Sunday, 17 March 2019

Shloka

ಮಾನವರೋ ದಾನವರೋ ಭೂಮಾತೆಯ ತಣಿಸೆ ।
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ॥
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ  ।
ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ ॥ ೧೨ ॥

ವಾಚ್ಯಾರ್ಥ : ಶೋಣಿತವನೆರೆಯುವರು= ಶೋಣಿತವನು+ ಎರೆಯುವರು/ಬಾಷ್ಪಸಲುವುದಿರೆ= ಭಾಷ್ಪ+ಸಲುವುದು+ಇರೆಶೋಣಿತ= ರಕ್ತ, ಭಾಷ್ಪ = ಕಣ್ಣೀರು, ಎರೆಯುವುದು= ಸುರಿಸುವುದು, ಸಲುವುದಿರೆ= ಸುರಿಸಬೇಕಾದರೆ. ಸೌನಿಕ = ಕಟುಕ, /ಕಟ್ಟೆ= ಜಗುಲಿ.

ಭಾವಾರ್ಥ  : ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೇರು ಸುರಿಸುವಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ವ್ಯಾಖ್ಯಾನ : ಮತ್ತದೇ ಯುದ್ಧದ ಸನ್ನಿವೇಶವನ್ನು ಈ ಕಗ್ಗದಲ್ಲೂ ಉಲ್ಲೇಖಿಸುತ್ತಾರೆ, ಶ್ರೀ ಗುಂಡಪ್ಪನವರು. ಪಾಪ ಅವರ ಮನ ಎಷ್ಟು ನೊಂದಿತ್ತೋ ಏನೋ? ಇಲ್ಲದಿದ್ದರೆ ಅಂದಿನ ವರ್ತಮಾನ ಸ್ಥಿತಿಗೆ ಇಷ್ಟೊಂದು ಪ್ರತಿಕ್ರಿಯೆ ಬರುತಿತ್ತೆ.ಇರಲಿ. ಮಾನವರಾದ ನಾವು ಮಾನವರಂತೆ ಇರದೇ ದಾನವರಂತೆ ಏಕೆ ಒಬ್ಬರಿಗೆ ಮತ್ತೊಬ್ಬರ ರಕ್ತದಾಹ. ಬಾಳುವವನು ಮಾನವ ಎನ್ನುತ್ತದೆ ಪರಿಭಾಷೆ. ಬಾಳದೆ ಯುದ್ಧಮಾಡಿ ನಾಶಕ್ಕೆ ಕಾರಣರಾದವರನ್ನು ಮಾನ್ಯ ಗುಂಡಪ್ಪನವರು ದಾನವರೆಂದು ಸೂಕ್ತವಾಗೆ ಹೇಳಿದ್ದರೆ.ಅಹಂಕಾರದಿಂದ, ಆಸೆಯಿಂದ, ಮದ, ಮತ್ಸರಗಳ ಕಾರಣಗಳಿಂದ ಎಲ್ಲ ಯುದ್ಧಗಳೂ ನಡೆಯುತ್ತವೆ. ನಮ್ಮ ಪುರಾಣಗಳಲ್ಲೂ ಇಂತಹ ಯುದ್ಧಗಳನ್ನು ನೋಡಬಹುದು. ದಾನವರಾಗೆ ಹುಟ್ಟಿದ ಹಿರಣ್ಯಾಕ್ಷ-ಹಿರನ್ಯಕಶಿಪುಗಳೂ ಸಹ ತಮಗೆ ಸಿಕ್ಕ ವಾರಗಳ ಬಲದಿಂದ, ಮದೋನ್ಮತ್ತರಾಗಿ ಭೂಲೋಕವೇನು ದೇವಲೋಕಕ್ಕೂ ಲಗ್ಗೇ ಇಟ್ಟ ಉಲ್ಲೇಖವುಂಟು .ಮಹಾಭಾರತದ ಯುದ್ಧದಲ್ಲೂ ಇಡೀ ಆರ್ಯವರ್ತವೇ ಇಬ್ಬಾಗವಾಗಿ ಕೆಲವರು ಕೌರವರ ಮತ್ತೆ ಕೆಲವರು ಪಾಂಡವರ ಪಕ್ಷ ವಹಿಸಿ ಯುದ್ಧಮಾಡಿ ೧೮ ಅಕ್ಷೋಹಿಣಿ ( ೧.೫೬ ಸಾವಿರ) ಜನರನ್ನು ಬಳಿ ತೆಗೆದುಕೊಂಡಿತಂತೆ. ಅದು ಪುರಾಣ. ಗ್ರೀಕ್ ಪುರಾಣದಲ್ಲಿ ಬರುವ ಟ್ರೋಜನ್ ಯುದ್ಧವೂ ಸಹ ಒಂದು ” ಹೆಲನ್” ಎನ್ನುವ ಹೆಣ್ಣಿಗಾಗಿ ನಡೆದು ಸುಮಾರು ವರ್ಷಗಳಕಾಲ ನಡೆದು ಅಪಾರ ಸಾವು ನೋವುಗಳಿಗೆ ಕಾರಣವಾಯಿತಂತೆ.ಇನ್ನು ನಮ್ಮ ದೇಶದಲ್ಲಿ ಕ್ರಿಸ್ತ ಪೂರ್ವ ೩೨೩ ರ ಸುಮಾರಿಗೆ ಚಾಣಕ್ಯ ಬರುವವರೆಗೆ, ಸಣ್ಣ ಸಣ್ಣ ರಾಜರು ಮತ್ತು ಕೆಲವು ದೊಡ್ಡ ರಾಜರುಗಳು ಸದಾ ಯುದ್ಧನಿರತರು. ಮಾತ್ರ ಅವರ ದಾನವೀ ಅಹಂಕಾರವನ್ನು ತಣಿಸಲಿಕ್ಕಾಗಿಯೇ ನಡೆದ ಯುದ್ದ್ಧಗಳು. ಕ್ಷುಲ್ಲಕ ಕಾರಣಕ್ಕಾಗಿಯೇ ನಡೆವ ಯುದ್ಧಗಳಲ್ಲೆಲ್ಲ ನಡೆಯುವುದು ಸಾಮಾನ್ಯರ ಮಾರಣ ಹೋಮ. ಅದು ದಾನವೀ ಪ್ರವೃತ್ತಿ. ನಮ್ಮ ದೇಶವನ್ನೇ ತೆಗೆದುಕೊಂಡರೆ, ಮೊದಲು ಯವನರು, ನಂತರ ಮೊಘಲರು ನಂತರ ಬ್ರಿಟಿಷರು. ಹೀಗೆ ಆಕ್ರಮಣಕಾರರ ದಂಡೇ ನಮ್ಮ ದೇಶವನ್ನು ಲೂಟಿಮಾಡಲು ಹಿಂದೂ ಹಿಂಡಾಗಿ ಬಂದವರೇ ಹೆಚ್ಚು. ಇವರು ಸಾಲದೆಂಬಂತೆ,ಬಂದವರು ಡಚ್ಚರು, ಪೋರ್ಚ್ಯುಗೀಸರು , ಎಲ್ಲರೂ ನಮ್ಮ ನಾಡಿನಮೇಲೆ ದಾಳಿಮಾಡಿದರು. ವಾಚಕರೆ ನೋಡಿ ಭಾರತವು ಯಾವುದೇ ಅನ್ಯ ದೇಶದಮೇಲೆ ದಾಳಿ ಮಾಡಿದ್ದನ್ನು ಯಾವುದಾದರೂ ಪುಸ್ತಕದಲ್ಲಿ ಕಂಡಿದ್ದೀರಾ? ಅಖಂಡವಾಗಿದ್ದ ಭಾರತ ೨೦೦ ವರ್ಷಗಳಲ್ಲಿ ತುಂಡು ತುಂಡಾಗಿ ಹರಿದು ಹಂಚಿಹೋಗಿದೆ.ಹಾಗಾಗಿ ವಾಚಕರೆ, ಅಹಂಕಾರ ದುರಾಸೆ ಈ ಎಲ್ಲ ಯುದ್ಧಗಳಿಗೂ ಕಾರಣವಾಗಿತ್ತು. ಈ ಜಗತ್ತಿನಲ್ಲಿ ಮಾನವರು ಸುಸಂಸ್ಕೃತ ಪ್ರಾಣಿಗಳು. ಅನ್ಯ ಪ್ರಾಣಿಗಳಿಗಿಂತ ಭಿನ್ನ. ಮಾನವತೆಯಿಂದ ತನ್ನ ಜೀವನವನ್ನು ಮತ್ತು ಅನ್ಯರ ಜೀವನವನ್ನೂ ಸಹ ಸುಂದರವಾಗಿ ರೂಪಿಸಿಕೊಳ್ಳಬಲ್ಲ ಶಕ್ತಿ ಅವನಿಗೆ ಇದೆ. ಆದರೆ ಮಾತ್ರ ಅಹಂಕಾರದಿಂದ ತನ್ನ ಬುಡಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು ಅನ್ಯರನೂ ಸುಡುವ ಈ ದಾನವೀ ಅಥವಾ ಪೈಶಾಚಿಕ ಪ್ರವೃತ್ತಿ ಏಕೆ?ದರಣಿ ಸಸ್ಯಶ್ಯಾಮಲವಾಗಿರಬೇಕಾದರೆ, ನೀರು ಮತ್ತು ಶ್ರಮದ ಅವಶ್ಯಕತೆ ಉಂಟು ಅದನ್ನು ಬಿಟ್ಟು ದ್ವೇಷದ ಬೀಜ ಮತ್ತು ರಕ್ತದ ಸಿಂಚನವಾದರೆ, ಬೆಳೆ ಬೆಳೆದೀತೆ? ಹೊಟ್ಟೆ ತುಂಬೀತೆ? ಹಗೆಯ ಹೊಗೆಯಿಂದ ಉಸಿರು ಕಟ್ಟುತ್ತದೆಯೇ ಹೊರತು ಜೀವ ಪೋಷಣೆಯಾಗದು. ಜೀವನದ ನಡೆಯದು. ಈ ಪ್ರಪಂಚದ ಗತಿಯೇನು? ಅದು ಹಾಗಾದರೆ ಇಡೀ ಪ್ರಪಂಚವೇ ಕಟುಕನ ಜಗಲಿಯಂತಾಗುತ್ತದೆ ಅಲ್ಲವೆ? ಅಂಥಹ ಭಾವಗಳನ್ನೇ ಮಾನ್ಯ ಶ್ರೀ ಗುಂಡಪ್ಪನವರು ವ್ಯಕ್ತ ಪಡಿಸುತ್ತಾರೆ ಈ ಕಗ್ಗದಲ್ಲಿ.ಸಹೃದಯರೇ, ಒಂದು ಸಣ್ಣ ಬೀದಿ ಜಗಳ ದಿಂದ ಹಿಡಿದು ಒಂದು ಮಹಾ ಪ್ರಪಂಚ ಯುದ್ಧಕ್ಕೂ ಮಾನವತೆಯ ಕೊರತೆ ಮತ್ತು ಅಹಂಕಾರಭರಿತ ದಾನವತೆಯೇ ಕಾರಣ. ದ್ವೇಶವೇ ಕಾರಣ ಇದರಿಂದ ನಾಶವೇ ಹೊರತು ಬಾಳು ಇಲ್ಲ ಎಂದು ನಾವೂ ಸಹ ಅರಿತು ನಮ್ಮ ನಮ್ಮಲ್ಲಿ ಇರುವ ಅಂತಹ ವಿನಾಶಕಾರಿ ಭಾವಗಳನ್ನು ತೊಡೆದು, ಈ ಇಡೀ ಜಗತ್ತನ್ನು ಸುಂದರ ತಾಣವನ್ನಾಗಿ ಪರಿವರ್ತಿಸಲು ಪ್ರಯತ್ನಿಸೋಣ.

💐🌹💐🌹💐🌹💐🌹💐

SHLOKA

ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇSನ್ಯದೇವತಾಃ ।
ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ॥೨೦॥

Translation

ಕಾಮೈಃ ತೈಃ ತೈಃ ಹೃತ ಜ್ಞಾನಾಃ ಪ್ರಪದ್ಯಂತೇ ಅನ್ಯ ದೇವತಾಃ ।
ತಮ್ ತಮ್  ನಿಯಮಮ್ ಆಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ-ಯಾವ ಯಾವುದೋ ಬಯಕೆಗಳಿಂದ ಅರಿವು ಅಳಿದವರು ತಮ್ಮ ಸ್ವಭಾವ –ಸಂಸ್ಕಾರಗಳಿಗೆ ತಕ್ಕಂತೆ ಆಯಾ ಕಟ್ಟಲೆಗಳಿಗೆ ಕಟ್ಟುಬಿದ್ದು ಬೇರೆ ಬೇರೆ ದೇವತೆಗಳಿಗೆ ಮೊರೆಹೋಗುತ್ತಾರೆ.

ಕೃಷ್ಣ ಹಿಂದಿನ ಅಧ್ಯಾಯಗಳಲ್ಲಿ ಹೇಳಿರುವ ವಿಚಾರವನ್ನು ಮತ್ತೆ ಒತ್ತು ಕೊಟ್ಟು ಇಲ್ಲಿ ವಿವರಿಸುತ್ತಾನೆ. ಮನುಷ್ಯ ಅಧ್ಯಾತ್ಮ ಮಾರ್ಗದಿಂದ ದೂರ ಸರಿಯಲು ಮೂಲ ಕಾರಣ ಅವನ ಹುಚ್ಚು ಬಯಕೆಗಳು. ಇದು ನಮ್ಮ ಅರಿವಿಗೆ ದೊಡ್ಡ ಅಡ್ಡಗೋಡೆ. ಬಯಕೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ, ಮನುಷ್ಯ ಅಧ್ಯಾತ್ಮದ ಬೆನ್ನುಹತ್ತುವ ಬದಲು ಬಯಕೆಗಳ ಬೆನ್ನು ಹತ್ತುತ್ತಾನೆ. ಬಯಕೆಗಳ ಈಡೇರಿಕೆಗೋಸ್ಕರ ಮಾಡಬಾರದ್ದನ್ನು ಮಾಡುತ್ತಾ ಹೋಗುತ್ತಾನೆ ಮತ್ತು  ಅಧಃಪಾತವನ್ನು ಹೊಂದುತ್ತಾನೆ.
ಬಯಕೆಗಳ ಬೆನ್ನುಹತ್ತಿದಾಗ ಬಯಕೆ ಅರಿವನ್ನು ನಿಯಂತ್ರಿಸಲಾರಂಭಿಸುತ್ತದೆ. ಈ ಸಮಯದಲ್ಲಿ ಯಾರಾದರೂ ‘ನಿನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ದೇವಾಲಯಕ್ಕೆ ಹೋಗು’ ಎಂದರೆ ಆತ ಅಲ್ಲಿಗೆ ಹೋಗುತ್ತಾನೆ . ಹೀಗೆ ಇಷ್ಟಾರ್ಥ ಸಿದ್ಧಿ ಎಲ್ಲಿ ಸಾಧ್ಯ ಎಂದು ಸುದ್ದಿ ಬಂತೋ ಅಲ್ಲಿಗೆ ಭೇಟಿ ಕೊಡಲಾರಂಭಿಸುತ್ತಾನೆ. ಇದರಿಂದಾಗಿ  ಆತ ಮೂಲ ಅಧ್ಯಾತ್ಮ ತತ್ವವನ್ನು ಬಿಟ್ಟು, ಏಕಭಕ್ತಿಯಿಂದ ದೂರ ಸರಿದು, ಎಲ್ಲಿ ತನ್ನ ಅಪೇಕ್ಷೆ ಈಡೇರುತ್ತದೋ ಅಲ್ಲಿ, ಆಯಾ ದೇವತೆಗಳನ್ನು ತನ್ನ ಭೌತಿಕ ಬಯಕೆಗಳನ್ನು ಈಡೇರಿಸುವಂತೆ ಬೇಡಿ ಪೂಜಿಸಲಾರಂಭಿಸುತ್ತಾನೆ. ಅದಕ್ಕಾಗಿ ಯಾವುದ್ಯಾವುದೋ ವೃತಾಚರಣೆ ಮಾಡಲಾರಂಭಿಸುತ್ತಾನೆ. ಇದರಿಂದಾಗಿ ಆತ ನಿಜವಾದ ಭಗವಂತನ ಉಪಾಸನೆಯ ಮಾರ್ಗದಿಂದ ದೂರ ಸರಿಯುತ್ತಾನೆ. ಏಕಭಕ್ತಿ ಉಪಾಸನೆಯಿಂದ  ಈ  ರೀತಿಯ ಅಲ್ಪ ಬಯಕೆ ಎಂದೂ ಈಡೇರುವುದಿಲ್ಲ. ಏಕೆಂದರೆ  ‘ಯದನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ’ ಭಕ್ತರ ಸಂಪತ್ತನ್ನು ಇಲ್ಲದಂತೆ ಮಾಡಿ, ಪರೀಕ್ಷಿಸಿ, ನಂತರ ಅವರನ್ನು ಉದ್ಧರಿಸುವುದೇ ಭಗವಂತನ  ಸಂಕಲ್ಪ. ನಮಗೆ ಏನು ಬೇಕು ಎನ್ನುವುದು ನಮಗಿಂತ ಚನ್ನಾಗಿ ಭಗವಂತನಿಗೆ ಗೊತ್ತು. ಆತನ ಅನುಗ್ರಹ ಮಹಾ ಪ್ರಸಾದ. ಈ ಅರಿವು ಬಯಕೆಗಳ ಬೆನ್ನು ಹತ್ತಿದವರಿಗೆ ಇರುವುದಿಲ್ಲ ಮತ್ತು ಇದರಿಂದ ಅವರು ಭಗವಂತನ ಅನುಗ್ರಹದಿಂದ ವಂಚಿತರಾಗುತ್ತಾರೆ.
ಏಕೆ ಹೀಗೆ? ಏಕೆ ಎಲ್ಲರೂ ಒಂದೇ ರೀತಿಯಾಗಿ ಭಗವಂತನನ್ನು ಪೂಜಿಸುವುದಿಲ್ಲ? ಇದಕ್ಕೆ ಕೃಷ್ಣ ಹೇಳುತ್ತಾನೆ “ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ”.   “ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಪ್ರಕೃತಿ ಇದೆ” ಎಂದು.  [ಇಲ್ಲಿ ಹೇಳಿರುವ ‘ಪ್ರಕೃತಿ’ ಅಂದರೆ ಒಂದು ‘ಜೀವ ಸ್ವಭಾವ’ ಹಾಗು ಇನ್ನೊಂದು ‘ಪರಿಸರ ಮತ್ತು ಹುಟ್ಟಿಬಂದ ಮನೆತನದ ಸಂಸ್ಕಾರ(genes and environmental force)’ ] ಮನುಷ್ಯನ ಈ ಜೀವಸ್ವಭಾವವನ್ನು ಎಂದೂ ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರ. ಈ ಕಾರಣದಿಂದ ಏಕರೂಪ ಸ್ವಭಾವ ಈ ಜಗತ್ತಿನಲ್ಲಿಲ್ಲ. ಈ ಭೂಮಿಯ ಮೇಲೆ  ಎಷ್ಟೋ  ಭಾರಿ ಭಗವಂತ ಮತ್ತು ಅನೇಕ ಮಹಾತ್ಮರು ಅವತರಿಸಿ ಬಂದು ಸತ್ಯವನ್ನು ಭೋಧನೆ ಮಾಡಿದರೂ ಕೂಡಾ, ಏಕ ಧರ್ಮ ಸ್ಥಾಪನೆ ಆಗಲಿಲ್ಲ. ಕಾರಣ ಏನೆಂದರೆ ಸ್ವತಃ ಭಗವಂತನೇ ಬಂದು ಹೇಳಿದರೂ ಕೂಡಾ-ಸತ್ಯವನ್ನು ತಿಳಿಯಬಲ್ಲ ಜೀವಸ್ವಭಾವವುಳ್ಳ ಜೀವ ಮಾತ್ರ ಆ ಸತ್ಯವನ್ನು ಗ್ರಹಿಸಿ ಒಪ್ಪುತ್ತದೆ. ಉಳಿದ ಜೀವಗಳು ಈ ಸತ್ಯವನ್ನು ಗ್ರಹಿಸಲಾರವು. ಇದು ತೀರಾ ಸಹಜ. ಆದ್ದರಿಂದ ಕೃಷ್ಣ ಹೇಳುತ್ತಾನೆ “ಸತ್ಯವನ್ನು ಒಪ್ಪುವುದಕ್ಕೂ ಕೂಡಾ ಜೀವಕ್ಕೆ ಯೋಗ್ಯತೆ ಬೇಕು” ಎಂದು. ಹೀಗೆ  ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಅವರವರಿಗೆ ಇಷ್ಟವಾಗುವ ದೇವತಾ ಉಪಾಸನೆ ಪ್ರಪಂಚದಲ್ಲಿ ನಡೆಯುತ್ತದೆ. ಈ ಕಾರಣದಿಂದ ಪ್ರಪಂಚದಲ್ಲಿ ಎಲ್ಲರೂ ನಿಜವಾದ ಭಗವದ್ ಭಕ್ತರಾಗಲು ಸಾಧ್ಯವಿಲ್ಲ, ಅದು ಕೇವಲ ಸಾತ್ವಿಕ ಚೇತನಕ್ಕೆ ಮಾತ್ರ ಸಾಧ್ಯ.

💐🌹💐🌹💐🌹💐🌹💐

Adi Shankaracharya

One night Sri Adi Shankaracharya,
the great Advaita master, was desperately searching for something on the street outside his small hut. When his pupil returned from his errand, he saw this and curiously asked the Master, “Aacharya, what are you looking for here on the street at this hour?”

Shankaracharya  replied, “I lost my needle, I am looking for it.”

The pupil joined him in the search, but after searching for a while, he asked, “Can you try and recollect where you might have dropped it?”

Shankaracharya  said, “Of course, I remember. I dropped it near the bed in the hut.”

The pupil, utterly astonished at the strange answer, said,  “Aacharya, you say you lost it inside the house, then why are we looking for it outside?”

Shankaracharya  innocently replied, “There is no oil left in the lamp, so it is pitch dark inside the house. Hence I thought of searching for it outside, since there is enough street light here.”

While holding back his laugh, the pupil said, “If you lost your needle inside the house, how could you even expect to find it outside?”

Shankaracharya simply smiled back at the pupil and the pupil got the message behind the acharya's puzzling act.

Isn't that what we do? We run to far away temples and walk up mountains to search for what we have lost inside ourselves. We are all seeking outside what we have lost inside us. Why? Just because it is pitch dark Inside.
Silly, aren’t we?!

Light the lamp inside you and find your lost treasure right therein.

Saturday, 16 March 2019

ನಿಮ್ಮ ದೇಹದ ತೂಕ ಎಷ್ಟು?

​ನಿಮ್ಮ ದೇಹದ ತೂಕ ಎಷ್ಟು? ನೀವೆಷ್ಟು ನೀರು ಕುಡಿಯಬೇಕು?​
- 45ಕೆಜಿ ತೂಕದವರು-1.9 ಲೀಟರ್ ನೀರು ಕುಡಿಯಲೇ ಬೇಕು.
- 50 ಕೆಜಿ ತೂಕದವರು-2.1 ಲೀಟರ್ ನೀರು ಕುಡಿಯಲೇ ಬೇಕು.
- 55ಕೆಜಿ ತೂಕದವರು-2.3 ಲೀಟರ್ ನೀರು ಕುಡಿಯಲೇ ಬೇಕು.
- 60ಕೆಜಿ ತೂಕದವರು-2.5 ಲೀಟರ್ ನೀರು ಕುಡಿಯಲೇ ಬೇಕು.
- 65ಕೆಜಿ ತೂಕದವರು-2.7 ಲೀಟರ್ ನೀರು ಕುಡಿಯಲೇ ಬೇಕು.
- 70ಕೆಜಿ ತೂಕದವರು-2.9 ಲೀಟರ್ ನೀರು ಕುಡಿಯಲೇ ಬೇಕು.
75ಕೆಜಿ ತೂಕದವರು-3.2 ಲೀಟರ್ ನೀರು ಕುಡಿಯಲೇ ಬೇಕು.
80ಕೆಜಿ ತೂಕದವರು-3.5 ಲೀಟರ್ ನೀರು ಕುಡಿಯಲೇ ಬೇಕು.
85ಕೆಜಿ ತೂಕದವರು-3.7 ಲೀಟರ್ ನೀರು ಕುಡಿಯಲೇ ಬೇಕು.
90ಕೆಜಿ ತೂಕದವರು-3.9 ಲೀಟರ್ ನೀರು ಕುಡಿಯಲೇ ಬೇಕು.
95ಕೆಜಿ ತೂಕದವರು-4.1 ಲೀಟರ್ ನೀರು ಕುಡಿಯಲೇ ಬೇಕು.
100ಕೆಜಿ ತೂಕದವರು-4.3 ಲೀಟರ್ ನೀರು ಕುಡಿಯಲೇ ಬೇಕು.
 ​"ನಿಮಗಿದು ಗೊತ್ತೇ??? "​

🅱➕ 💐

👉ನಿಂತುಕೊಂಡು ನೀರು ಕುಡಿಯುವವರ ಕೀಲು ನೋವನ್ನು ಪ್ರಪಂಚದ ಯಾವುದೇ ವೈದ್ಯರಿಂದ ಸರಿಪಡಿಸಲಾಗುವುದಿಲ್ಲ.

🅱 ➕ 💐

👉ವೇಗವಾಗಿ ತಿರುಗುವ fan ಅಥವಾ A.C ಯ ಅಡಿಯಲ್ಲಿ ಮಲಗುವವರಿಗೆ ಸ್ಥೂಲಕಾಯ ತಪ್ಪಿದ್ದಲ್ಲ.

🅱 ➕ 💐

👉 *70% ಶರೀರದ ನೋವನ್ನು ಯಾವುದೇ Pain Killer ಗಿಂತಲೂ ವೇಗವಾಗಿ ಕಡಿಮೆ ಮಾಡುವ ಶಕ್ತಿ ಒಂದು ಗ್ಲಾಸ್ ಬಿಸಿ ನೀರಿಗಿದೆ.

🅱 ➕ 💐

👉ಕುಕ್ಕರ್ನಲ್ಲಿ ಬೇಳೆ ಕರಗುತ್ತದೆ, ಬೇಯುವುದಿಲ್ಲ. ಇದರಿಂದ ಆ್ಯಸಿಡಿಟಿ ಉಂಟಾಗುತ್ತದೆ.

🅱 ➕ 💐

👉ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

🅱 ➕ 💐

👉ಷರಬತ್ತು ಹಾಗೂ ಎಳನೀರು ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ಅಮೃತವಿದ್ದಂತೆ.

🅱 ➕ 💐

👉ಲಕ್ವ ಹೊಡೆದ ತಕ್ಷಣ ರೋಗಿಯ ಮೂಗಿನಲ್ಲಿ ದೇಸೀ ಹಸುವಿನ ತುಪ್ಪ ಹಾಕುವುದರಿಂದ ಕೇವಲ 15 ನಿಮಿಷದಲ್ಲಿ ಲಕ್ವ ಹತೋಟಿಗೆ ಬರುತ್ತದೆ.

🅱➕ 💐

👉ದೇಸೀ ಹಸುವಿನ ಮೇಲೆ ಕೇವಲ ಕೈ ಆಡಿಸುವುದರಿಂದ BP ಹತ್ತು ದಿನಗಳಲ್ಲಿ ಸಹಜ ಸ್ಥಿತಿಗೆ ಮರಳುತ್ತದೆ.

🅱➕ 💐

​ಒಳ್ಳೆಯ ವಿಷಯ... ಆದಷ್ಟು ಶೇರ್ ಮಾಡಿ...​
🙏 🅱 ➕ 💐

Friday, 1 March 2019

*ಗೋವಿನ ೩೨ ಅಂಗಗಳಲ್ಲಿ ವಾಸಿಸುವ ದೇವತೆಗಳು..*

*೧. ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ..*

*೨. ಹಣೆಯ ತುದಿಯಲ್ಲಿ ಪಾರ್ವತಿಯ ವಾಸ..*

*೩. ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ..*

*೪. ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ..*

*೫. ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ..*

*೬. ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ..*

*೭. ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ..*

*೮. ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ..*

*೯. ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ..*

*೧೦. ನಾಲಗೆಯಲ್ಲಿ ವರುಣನ ವಾಸ..*

*೧೧. ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ..*

*೧೨. ತುಟಿಗಳಲ್ಲಿ ಸಂಧ್ಯಾದೇವತೆ ವಾಸ..*

*೧೩. ಕುತ್ತಿಗೆಯಲ್ಲಿ ಇಂದ್ರನ ವಾಸ..*

*೧೪. ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ..*

*೧೫. ತೊಡೆಯಲ್ಲಿ ಧರ್ಮ ದೇವತೆಯ ವಾಸ..*

*೧೬. ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ..*

*೧೭. ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ..*

*೧೮. ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ..*

*೧೯. ಬೆನ್ನಿನಲ್ಲಿ ರುದ್ರರ ವಾಸ..*

*೨೦. ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ..*

*೨೧. ಬಾಲದಲ್ಲಿ ಸೋಮದೇವತೆಯ ವಾಸ..*

*೨೨. ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ..*

*೨೩. ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ..*

*೨೪. ಗೋಮೂತ್ರದಲ್ಲಿ ಗಂಗೆಯ ವಾಸ..*

*೨೫. ಗೋಮಯದಲ್ಲಿ ಯಮುನೆಯ ವಾಸ..*

*೨೬. ಹಾಲಿನಲ್ಲಿ ಸರಸ್ವತಿಯ ವಾಸ..*

*೨೭. ಮೊಸರಿನಲ್ಲಿ ನರ್ಮದೆಯ ವಾಸ..*

*೨೮. ತುಪ್ಪದಲ್ಲಿ ಅಗ್ನಿಯ ವಾಸ..*

*೨೯. ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ..*

*೩೦. ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ..*

*೩೧. ಉದರದಲ್ಲಿ ಪೃಥ್ವೀ ದೇವತೆಗಳ ವಾಸ..*

*೩೨. ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ..*

*ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ  ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...