Saturday 14 January 2017

*ಅಹಂಕಾರದ ಬಗ್ಗೆ ಶ್ರೀ ಶಂಕರಾಚಾರ್ಯರ ನೀತಿ ಪಾಠ…*


ಅಹಂಕಾರ ಅಳಿಯದ ಹೊರತು ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ. ‘ನಾ’, ‘ನಾನು’, ‘ನಾನೇ’, ‘ನನ್ನ’, ‘ನನಗೆ’, ‘ನನ್ನನ್ನು’, ‘ನನ್ನಿಂದ’ ಎನ್ನುವ ಪದಗಳು ಕೇವಲ ಅಹಂಕಾರ ಸೂಚಕವಾಗಿವೆ. ನಮ್ಮ ಎಲ್ಲ ಬಯಕೆಗಳೂ ಆ ಅಹಂಕಾರವನ್ನು ತಣಿಸಿಕೊಳ್ಳುವುದಕ್ಕಾಗಿಯೇ ಇರುತ್ತವೆ. ಎಲ್ಲಿಯ ತನಕ ನಮ್ಮನ್ನು ನಾವು ಈ ಜಗತ್ತಿನಲ್ಲಿರುವ ವಸ್ತು, ವಿಷಯ ಮತ್ತು ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ, ಅಲ್ಲಿಯ ತನಕ ಅಹಂಕಾರ ಹೋಗುವುದೇ ಇಲ್ಲ.

ಶಂಕರಾಚಾರ್ಯರ ನೀತಿ ಪಾಠ :

ಒಮ್ಮೆ ಶಂಕರಾಚಾರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ಮುಂದೆ ನಡೆಯುತ್ತಾ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು. ಆಗ ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತ ‘ಆಚಾರ್ಯರೆ, ನಿಮ್ಮ ಜ್ಞಾನವು ಎಷ್ಟು ಅಗಾಧವಾಗಿದೆ! ನಮ್ಮ ಮುಂದೆ ಪವಿತ್ರ ಅಲಕನಂದಾ ನದಿಯು ಹರಿಯುತ್ತಿದೆ. ನಿಮ್ಮ ಜ್ಞಾನವು ಈ ಅಲಕನಂದಾ ನದಿಯ ಪ್ರವಾಹಕ್ಕಿಂತಲೂ ಎಷ್ಟೋ ಪಟ್ಟು ದೊಡ್ಡದಾಗಿರುವ ಆ ಮಹಾಸಾಗರದಂತೆ ಭಾಸವಾಗುತ್ತದೆ‘.

ಆಗ ಶಂಕರಾಚಾರ್ಯರು ಕೈಯಲ್ಲಿರುವ ದಂಡವನ್ನು ನೀರಿನಲ್ಲಿ ಮುಳುಗಿಸಿ ಹೊರತೆಗೆದರು. ಶಿಷ್ಯರಿಗೆ ತೋರಿಸಿ ಹೀಗೆ ಹೇಳಿದರು, ‘ನೋಡು, ಈ ದಂಡವನ್ನು ಆ ಪವಿತ್ರ ನದಿಯಲ್ಲಿ ಅಡ್ಡಿ ತೆಗೆದಿದ್ದೇನೆ. ಆದರೆ ಇದಕ್ಕೆ ಒಂದೇ ಒಂದು ಹನಿ ನೀರು ಮಾತ್ರ ಅಂಟಿಕೊಂಡಿದೆ ಅಲ್ಲವೇ!’ ನಗುತ್ತಲೇ ಶಂಕರಾಚಾರ್ಯರು ಮುಂದುವರಿಸಿದರು. ‘ಅರೆ ಹುಚ್ಚ, ನನ್ನ ಜ್ಞಾನದ ಪರಿಮಿತಿ ಏನು ಗೊತ್ತೇ? ಅಲಕನಂದೆಯಲ್ಲಿ ಎಷ್ಟೊಂದು ನೀರಿದೆ! ಆದರೆ ಅದಷ್ಟೂ ನೀರಿನಲ್ಲಿ ಈ ದಂಡವನ್ನು ಅಂಟಿಕೊಂಡಿದ್ದು ಕೇವಲ ಒಂದು ಬಿಂದು! ಅಂತಯೇ ಸಮಸ್ತ ಬ್ರಹ್ಮಾಂಡದಲ್ಲಿರುವ ಜ್ಞಾನಸಾಗರದಲ್ಲಿ ನನ್ನಲ್ಲಿರುವ ಕೇವಲ ಒಂದು ಬಿಂದು ಜ್ಞಾನವಷ್ಟೆ.

ಮಿತ್ರರೇ, ಆದಿ ಶಂಕರಾಚಾರ್ಯರೇ ತಮ್ಮಲ್ಲಿರುವ ಅಗಾಧ ಜ್ಞಾನದ ಬಗ್ಗೆ ಹೀಗೆ ಹೇಳಿರಬೇಕಾದರೆ, ನಾವು ನೀವು ಏನು ಹೇಳುವುದು?

ಇದರ ತಾತ್ಪರ್ಯ: 
ಯಾವುದೇ ವಿಷಯದ ಬಗ್ಗೆ ಅಹಂಕಾರ ಬೇಡ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...