ಮನೆಯೊಂದರ ಹಜಾರದಲ್ಲಿ ತಾಯ್ತಂದೆ ಮಲಗಿದಾರೆ. ಒಂದು ಕೋಣೆಯಲ್ಲಿ ಮಗ, ಸೊಸೆ ಮೊಮ್ಮಗು, ಇನ್ನೊಂದು ಕೋಣೆಯಲ್ಲಿ ಮಗಳು ಅಳಿಯ ಮೊಮ್ಮಗು ಮಲಗಿದಾರೆ.
ನಡುರಾತ್ರಿಯಲ್ಲಿ ಮಗಳ ಮಗು ಎದ್ದು ಅಳೋಕೆ ಶುರುಮಾಡ್ತದೆ. ಅಳಿಯ ಎದ್ದು ಮಗುವನ್ನು ಸಮಾಧಾನಿಸಿ ಮಲಗಿಸುತ್ತಾನೆ. ಈ ತಾಯ್ತಂದೆಯ ಮಾತು "ಎಂತಹ ಪುಣ್ಯ ಮಾಡಿದೇವೆ ನಾವು ಇಂತಹ ಅಳಿಯನನ್ನು ಪಡೆಯೋಕೆ! ಇನ್ನು ಈ ಜೀವಕ್ಕೆ ನೆಮ್ಮದಿ. ಅವಳಿಗೆ ಸ್ವಲ್ಪವೂ ತೊಂದರೆ ಆಗದಂತೆ ನೋಡ್ಕೋತಾ ಇದಾನೆ ನಮ್ಮ ಅಳಿಯ"
ಕೆಲವು ಸಮಯದ ನಂತರ ಮಗನ ಮಗುವೂ ಅಳ್ತದೆ. ಮಗ ಎದ್ದು ಮಗುವನ್ನು ಸಮಾಧಾನಿಸುತ್ತಾನೆ. ತಾಯ್ತಂದೆಯ ಮಾತು "ಎಂತಹ ಸೋಂಬೇರಿ ನಮ್ಮ ಸೊಸೆ. ಒಂದು ಮಗುವನ್ನೂ ಎದ್ದು ಸಮಾಧಾನ ಮಾಡೋಕಾಗೊಲ್ಲವಾ? ಇವಳಿಗೆ ಯಾಕೆ ಸಂಸಾರ? ಇವನಂತೂ ಅವಳ ಗುಲಾಮ ಆಗಿದಾನೆ. ಅವನ ದುರದೃಷ್ಟ ಏನ್ಮಾಡೋದು!"
ಘಟನೆಯೊಂದೇ ನೋಡುವ ದೃಷ್ಟಿಕೋನ ಬೇರೆ....ಮನೆಯಿಂದ ಹಿಡಿದು ರಾಷ್ಟ್ರದ ಆಡಳಿತದ ವಿಷಯದವರೆಗೂ ಬಹುಪಾಲು ಜನರ ಮಾತು ಇದೇಯೇ....ಒಂದೇ ರೀತಿಯ ಕೆಲಸ, ಘಟನೆ. ಪ್ರತಿಕ್ರಿಯೆ ಮಾತ್ರ ನಮಗೆ ಬೇಕಾದವರ ವಿಷಯದಲ್ಲಿ ಒಂದು ಬೇಡವಾದವರ ವಿಷಯದಲ್ಲಿ ಇನ್ನೊಂದು!!
No comments:
Post a Comment