Tuesday, 13 December 2016

Daddy is my hero...

🙏🙏 ಅಪ್ಪ ಅಂದ್ರೆ ಆಕಾಶ🙏🙏


ನನಗೆ 6 ವರ್ಷವಿದ್ದಾಗ....,

ಅರೆ,

ಅಪ್ಪನಿಗೆ ಎಷ್ಟೋಂದು ವಿಷಯ ಗೊತ್ತಲ್ವಾ !

ಎಂದು ಆಗ ಅನಿಸುತ್ತಿತ್ತು.

 10 ನೇ ವರ್ಷಕ್ಕೆ ಕಾಲಿಟ್ಟಾಗ
ಅಪ್ಪ ಒಂಥರಾ ಸಿಡುಕನಂತೆ ಕಂಡ

 12 ನೇ ವಯಸ್ಸಿನಲ್ಲಿ ಹಿಂತಿರುಗಿ ನೋಡಿದಾಗ
ಬಾಲ್ಯದ ಅಪ್ಪ ಕಳೆದು ಹೋದ ಅನ್ನಿಸುತ್ತಿತ್ತು

 16 ನೇ ವಯಸ್ಸಿಗೆ ಬಂದಾಗಂತೂ
ಉಫ್ ! ಅಪ್ಪನನ್ನು ಮೆಚ್ಚಿಸಲು ಆಗಲೇ ಇಲ್ಲ

 19 ನೇ ವಯಸ್ಸಿನಲ್ಲಿ
ಅಪ್ಪನಿಗೂ ನನಗೂ ಸಣ್ಣ ಜಗಳವಾಯ್ತು

 21 ಕ್ಕೆ ಬಂದೆನಾ
ಅಪ್ಪ ವಿಪರೀತ ಬಿಗಿಯಾದವನಂತೆ,
ತೀರಾ ಒರಟನಂತೆ ಕಂಡ.

 22 ನೇ ವಯಸ್ಸಿನಲ್ಲಿ
ಅಂದುಕೊಂಡೆ, ಅಪ್ಪನಿಗೆ ಗೊತ್ತಿರುವಷ್ಟೇ
ನನಗೂ ಗೊತ್ತಿದೆ. ಅವನೇನು ಮಹಾ ?

25 ನೇ ವಯಸ್ಸಿಗೆ, "ನಾನು ಸಾಕಷ್ಟು ತಿಳಿದುಕೊಂಡವನು ; ಅಪ್ಪ ಮಂಕುಬೂದಿ, ಅವನಿಗೇನು ಗೊತ್ತು ?" ಅಂದುಕೊಂಡೆ.

 30 ರಲ್ಲಿದ್ದಾಗ
ಮದುವೆಯಾದೆ, ಆ ಸಂದರ್ಭದಲ್ಲಿ ಎಷ್ಟೋ ವಿಷಯಗಳಲ್ಲಿ ಅಪ್ಪನಿಗೂ ನನಗೂ ಹೊಂದಾಣಿಕೆಯೇ ಇರಲಿಲ್ಲ. ಈ ಮುದುಕರಿಗೆ Common Sense ಅನ್ನೋದೇ ಇರೋದಿಲ್ಲ ಎನ್ನಿಸುತ್ತಿತ್ತು.

 35 ನೇ ವಯಸ್ಸಿನಲ್ಲಿ
ನನ್ನ ಮಗ/ಮಗಳ ರಂಪ ಕಂಡು
ತಲೆ ಚಿಟ್ಟು ಹಿಡಿಯಿತು.

39 ರಲ್ಲಿದ್ದಾಗ
ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟೆ,
ಅಪ್ಪ ನೆನಪಾದ.

 42 ನೇ ವಯಸ್ಸಿನಲ್ಲಿ ಅನಿಸಿದ್ದು,
ಅಪ್ಪನಂತೆ ಬಿಗಿಯಾಗದೆ ಹೋದ್ರೆ ಮಕ್ಕಳು ಬಗ್ಗಲ್ಲ.

 45 ರ ವಯಸ್ಸಲ್ಲಿ
ನನ್ನನ್ನು ಸಾಕಲು ಅಪ್ಪನಿಗೆ ಎಷ್ಟೋಂದು ಕಷ್ಟ ಆಯ್ತೋ ಅಂದುಕೊಂಡೆ.

 50 ರಲ್ಲಿದ್ದಾಗ
ಅನ್ನಿಸಿತು : ಇಷ್ಟು ದೊಡ್ಡ ಸಂಬಳ ಇಟ್ಟುಕೊಂಡು 2 ಮಕ್ಕಳನ್ನ ಸಾಕೋದೆ ಕಷ್ಟ, ಆಗ ಅತೀ ಕಡಿಮೆ ಸಂಬಳದಲ್ಲಿ ಅಪ್ಪ 4 ಮಕ್ಕಳನ್ನು ಹೇಗೆ ಸಾಕಿದ ?

 58 ನೇ ವಯಸ್ಸಿನಲ್ಲಿ
ಮಕ್ಕಳು ನನ್ನನ್ನೇ ಹೀನಾಯವಾಗಿ ನಿಂದಿಸಿದರು. ಅಪ್ಪನ ನೆನೆದು ಅಳು ಬರುತ್ತಿತ್ತು

 ಕಡೆಗೂ ಹಳೆಯದೆಲ್ಲಾ ನೆನಪಾಗಿ, ಗೋಡೆಯ ಮೇಲಿನ ಚಿತ್ರವಾಗಿದ್ದ ಅಪ್ಪನ ಫೋಟೋ ಮುಂದೆ ನಿಂತು,  ಅಪ್ಪಾ U R ಗ್ರೇಟ್
ಅಂದಾಗ, ನನಗೆ 60 ವರ್ಷ ತುಂಬಿತ್ತು.

 ಅಪ್ಪನ ಮಹತ್ವ ತಿಳಿಯಲು 54 ವರ್ಷಗಳೇ ಬೇಕಾಯ್ತು
🌹Share n give Respect ur Father🌹

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...