂಸಾದರ್ಶನ- ಜೈಮಿನಿ ಮುನಿಗಳು*

*ಸಾಂಖ್ಯದರ್ಶನ*ಕಪಿಲ ಮುನಿಗಳು*

 *ವೇದಾಂತದರ್ಶನ-ವ್ಯಾಸ ಮುನಿಗಳು*

ಪ್ರಶ್ನೆ:
ದರ್ಶನಗಳಲ್ಲಿರುವ ವಿಷಯಗಳೇನು ?

ಉತ್ತರ: *ಆತ್ಮಾ, ಪರಮಾತ್ಮಾ, ಪ್ರಕೃತಿ, ಜಗತ್ತಿನ ಉತ್ಪತ್ತಿ, ಮೋಕ್ಷ, ಭೌತಿಕ ಹಾಗೂ ಆಧ್ಯಾತ್ಮಿಕ ಜ್ಞಾನ ಮುಂತಾದವು.*

ಪ್ರಶ್ನೆ:
ಪ್ರಾಮಾಣಿಕ ಉಪನಿಷತ್ತುಗಳೆಷ್ಟು ?

ಉತ್ತರ:
*ಕೇವಲ ಹನ್ನೊಂದು.*

 ಪ್ರಶ್ನೆ:
ಉಪನಿಷತ್ತಿನ ಹೆಸರುಗಳು ?

ಉತ್ತರ:
*ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ ಹಾಗೂ ಶ್ವೇತಾಶ್ವತರ*

ಪ್ರಶ್ನೆ:
ಉಪನಿಷತ್ತುಗಳಲ್ಲಿರುವ ವಿಷಯಗಳ ಆಧಾರ ಯಾವುದು ?

ಉತ್ತರ:
*ವೇದಗಳು*

ಪ್ರಶ್ನೆ:
ವೇದಾಂಗಗಳೆಷ್ಟು ? ಅವು ಯಾವವು ?

ಉತ್ತರ:
*ಆರು*
ಅವು:
*ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ ಹಾಗೂ ಕಲ್ಪ*

ಪ್ರಶ್ನೆ:
ವೇದಾಂಗಗಳ ಪ್ರಯೋಜನವೇನು ?

ಉತ್ತರ:
*ವೇದಾರ್ಥವನ್ನು ತಿಳಿಯಲು.*

🌕ಲೋಕಾಃ ಸಮಸ್ತಾಃ ಸುಖಿನೋ ಭವಂತು.✋

ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗೆ ಅರ್ಥ ಏನು ಅಂತ ತಿಳಿದುಕೊಳ್ಳೋಣ

೧) ಮೊಣಕಾಲು ಮೇಲೆ ನಿಲ್ಲಿಸಿದರೆ
*"ವಿನಯವನ್ನು ರೂಢಿಸಿಕೋ"* ಎಂದರ್ಥ.

೨) *"ಬಾಯಿಯ ಮೇಲೆ ಬೆರಳಿಟ್ಟುಕೋ ಎಂದರೆ ಸ್ವ-ಪ್ರಶಂಸೆ ಮಾಡಿಕೊಳ್ಳಬೇಡ "*  ಎಂದು.

೩)ಕಿವಿ ಹಿಡಿದು ನಿಲ್ಲೆಂದರೆ        *"ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು"* ಅಂತ.

೪) ಬೆಂಚಿನ ಮೇಲೆ ನಿಲ್ಲು ಅಂದರೆ  *"ಎಲ್ಲರಿಗಿಂತ ಓದಿನಲ್ಲಿ ಮುಂದೆ ಇರು"* ಅಂತರ್ಥ.

೫) ಕೈಯೆತ್ತಿ ನಿಲ್ಲು ಅಂದರೆ
*"ನಿನ್ನ ಗುರಿ ಉನ್ನತವಾಗಿ ನಿಶ್ಚಲವಾಗಿರಲಿ"* ಎಂದು.

೬) ಗೋಡೆಗೆ ಮುಖಮಾಡಿ ನಿಲ್ಲು ಎಂದರೆ *"ಆತ್ಮಾವಲೋಕನ ಮಾಡಿಕೋ"* ಅಂತ.

೭) ತರಗತಿಯ (ಕ್ಲಾಸಿಂದ) ಹೊರಗೆ ನಿಲ್ಲಿಸಿದರೆ *"ಪರಿಸರದ ಜ್ಞಾನ ಪಡೆದುಕೋ"*  ಎಂದು.

೮) ಕರಿಹಲಗೆ (ಬ್ಲ್ಯಾಕ್ ಬೋರ್ಡು) ಒರೆಸು ಎಂದರೆ
*"ಯಾವಾಗಲೂ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು"* ಎಂದರ್ಥ.

೯) ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ *"ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು. ಸೋಲೊಪ್ಪಿಕೊಳ್ಳಬೇಡ"*  ಎಂದು.

ಎಷ್ಟು ಚೆನ್ನಾಗಿದೆಯಲ್ವಾ ಶಿಕ್ಷೆಯೆಂಬ ನವರತ್ನಗಳು.
ಗೂಢಾರ್ಥವ ಜೋಡಿಸಿ ಬದುಕ ತಿದ್ದುವ ಗುರುಗಳಿಗೆ ನಮೋನಮಃ 🙏🏻🙏🏻

Saturday, 9 June 2018

ಭಗವದ್ಗೀತೆಯ ಕಿರು ಪರಿಚಯ.. ಪ್ರಶ್ನೋತ್ತರಮಾಲಿಕೆ.. ಪ್ರತಿಯೊಬ್ಬರೂ ಓದಿ.. ಶೇರ್ ಮಾಡಿ..

* ಭಗವದ್ಗೀತೆಯನ್ನು ಯಾರು ಯಾರಿಗೆ
ಬೋಧಿಸಿದರು..?
ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.
* ಯಾವಾಗ ಬೋಧಿಸಿದ..?
ಉತ್ತರ : ಇಂದಿನಿಂದ ಸುಮಾರು ೭ ಸಾವಿರ ವರ್ಷಗಳ
ಹಿಂದೆ.
* ಯಾವ ದಿನ ಬೋಧಿಸಿದ..?
ಉತ್ತರ : ರವಿವಾರ.
* ಯಾವ ತಿಥಿಯಲ್ಲಿ..?
ಉತ್ತರ : ಏಕಾದಶಿಯಂದು.
* ಎಲ್ಲಿ ಬೋಧಿಸಿದ..?
ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.
* ಎಷ್ಟು ಸಮಯ ಬೋಧಿಸಿದ..?
ಉತ್ತರ : ೪೫ ನಿಮಿಷ.
* ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ..?
ಉತ್ತರ : ಕ್ಷತ್ರಿಯನಿಗೆ
ಕರ್ತವ್ಯವಾದದ್ದು ಯುದ್ಧ..
ತನ್ನ ಕರ್ತವ್ಯದಿಂದ ಅರ್ಜುನ
ವಿಮುಖನಾಗಲು ಬಯಸುತ್ತಾನೆ..
ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ..
ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು
ಮಾಡಲು ಹಾಗೂ ಭವಿಷ್ಯದ
ಮಾನವಸಂತತಿಗೆ ಧರ್ಮಜ್ಞಾನವನ್ನು
ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.
* ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ..?
ಉತ್ತರ : ಹದಿನೆಂಟು.
* ಎಷ್ಟು ಶ್ಲೋಕಗಳಿವೆ..?
ಉತ್ತರ : ೭೦೦ ಶ್ಲೋಕಗಳು.
* ಗೀತೆಯಲ್ಲಿರುವ ವಿಷಯಗಳಾವವು..?
ಉತ್ತರ : ಜ್ಞಾನ - ಭಕ್ತಿ - ಕರ್ಮ - ಯೋಗ
ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ..ಈ
ಮಾರ್ಗಗಳಲ್ಲಿ
ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು
ಹೇಳಲಾಗಿದೆ..
* ಅರ್ಜುನನನ್ನು ಬಿಟ್ಟರೆ
ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ..?
ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.
* ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ
ಜ್ಞಾನ ಯಾರಿಗೆ ತಿಳಿದಿತ್ತು...?
ಉತ್ತರ : ಭಗವಾನ್ ಸೂರ್ಯದೇವನಿಗೆ.
* ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ
ಸೇರಿಸಲಾಗಿದೆ..?
ಉತ್ತರ : ಉಪನಿಷತ್ತಿನಲ್ಲಿ.
* ಗೀತೆ ಯಾವ ಗ್ರಂಥದ ಭಾಗವಾಗಿದೆ..?
ಉತ್ತರ : ಮಹಾಭಾರತದ ಭೀಷ್ಮಪರ್ವದ
ಒಂದು ಭಾಗವಾಗಿದೆ.
* ಭಗವದ್ಗೀತೆಯ ಇನ್ನೊಂದು ಹೆಸರು..?
ಉತ್ತರ : ಗೀತೋಪನಿಷತ್.
* ಗೀತೆಯ ಸಾರವೇನು..?
ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ
ಶರಣಾಗತಿಯನ್ನು ಹೊಂದುವುದು..
* ಭಗವದ್ಗೀತೆಯಲ್ಲಿ
ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ..?
ಉತ್ತರ : ಶ್ರೀಕೃಷ್ಣ - ೫೭೪.
ಅರ್ಜುನ - ೮೫
ಧೃತರಾಷ್ಟ್ರ - ೦೧
ಸಂಜಯ - ೪೦
ಶ್ರೀಕೃಷ್ಣಾರ್ಪಣಮಸ್ತು
ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಮನುಷ್ಯನ ಆಯಸ್ಸು ನೂರು ವರ್ಷ... ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.

ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ..

|| ಶ್ರೀಕೃಷ್ಣಾರ್ಪಣಮಸ್ತು ||

|| ನಾಹಂ ಕರ್ತಾ ಹರಿಃ ಕರ್ತಾ |

Friday, 8 June 2018

*"ಜೀವನದ ಜಗದ್ಗುರು ಜನ್ಮ ಕೊಟ್ಟವರು"*

*ತಾಯಿ  :  ಕಾಮಧೇನು*
*ತಂದೆ    :  ಕಲ್ಪವೃಕ್ಷ*

*ತಾಯಿ  :  ಸೃಷ್ಠಿ* 
*ತಂದೆ    :  ದೃಷ್ಟಿ*

*ತಾಯಿ  :  ಪ್ರಾಣ* 
*ತಂದೆ    :   ತ್ರಾಣ*

*ತಾಯಿ  : ವ್ಯಕ್ತಿತ್ವ* 
*ತಂದೆ    : ಅಸಿತ್ತ್ವ*

*ತಾಯಿ  : ಸಂಸ್ಕಾರ*
 *ತಂದೆ   : ಸಂಪ್ರದಾಯ*

*ತಾಯಿ  : ಆದರ್ಶ* 
*ತಂದೆ    :  ಆಶ್ರಯ*

*ತಾಯಿ  : ಚೄೆತನ್ಯ* 
*ತಂದೆ    : ಸಾಮರ್ಥ್ಯ*

*ತಾಯಿ  : ಕನಿಕರ* 
*ತಂದೆ    : ಕಾಳಜಿ*

*ತಾಯಿ  : ಒಲವು* 
*ತಂದೆ    : ಗೆಲುವು*

*ತಾಯಿ  : ದಯೆ* 
*ತಂದೆ    : ಧೄೆರ್ಯ*

*ತಾಯಿ  :  ಮಮತೆ* 
*ತಂದೆ    : ಹಣತೆ*

*ತಾಯಿ  : ಗುಡಿ* 
*ತಂದೆ    : ಗೋಪುರ*

*ತಾಯಿ  : ನಂಬಿಕೆ*
 *ತಂದೆ   : ವಿಶ್ವಾಸ*

*ತಾಯಿ  : ಹೂವು*
 *ತಂದೆ   : ಪರಿಮಳ*

*ತಾಯಿ  : ಅಡಿಪಾಯ*
 *ತಂದೆ   :   ಮೇಲ್ಚಾವಣಿ*

*ತಾಯಿ  : ಸ್ಫೂರ್ತಿ*
 *ತಂದೆ   : ಭರವಸೆ*

*ತಾಯಿ  : ಸಾಕ್ಷರತೆ*
 *ತಂದೆ   : ಸಾಧನೆ*

*ತಾಯಿ  : ಜನ್ಮ* 
*ತಂದೆ    : ಜೀವನ*

*ತಾಯಿ  : ದೀಪ* 
*ತಂದೆ    : ದ್ವೀಪ*

*ತಾಯಿ  :  ರಕ್ಷಕಿ* 
*ತಂದೆ    : ಶಿಕ್ಷಕ*

*ತಾಯಿ  : ಆರೄೆಕೆ* 
*ತಂದೆ    : ಆತ್ಮೀಯ*

*ತಾಯಿ  : ಕನಸು* 
*ತಂದೆ    : ನನಸು*


*"ನನ್ನ ತಾಯಿ ತಂದೆಗೆ ನನ್ನ ನಮನಗಳು"*

*🔘 ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡತನವಿರುತ್ತದೆಯೋ*
                *ಆ ವ್ಯಕ್ತಿ*
*ತನಗರಿವಿಲ್ಲದಂತೆಯೇ ಬಹು ಎತ್ತರಕ್ಕೆ ಬೆಳೆಯುತ್ತಾನೆ.*

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...